22 ವರ್ಷದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕದ ಸಾಹಸದಿಂದ ಟೀಮ್‌ ಇಂಡಿಯಾ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ತಂಡದ ಗೆಲುವಿಗೆ 220 ರನ್‌ ಬೃಹತ್‌ ಗುರಿ ನೀಡಿದೆ.

ಸೆಂಚುರಿಯನ್‌ (ನ.13): 22 ವರ್ಷದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ್ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಹೈದರಾಬಾದ್‌ ಮೂಲಕದ ಬ್ಯಾಟ್ಸ್‌ಮನ್‌ ಬಾರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕದ ಸಾಹಸದಿಂದ ಟೀಮ್‌ ಇಂಡಿಯಾ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ತಂಡದ ಗೆಲುವಿಗೆ 220 ರನ್‌ ಬೃಹತ್‌ ಗುರಿ ನೀಡಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವು ಕಂಡಿದ್ದು, ಸರಣಿಯಲ್ಲಿ ಮುನ್ನಡೆ ಕಾಣುವ ನಿಟ್ಟಿನಲ್ಲಿ ಈ ಪಂದ್ಯ ಪ್ರಮಖವಾಗಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಬಾರಿಸಿದ ಭಾರತದ 2ನೇ ಕಿರಿಯ ಬ್ಯಾಟ್ಸ್‌ಮನ್‌ ಎನ್ನುವ ಶ್ರೇಯವೂ ಇವರದಾಗಿದೆ. 22 ವರ್ಷ 5ನೇ ದಿನದಲ್ಲಿ ತಿಲಕ್‌ ವರ್ಮ ಶತಕ ಸಿಡಿಸಿದ್ದರೆ, 21 ವರ್ಷ 279ನೇ ದಿನದಲ್ಲಿ ಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತಿಲಕ್‌ ವರ್ಮ ಜೊತೆಗೆ ಅಬ್ಬರಿಸಿದ ಯುವ ಬ್ಯಾಟ್ಸ್‌ಮನ್‌ ಅಭಿಷೇಕ್‌ ವರ್ಮ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದ 50 ರನ್‌ ಸಿಡಿಸಿದರು.

50 ಎಸೆತಗಳಲ್ಲಿ ಚೊಚ್ಚಲ ಶತಕ ಬಾರಿಸಿದ ತಿಲಕ್‌ ವರ್ಮ 56 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳೊಂದಿಗೆ ಕೊನೆಯವರೆಗೂ ಅಜೇಯವಾಗಿ ಉಳಿದಿದರು. ಇವರ ಏಳು ಸಿಕ್ಸರ್‌ಗಳು ಎಷ್ಟು ಅದ್ಭುತವಾಗಿತ್ತೆಂದರೆ, ಮೈದಾನದ ಮೂಲೆಮೂಲೆಗೂ ಇದು ತಲುಪಿದವು.

Bengaluru: ಬಿಸಿಡಿ ಗ್ರೂಪ್‌ನಿಂದ 500 ಕೋಟಿ ವೆಚ್ಚದಲ್ಲಿ ಟೌನ್‌ಶಿಪ್‌, ಎಲ್ಲಾ 900 ಫ್ಲ್ಯಾಟ್‌ ಭೋಗ್ಯಕ್ಕೆ ಪಡೆದ ಫಾಕ್ಸ್‌ಕಾನ್‌!

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 2ನೇ ಎಸೆತದಲ್ಲಿಯೇ ಸಂಜು ಸ್ಯಾಮ್ಸನ್‌ ವಿಕೆಟ್‌ ಕಳೆದುಕೊಂಡಿತು. ಆ ಬಳಿಕ ಅಭಿಷೇಕ್‌ ವರ್ಮಗೆ ಜೊತೆಯಾದ ತಿಲಕ್‌ ವರ್ಮ 2ನೇ ವಿಕೆಟ್‌ಗೆ 107 ರನ್‌ಗಳ ವೇಗದ ಜೊತೆಯಾಟವಾಡಿದರು.ಸಿಕ್ಸರ್‌ಗಳ ಮೂಲಕವೇ ಈ ಜೋಡಿ ಅಬ್ಬರಿಸಿದ್ದರಿಂದ ಭಾರತ ತಂಡ 6 ವಿಕೆಟ್‌ಗೆ 219 ರನ್‌ ಬಾರಿಸಲು ಸಾಧ್ಯವಾಯಿತು.

ನಾಲ್ಕು ವರ್ಷದ ಹಿಂದೆ 3 ರೂಪಾಯಿ ಇದ್ದ ಷೇರಿನ ಬೆಲೆ ಇಂದು 1,412 ರೂಪಾಯಿ!