Asianet Suvarna News Asianet Suvarna News

ಏಟಿಗೆ ಎದಿರೇಟು, ಕೊಹ್ಲಿ ಎದುರಿನಿಂದಲೇ ಮುಖ ತಿರುಗಿಸಿ ಹೋದ ಸೌರವ್ ಗಂಗೂಲಿ, ವಿಡಿಯೋ ವೈರಲ್!

ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಬಹಿರಂಗವಾಗಿದೆ. ಗಂಗೂಲಿಗೆ ಶೇಕ್‌ಹ್ಯಾಂಡ್ ಮಾಡದೇ ಕಣಡೆಗಣಿಸಿದ ವಿಡಿಯೋ, ಗುರಾಯಿಸಿದ ನೋಡಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಕಡೆಗಣಿಸಿದ ಕೊಹ್ಲಿ ಗಂಗೂಲಿ ತಿರುಗೇಟು ನೀಡಿದ ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಎದುರಿಗೇ ಕುಳಿತಿದ್ದರೆ, ಗಂಗೂಲಿ ಮುಖು ತಿರುಗಿಸಿ ಹೋದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
 

Tick for tack Sourav ganguly ignore virat Kohli during RCB vs DC match unseen video viral ckm
Author
First Published Apr 17, 2023, 6:14 PM IST

ಬೆಂಗಳೂರು(ಏ.17):  ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಜಟಾಪಟಿ ಈಗಾಲೇ ಭಾರಿ ಸಂಚಲನ ಸೃಷ್ಟಿಸಿದೆ. ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿಕೊಹ್ಲಿ ಹಳೇ ಸೇಡಿಗೆ ತಿರುಗೇಟು ನೀಡಿದ್ದರು. ಫೀಲ್ಡಿಂಗ್ ವೇಳೆ ಗಂಗೂಲಿ ಗುರಾಯಿಸಿದರೆ, ಗೆದ್ದ ಬಳಿಕ ಶೇಕ್‌ಹ್ಯಾಂಡ್ ಮಾಡದೆ ಕಡೆಗಣಿಸಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಕೊಹ್ಲಿಗೆ ಗಂಗೂಲಿ ತಿರುಗೇಟು ನೀಡಿದ ವಿಡಿಯೋ ವೈರಲ್ ಆಗಿದೆ. ಟಾಸ್ ಬಳಿಕ ಬ್ಯಾಟಿಂಗ್ ಇಳಿಯಲು ಸಜ್ಜಾಗಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್‌ನಲ್ಲಿ ಕುಳಿತಿದ್ದರು. ಇತ್ತ ಡೆಲ್ಲಿ ತಂಡ ಫೀಲ್ಡಿಂಗ್‌ಗಾಗಿ ಮೈದಾನಕ್ಕಿಳಿದಿತ್ತು. ಈ ವೇಳೆ ಸೌರವ್ ಗಂಗೂಲಿ, ಎದುರಿಗೆ ಕೊಹ್ಲಿ ಕುಳಿತಿದ್ದರೂ, ಮುಖ ತಿರುಗಿಸಿ ಸಾಗಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಡೆಲ್ಲಿ ವಿರುದ್ಧ ಆರ್‌ಸಿಬಿ ಟಾಸ್ ಸೋತು ಬ್ಯಾಟಿಂಗ್ ಇಳಿದಿತ್ತು. ಇತ್ತ ವಿರಾಟ್ ಕೊಹ್ಲಿ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಇಳಿಯಲು ಸಜ್ಜಾಗಿದ್ದರು. ಪೆವಿಲಿಯನ್‌ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ನೋಡಿಯೂ ನೋಡದ ರೀತಿಯಲ್ಲಿ ಗಂಗೂಲಿ ತೆರಳಿದ್ದಾರೆ. ಕೈಯಲ್ಲಿದ್ದ ನೀರಿನ ಬಾಟಲಿ ತೆರೆದು ನೀರು ಕುಡಿಯುತ್ತಾ ಕೊಹ್ಲಿಯನ್ನು ಕಡೆಗಣಿಸಿ ಮುಂದೆ ಸಾಗಿದ್ದಾರೆ. ಇತ್ತ ಕೊಹ್ಲಿ ಗಂಗೂಲಿಯನ್ನೇ ನೋಡಿದ್ದಾರೆ. ಆದರೆ ಗಂಗೂಲಿ ಮುಖ ತಿರುಗಿಸಿ ಸಾಗಿದ್ದಾರೆ.

 

 

ಕೊಹ್ಲಿ ಗಂಗೂಲಿ ಜಟಾಪಟಿ ಬಹಿರಂಗ, ಗುರಾಯಿಸಿ, ಶೇಕ್‌ಹ್ಯಾಂಡ್ ಮಾಡದೇ ತೆರಳಿದ ವಿರಾಟ್!

ಗಂಗೂಲಿ ಬೆನ್ನಲ್ಲೇ ಬಂದ ಡೆಲ್ಲಿ ತಂಡದ ಆಟಗಾರರ ಕೊಹ್ಲಿ ನೋಡಿ ಮಾತನಾಡಿದ್ದಾರೆ. ಕೆಲವರು ಸ್ಮೈಲ್ ಮಾಡಿ ಮುಂದೆ ಸಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದಾದ ಬಳಿಕ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಡೆಲ್ಲಿ ಬ್ಯಾಟ್ಸ್‌ಮನ್ ಅಮನ್ ಹಕೀಮ್ ಖಾನ್  ಕ್ಯಾಚ್ ಹಿಡಿದು ಡಗೌಟ್‌ನಲ್ಲಿ ಕುಳಿತಿದ್ದ ಗಂಗೂಲಿಯನ್ನು ಗುರಾಯಿಸಿದರು. 

ಪಂದ್ಯದಲ್ಲಿ ಆರ್‌ಸಿಬಿ 23 ರನ್ ಗೆಲುವು ದಾಖಲಿಸಿತ್ತು. ಈ ವೇಳೆ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಸಿಬ್ಬಂದಿಗಳ ಕೈಕುಲುಕಿದರು. ಆದರೆ ಸೌರವ್ ಗಂಗೂಲಿಗೆ ಶೇಕ್‌ಹ್ಯಾಂಡ್ ಮಾಡದೇ ತೆರಳಿದ್ದಾರೆ. ಇತ್ತ ರಿಕಿ ಪಾಂಟಿಂಗ್ ಕೊಹ್ಲಿಯನ್ನು ನಿಲ್ಲಿಸಿದರೂ ಗಂಗೂಲಿಯತ್ತ ತಿರುಗಿ ನೋಡಿಲ್ಲ. ಕೊಹ್ಲಿ ತಮ್ಮನ್ನು ಕಡೆಗಣಿಸುತ್ತಿರುವುದು ಅರಿತ ಗಂಗೂಲಿ ಮೆಲ್ಲನೆ ಮುಂದೆ ಸಾಗಿ ಆರ್‌ಸಿಬಿಯ ಇತರ ಆಟಗಾರರಿಗೆ ಶೇಕ್‌ಹ್ಯಾಂಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಸೌರವ್ ಗಂಗೂಲಿ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ..! ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಕೊಹ್ಲಿ ಜಿದ್ದು!

ಕೊಹ್ಲಿ ಹಾಗೂ ಗಂಗೂಲಿ ನಡುವಿನ ಜಟಾಪಟಿಗೆ ಇತಿಹಾಸವೂ ಇದೆ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ನಡೆದ ವೈಮನಸ್ಸು ಮುಂದುವರಿದಿದೆ. ಕೊಹ್ಲಿ ನಾಯಕತ್ವ ತ್ಯಜಿಸಲು ಗಂಗೂಲಿ ಕಾರಣ ಅನ್ನೋ ಮಾತಿದೆ. ಅಲ್ಲಿಂದ ಆರಂಭಗೊಂಡ ಜಟಾಪಟಿ ಇದೀಗ ಮುಖ ನೋಡಿಕೊಳ್ಳದ ಮಟ್ಟಿಗೆ ತಲುಪಿದೆ. ಇದರ ನಡುವೆ ಕೊಹ್ಲಿಯನ್ನು ಕಡೆಗಣಿಸಿದ ವಿಡಿಯೋ ಬಾರಿ ಸಂಚಲನ ಸೃಷ್ಟಿಸಿದೆ. ಇತ್ತ ಗಂಗೂಲಿ ಅಭಿಮಾನಿಗಳು ಈ ನಡೆಯನ್ನು ಸಮರ್ಥಿಸಿಕೊಂಡಿದ್ದರೆ, ಕೊಹ್ಲಿ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios