Asianet Suvarna News Asianet Suvarna News

ಇದು ನನ್ನ ಕೊನೆಯ ಬರ್ತ್‌ಡೆ ವಿಶ್, ಧೋನಿ ಹುಟ್ಟುಹಬ್ಬಕ್ಕೆ ಅಶ್ವಿನ್ ಗೂಗ್ಲಿ ಶುಭಾಶಯ!

ಮಾಜಿ ನಾಯಕ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ. ಹಲವು ದಿಗ್ಗಜರು ಧೋನಿಗೆ ಶುಭಾಶಯ ಕೋರಿದ್ದಾರೆ. ಆದರೆ ಸ್ಪಿನ್ನರ್ ಆರ್ ಅಶ್ವಿನ್ ವಿಶ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಇದು ನನ್ನ ಕೊನೆಯ ಬರ್ತ್‌ಡೆ ವಿಶ್ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಆರ್ ಅಶ್ವಿನ್ ಹೇಳಿದ್ದೇನು?

This will be my last birthday wish Team India spinner  R Ashiwn hilarious wish to MS DHoni ckm
Author
First Published Jul 7, 2023, 9:37 PM IST

ನವದೆಹಲಿ(ಜು.07) ಟೀಂ ಇಂಡಿಯಾ ಮಾಜಿ ನಾಯಕ, ಐಸಿಸಿಯ ಎಲ್ಲಾ ಟ್ರೋಫಿ ಗೆದ್ದ ಅಪರೂಪದ ಕ್ರಿಕೆಟಿಗ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಧೋನಿ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಧೋನಿಗ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು, ಸೆಲೆಬ್ರೆಟಿಗಳು, ದಿಗ್ಗಜರು ಧೋನಿಗೆ ಶುಭಾಶ ಕೋರಿದ್ದಾರೆ. ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಧೋನಿಗೆ ಶುಭಕೋರಿದ್ದಾರೆ. ಆದರೆ ಟ್ವೀಟ್‌ನಲ್ಲಿ ಇದು ನನ್ನ ಕೊನೆಯ ಬರ್ತ್‌ಡೇ ವಿಶ್ ಎಂದು ಅಶ್ವಿನ್ ಹೇಳಿದ್ದಾರೆ.

ಆರ್ ಅಶ್ವಿನ್ ಟ್ವೀಟ್‌ನಲ್ಲಿ ಇಷ್ಟು ಮಾತ್ರವಲ್ಲ. ಶುಭಾಶಯದ ಜೊತೆಗೆ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಮುಖ್ಯವಾಗಿ ಟ್ರೋಲಿಗರು ಉಪಟಳದಿಂದ ತಪ್ಪಿಸಿಕೊಳ್ಳಲು ಆರ್ ಅಶ್ವಿನ್ ಹೊಸ ತಂತ್ರ ಉಪಯೋಗಿಸಿ ಧೋನಿಗೆ ವಿಶ್ ಮಾಡಿದ್ದಾರೆ. ತಮ್ಮ ಟ್ವೀಟ್‌ನ ಮೊದಲ ಸಾಲಿನಲ್ಲೇ ಅಶ್ವಿನ್, ಜುಲೈ 7 ರಂದು ಮಹಾನ್ ವ್ಯಕ್ತಿಗೆ ಜನ್ಮದಿನದ ಶುಭಾಶಯ ಕೋರದೆ ಟ್ವೀಟ್ ಮಾಡುವುದು ಅತೀ ದೊಡ್ಡ ದುರಂತ ಎಂದು ಸಾಬೀತುಮಾಡಬಹುದು.  ಹುಟ್ಟು ಹಬ್ಬದ ಶುಭಾಶಯ ಮಾಹಿ ಭಾಯ್ ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

Happy Birthday MSD: ಕ್ಯಾಪ್ಟನ್ ಕೂಲ್ ಧೋನಿಯ 7 ಫೇಮಸ್‌ ಕೋಟ್‌ಗಳಿವು..!

ಇದರ ಕೆಳಗಿನ ಸಾಲಿನಲ್ಲಿ ಆರ್ ಅಶ್ವಿನ್, ಟ್ವಿಟರ್‌ನಲ್ಲಿ ಇದು ನನ್ನ ಕೊನೆಯ ಹುಟ್ಟುಹಬ್ಬದ ಶುಭಾಶಯಾವಾಗಿದೆ. ಕಾರಣ ನಾನು ನೇರವಾಗಿ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸುವ ನನ್ನ ನಡೆಗೆ ಬದ್ಧವಾಗಿರುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೆ ಅಶ್ವಿನ್ ಟ್ವೀಟ್ ಮುಗಿದಿಲ್ಲ. ಇದು ಎಲ್ಲಾ ಗಾಸಿಪ್ ಮಾಡುವವರಿಗೆ ಹಾಗೂ  ಸುದ್ದಿ ಸ್ಪಿನ್ನರ್ಸ್‌ಗೆ ಎಂದು ಅಶ್ವಿನ್ ಹೇಳಿದ್ದಾರೆ. 

ಧೋನಿಗೆ ಶುಭಕೋರುವ ಸಂದರ್ಭದಲ್ಲಿ ಅಶ್ವಿನ್ ಟ್ರೋಲರ್ಸ್‌ನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಟ್ವೀಟ್ ಮಾಡಿದ್ದಾರೆ. ಹುಟ್ಟು ಹಬ್ಬದ ಶುಭಾಶಯ ಕೋರಲು ತೋರಿಕೆಗಾದರೂ ಟ್ವೀಟ್ ಮಾಡಬೇಕು. ಹೀಗೆ ಮಾಡದಿದ್ದರೆ ಟ್ರೋಲರ್ಸ್ ಹೊಸ ಕತೆ ಕಟ್ಟಿ ಮುನಿಸು, ಬಿರುಕು ಎಂದು ಹಬ್ಬಿಸಿಬಿಡುತ್ತಾರೆ ಅನ್ನೋ ಅರ್ಥದಲ್ಲಿ ಅಶ್ವಿನ್ ಟ್ವೀಟ್ ಮಾಡಿದ್ದಾರೆ.  ಆರ್ ಅಶ್ವಿನ್ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ.

 

 

ಧೋನಿ ಹುಟ್ಟು ಹಬ್ಬಕ್ಕೆ ಹಲವರು ವಿಶೇಷವಾಗಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್, ಹೆಲಿಕಾಪ್ಟರ್ ಶಾಟ್ ರೀತಿ ಧೋನಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದ್ದಾರೆ. 7ನೇ ತಿಂಗಳಿನ 7ನೇ ತಾರಿಖು ಎಂದು ಸೆಹ್ವಾಗ್ ವಿಶೇಷಾಗಿ ಶುಭಕೋರಿದ್ದಾರೆ.

MS Dhoni @42: ಕ್ಯಾಪ್ಟನ್ ಕೂಲ್ ಧೋನಿಗೆ ಶುಭಕೋರಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರವೀಂದ್ರ ಜಡೇಜಾ..! 

ಜುಲೈ 7, 1981ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಹುಟ್ಟಿದ ಧೋನಿ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆ ಬರೆದ ನಾಯಕ. 2007ರಲ್ಲಿ ಟಿ20 ವಿಶ್ವಕಪ್ ಟ್ರೋಫಿ, 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಮೂಲಕ ಐಸಿಸಿಯ ಮೂರು ಪ್ರಶಸ್ತಿ ಪಡೆದುಕೊಂಡ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಏಷ್ಯಾಕಪ್, ಕಾಮನ್‌ವೆಲ್ತ್ ಸೀರಿಸಿ, ದ್ವಿಪಕ್ಷೀಯ ಸರಣಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ನಾಯಕ. ಐಪಿಎಲ್ ಟೂರ್ನಿಯಲ್ಲಿ 5 ಬಾರಿ ಟ್ರೋಫಿ ಗೆದ್ದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 

Follow Us:
Download App:
  • android
  • ios