ಗುಜರಾತ್ ಟೈಟಾನ್ಸ್ ಫೈನಲ್ಗೇರಿಸಿ ರಾಜಸ್ಥಾನ ರಾಯಲ್ಸ್ ಬಳಿ ಮಿಲ್ಲರ್ ಕ್ಷಮೆಯಾಚಿಸಿದ್ದೇಕೆ..?
* 15ನೇ ಆವೃತ್ತಿಯ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್
* ರಾಜಸ್ಥಾನ ರಾಯಲ್ಸ್ ಪಾಲಿಗೆ ವಿಲನ್ ಆಗಿ ಕಾಡಿದ ಡೇವಿಡ್ ಮಿಲ್ಲರ್
* ಗುಜರಾತ್ ಪಾಲಿಗೆ ಹೀರೋ ಆಗಿ ಪರಿಣಮಿಸಿದ ಕಿಲ್ಲರ್ ಮಿಲ್ಲರ್
ಮುಂಬೈ(ಮೇ.26): ಡೇವಿಡ್ ಮಿಲ್ಲರ್. ಸದ್ಯ IPLನಲ್ಲಿ ಮಿಂಚಿನ ಸಂಚಲನವುಂಟು ಮಾಡುತ್ತಿರುವ ಹೆಸರು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ, ಗುಜರಾತ್ ಟೈಟನ್ಸ್ ಫೈನಲ್ ಪ್ರವೇಶಿಸಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ಬ್ಯಾಟರ್ ಡೇವಿಡ್ ಮಿಲ್ಲರ್ (David Miller) ಸ್ಫೋಟಕ ಬ್ಯಾಟಿಂಗ್. ಜಸ್ಟ್ 38 ಬಾಲ್ನಲ್ಲಿ 3 ಬೌಂಡ್ರಿ, 5 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿ, ಗುಜರಾತ್ ತಂಡವನ್ನ ಫೈನಲ್ಗೆ ಕೊಂಡೊಯ್ದರು. ಕಿಲ್ಲರ್ ಮಿಲ್ಲರ್ ಬ್ಯಾಟಿಂಗ್ಗೆ ರಾಜಸ್ಥಾನ ರಾಯಲ್ಸ್ ಧೂಳಿಪಟವಾಯ್ತು. ಆ ಹ್ಯಾಟ್ರಿಕ್ ಸಿಕ್ಸರ್ಗಳಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪಂದ್ಯ ಮುಗಿದರೂ ಸಿಕ್ಸರ್ಗಳ ಮಾತು ಮುಗಿಯುತ್ತಿಲ್ಲ. ಹ್ಯಾಟ್ರಿಕ್ ಸಿಕ್ಸರ್ಗಳದ್ದೇ ಎಲ್ಲೆಲ್ಲೂ ಮಾತು.
ಅಂದು ಎಬಿಡಿ-ಫಾಫ್, ಇಂದು ಮಿಲ್ಲರ್ ಕಿಲ್ಲರ್:
ಐಪಿಎಲ್ನ ಫಸ್ಟ್ ಕ್ವಾಲಿಫೈಯರ್ ಪಂದ್ಯಗಳಲ್ಲಿ ಸೌತ್ ಆಫ್ರಿಕನ್ ಪ್ಲೇಯರ್ಸ್ ಆರ್ಭಟಿಸಿದ್ದಾರೆ. 2016ರಲ್ಲಿ ಎಬಿ ಡಿವಿಲಿಯರ್ಸ್ (AB de Villiers) 47 ಬಾಲ್ನಲ್ಲಿ 79 ರನ್ ಬಾರಿಸಿ ಆರ್ಸಿಬಿ ತಂಡವನ್ನ ಫೈನಲ್ಗೇರಿಸಿದ್ದರು. 2018ರಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ಸ್ಫೋಟಕ ಬ್ಯಾಟಿಂಗ್ ಮಾಡಿ 42 ಎಸೆತದಲ್ಲಿ 67 ರನ್ ಸಿಡಿಸಿ, ಸಿಎಸ್ಕೆ ತಂಡವನ್ನ ಫೈನಲ್ಗೆ ಕರೆದುಕೊಂಡು ಹೋಗಿದ್ದರು. ಈ ಸಲ ಡೇವಿಡ್ ಮಿಲ್ಲರ್, ಕಿಲ್ಲರ್ ಬ್ಯಾಟಿಂಗ್ನಿಂದ ಗುಜರಾತ್ ಫೈನಲ್ಗೇರಿದೆ. ಈ ಮೂವರು ಆಫ್ರಿಕನ್ ಪ್ಲೇಯರ್ಸ್, ಸ್ಫೋಟಕ ಬ್ಯಾಟಿಂಡ್ ಮಾಡಿ ತಮ್ಮ ತಂಡಗಳನ್ನ ಫೈನಲ್ಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರಿ ರಾಯಲ್ಸ್ ಫ್ಯಾಮಿಲಿ:
ಮೊನ್ನೆ ಫಸ್ಟ್ ಕ್ವಾಲಿಫೈಯರ್ ಪಂದ್ಯ ಮುಗಿದ ನಂತರ ಮಧ್ಯರಾತ್ರಿ 1.09ಕ್ಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಡೇವಿಡ್ ಮಿಲ್ಲರ್, ಸಾರಿ ರಾಯಲ್ಸ್ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಮಿಲ್ಲರ್ ಕ್ಷಮೆ ಕೇಳಲು ಕಾರಣವೇನು ಗೊತ್ತಾ..? ರಾಜಸ್ಥಾನ್ ರಾಯಲ್ಸ್ ಪರ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಮಿಲ್ಲರ್ ಆಡಿದ್ದರು. ತಾನು ಪ್ರತಿನಿಧಿಸಿದಂತಹ ತಂಡದ ವಿರುದ್ಧವೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಫೈನಲ್ ಪ್ರವೇಶಿಸುವ ಮೊದಲ ಅವಕಾಶವನ್ನು ಕೈತಪ್ಪಿದ ಕಾರಣಕ್ಕೆ ಕ್ಷಮೆಯಾಚಿಸಿದ್ದಾರೆ. ಸದ್ಯ ತನ್ನ ಹಳೆ ಫ್ರಾಂಚೈಸಿಯ ಕ್ಷಮೆಯಾಚಿಸಿ ಡೇವಿಡ್ ಮಿಲ್ಲರ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
IPL 2022 ಅಂತಿಮ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್, ರಾಜಸ್ಥಾನ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್!
ಅನ್ಸೋಲ್ಡ್ ಆದವನಿಗೆ ಗುಜರಾತ್-ರಾಜಸ್ಥಾನ ಫೈಟ್:
ಐಪಿಎಲ್ನಲ್ಲಿ ಡೇವಿಡ್ ಮಿಲ್ಲರ್ ಸಾಧನೆ ಹೇಳಿಕೊಳ್ಳುವಂತದ್ದೇನು ಇಲ್ಲ. ಹಾಗಾಗಿಯೇ ಈ ಸಲದ ಬಿಡ್ನ ಮೊದಲ ದಿನ ಡೇವಿಡ್ ಮಿಲ್ಲರ್ ಅನ್ ಸೋಲ್ಡ್ ಆಗಿದ್ದರು. ಆದರೆ 2ನೇ ದಿನ ಡೇವಿಡ್ ಬೇಕು ಅಂತ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಫ್ರಾಂಚೈಸಿ ಒತ್ತಾಯಿಸಿದ್ದರಿಂದ ಮತ್ತೆ ಬಿಡ್ಗೆ ಇಡಲಾಗಿತ್ತು. ಕೊನೆಗೆ ಮೂರು ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದ್ರು. ರಾಜಸ್ಥಾನಕ್ಕೆ ವಿಲನ್ ಆಗಿ ಗುಜರಾತ್ ಪಾಲಿಗೆ ಹೀರೋ ಆದ್ರು ಮಿಲ್ಲರ್. 15 ಪಂದ್ಯಗಳಿಂದ 449 ರನ್ ಬಾರಿಸಿರೋ ಡೇವಿಡ್ಗೆ ಮೂರು ಕೋಟಿ ಕೊಟ್ಟಿದ್ದಕ್ಕೂ ಸಾರ್ಥಕವಾಯ್ತು.