ಗುಜರಾತ್ ಹಾಗೂ ರಾಜಸ್ಥಾನ ನಡುವಿನ 1ನೇ ಕ್ವಾಲಿಫೈಯರ್ ಪಂದ್ಯ ರೋಚಕ ಪಂದ್ಯದಲ್ಲಿ 7 ವಿಕೆಟ್ ಗೆಲುವು ಸಾಧಿಸಿದ ಗುಜರಾತ್ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್

ಕೋಲ್ಕತಾ(ಮೇ.24): ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಹೋರಾಟ, ಒಮ್ಮೆ ರಾಜಸ್ಥಾನ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಗುಜರಾತ್ ಟೈಟಾನ್ಸ್‌ಗೆ ಯಶಸ್ಸು. ಕೊನೆಯ ಓವರ್ ವರೆಗೂ ಪಂದ್ಯ ತನ್ನ ರೋಚಕತೆ ಹೆಚ್ಚಿಸುತ್ತಲೇ ಸಾಗಿತು. ಆದರೆ ಅಂತಿಮ ಓವರ್‌ ಆರಂಭಿಕ 3 ಎಸೆತದಲ್ಲಿ ಡೇವಿಡ್ ಮಿಲ್ಲರ್ ಹ್ಯಾಟ್ರಿಕ್ ಸಿಡಿಸಿ ಗುಜರಾತ್ ಟೈಟಾನ್ಸ್‌ಗೆ 7 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ರೋಚಕ ಗೆಲುವಿನಿಂದ ಗುಜರಾತ್ ಟೈಟಾನ್ಸ್ ಐಪಿಎಲ್ 2022ರ ಫೈನಲ್ ಪ್ರವೇಶಿಸಿತು. ಚೊಚ್ಚಲ ಐಪಿಎಲ್ ಟೂರ್ನಿ ಆಡುತ್ತಿರುವ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆದಿತ್ತು. ಇದೀಗ ಮೊದಲ ತಂಡವಾಗಿ ಫೈನಲ್ ಪ್ರವೇಶ ಪಡೆದಿದೆ. 

ಗೆಲುವಿಗೆ 189 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ವೃದ್ಧಿಮಾನ್ ಸಾಹ ವಿಕೆಟ್ ಪತನಗೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಶುಬಮನ್ ಗಿಲ್ ಹಾಗೂ ಮಾಥ್ಯೂವೇಡ್ ಹೋರಾಟದಿಂದ ಗುಜರಾತ್ ಟೈಟಾನ್ಸ್ ಮತ್ತೆ ಪುಟಿದೆದ್ದಿತು. ಗಿಲ್ 21 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. 

IPL Playoffs ರದ್ದಾಗುವುದನ್ನು ತಡೆಯಲು ಬಿಸಿಸಿಐ ಮಾಸ್ಟರ್ ಪ್ಲಾನ್..!

ಮಾಥ್ಯೂ ವೇಡ್ 30 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಇವರಿಬ್ಬರ ವಿಕೆಟ್ ಪತನ ಮಧ್ಯಮಕ್ರಮಾಂಕದಲ್ಲಿ ಮೇಲೆ ಹೆಚ್ಚಿನ ಒತ್ತಡ ತಂದಿತು. ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟದಿಂದ ಗುದರಾತ್ ಮತ್ತೆ ಮೈಕೊಡವಿ ನಿಂತಿತು.

ಪಾಂಡ್ಯ ಹಾಗೂ ಮಿಲ್ಲರ್ ಹೋರಾಟ ಅತ್ತ ರಾಜಸ್ಥಾನ ಬೌಲರ್‌ಗಳೂ ಕೂಡ ಸಂಘಟಿತ ದಾಳಿಗೆ ಮುಂದಾದರು. ಹೀಗಾಗಿ ಪಂದ್ಯ ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವು ಪಡೆದುಕೊಳ್ಳಲು ಆರಂಭಿಸಿತು. ರನ್‌ರೇಟ್ ಒಮ್ಮೆ ಗುಜರಾತ್ ಪರ ಇದ್ದರೆ, ಮತ್ತೊಮ್ಮೆ ರಾಜಸ್ಥಾನ ಪರ ವಾಲುತ್ತಿತ್ತು.

ಗುಜರಾತ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 23 ರನ್ ಅವಶ್ಯಕತೆ ಇತ್ತು. 18ನೇ ಓವರ್‌ನಲ್ಲಿ ಗುಜರಾತ್ ಟೈಟಾನ್ಸ್ ಕೇವಲ 6 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಹೀಗಾಗಿ ಅಂತಿಮ 6 ಎಸೆತದಲ್ಲಿ ಗುಜರಾತ್ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಮಿಲ್ಲರ್ ಸಿಡಿಸಿದ ಹ್ಯಾಟ್ರಿಕ್ ಸಿಕ್ಸರ್ ಮೂಲಕ ಗುಜರಾತ್ ಟೈಟಾನ್ಸ್ ಇನ್ಮೂ 3 ಎಸೆತ ಬಾಕಿ ಇರುವಂತೆ 7 ವಿಕೆಟ್ ಗೆಲುವು ಕಂಡಿತು.

ಮೇ 29 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಪ್ರವೇಶ ಪಡೆದಿದೆ. ಇತ್ತ ಮುಗ್ಗರಿಸಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ರಾಜಸ್ಥಾನ ರಾಯಲ್ಸ್ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಪ್ರವೇಶಸಲಿದೆ.

IPL 2022 Playoffs: 3 ವರ್ಷಗಳ ಬಳಿಕ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ ಕಲರವ..!

ಪ್ಲೇ ಆಫ್ ಪಂದ್ಯದಲ್ಲಿ ಗರಿಷ್ಠ ಟಾರ್ಗೆಟ್ ಯಶಸ್ವಿಯಾಗಿ ಚೇಸ್ ಮಾಡಿದ ತಂಡ
200 ರನ್, ಕೆಕೆಆರ್ vs ಪಂಜಾಬ್, 2014
191 ರನ್ ಕೆಕೆಆರ್ vs ಚೆನ್ನೈ, 2012
189 ಗುಜರಾತ್ vs ರಾಜಸ್ಥಾನ, 2022