Asianet Suvarna News Asianet Suvarna News

ತನ್ನ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯ ಹಿಂಬಾಲಿಸಿ ಹೋಗಿ ಮಾತನಾಡಿಸಿದ ಸಚಿನ್‌: ವೀಡಿಯೋ ವೈರಲ್

ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ  ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

The cricket god sachin tendulkar speaks with his big fan riding a scooter wearing a t-shirt with Sachins name akb
Author
First Published Feb 4, 2024, 3:58 PM IST

ಕ್ರಿಕೆಟ್ ಹಾಗೂ  ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾರೆಯರಿಗೆ ತಮ್ಮದೇ ಆದ ಅಭಿಮಾನಿಗಳಿರುತ್ತಾರೆ. ತಮ್ಮ ನೆಚ್ಚಿನ ನಾಯಕಿ /ನಾಯಕಿಗಾಗಿ ಅಭಿಮಾನಿಗಳು ಏನೂ ಮಾಡಲು ಸಿದ್ಧರಿರುತ್ತಾರೆ. ಕೆಲವರು ದೇವಸ್ಥಾನ ಕಟ್ಟುತ್ತಾರೆ, ಇನ್ನು ಕೆಲವರು ದೇವರಂತೆ ಪೂಜೆ ಮಾಡುತ್ತಾರೆ. ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ವ್ಯಕ್ತಿಯ ಹುಟ್ಟುಹಬ್ಬದಂದು ರಕ್ತದಾನ ಮಾಡುತ್ತಾರೆ. ಬಡವರಿಗೆ ಹಣ್ಣು ಹಂಪಲು ನೀಡುತ್ತಾರೆ, ವೃದ್ಧಾಶ್ರಮಗಳಲ್ಲಿ ಸೇವೆ ಮಾಡುತ್ತಾರೆ ಹೀಗೆ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ಮೆರೆಯುತ್ತಾರೆ. ಹಾಗೆಯೇ ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಅಭಿಮಾನಕ್ಕೆ ಬೇರೆಯದೇ ಸ್ಥಾನವಿದೆ. ಅನೇಕರು ತಮ್ಮ ನೆಚ್ಚಿನ ನಾಯಕನ ಹೆಸರಿರುವ ಟೀ ಶರ್ಟ್ ಧರಿಸಿ ಆ ಮೂಲಕ ಅಭಿಮಾನ ಮೆರೆಯುವುದನ್ನು ನೋಡಬಹುದು . ಹೀಗೆ ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ  ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಇವರನ್ನು ಭೇಟಿಯಾಗಿದ್ದು ಬೇರೆ ಯಾರು ಅಲ್ಲ, ಕ್ರಿಕೆಟ್ ಗಾಡ್ ಎಂದೇ ಖ್ಯಾತಿ ಗಳಿಸಿರುವ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌.

ಹೌದು, ತಮ್ಮ ಕಟ್ಟ ಅಭಿಮಾನಿಯನ್ನು ಆತನಿಗೆ ತಿಳಿಯದಂತೆ ಆತ ಊಹೆಯೂ ಮಾಡದಂತೆ ಸಡನ್ ಆಗಿ ಭೇಟಿ ಮಾಡಿ ಆತನ ಬದುಕಿನಲ್ಲಿ ಸಾರ್ಥಕ್ಯದ ಭಾವ ಮೂಡಿಸಿದ್ದಾರೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಾನೂ ಸ್ವಲ್ಪವೂ ನಿರೀಕ್ಷೆ ಮಾಡಿರದ ಈ ಕ್ಷಣ ನೋಡಿ ಅಭಿಮಾನಿ ಪೂರ್ತಿ ಭಾವುಕನಾಗಿದ್ದು ಕ್ರಿಕೆಟ್ ದೇವರಿಗೆ ದೊಡ್ಡ ನಮಸ್ಕಾರ ಮಾಡಿದ್ದಾನೆ ಈ ಅಭಿಮಾನಿ.

ಶುಭಮನ್ ಗಿಲ್‌ ತಂಗಿ ಜೊತೆ ಕಾಣಿಸಿಕೊಂಡ ಸಚಿನ್ ಪುತ್ರಿ: ಸಂಬಂಧ ಫಿಕ್ಸ್ ಎಂದ ನೆಟ್ಟಿಗರು!

ಹಾಗಿದ್ದರೆ ನಡೆದಿದ್ದೇನು? 

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅವರ ಕಾರಿನ ಮುಂದೆಯೇ ಭಾರತ ಕ್ರಿಕೆಟ್ ಟೀಮ್‌ ಪ್ರತಿನಿಧಿಸುವ ನೀಲಿ ಬಣ್ಣದ ಟೀ ಶರ್ಟ್‌ ಮೇಲೆ ಸಚಿನ್ ತೆಂಡೂಲ್ಕರ್ ಐ ಮಿಸ್ ಯೂ ಎಂದು ಬರೆದಿರುವ ಟೀ ಶರ್ಟ್ ತೊಟ್ಟು ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ ಸಾಗುತ್ತಿದ್ದು, ಇದನ್ನು ನೋಡಿದ ಸಚಿನ್ ತೆಂಡೂಲ್ಕರ್‌ ಕಾರಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಭೇಟಿ ಮಾಡಿದ್ದಾರೆ. ಆದರೆ ಇದನ್ನು ನಿರೀಕ್ಷೆ ಮಾಡಿರದ ಆತ ಕೆಲ ಕಾಲ ಶಾಕ್ ಆಗಿದ್ದಾನೆ.  ಬಳಿಕ ನನಗೆ ನಿಜವಾಗಿಯೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಇವತ್ತು ನನಗೆ ನನ್ನ ಭಗವಂತನ ದರ್ಶನವಾಯ್ತು ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ತನ್ನ ಬಳಿ ಇದ್ದ ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ಫೋಟೋಗಳ ಪೇಪರ್ ಕಟ್ಟಿಂಗ್ ಅಂಟಿಸಿ ಫೋಟೋಗಳನ್ನು ಅಂಟಿಸಿದ್ದ  ಪುಸ್ತಕವನ್ನು ಸಚಿನ್‌ಗೆ ತೋರಿಸಿದ್ದಾರೆ.  ತನ್ನ ನೆಚ್ಚಿನ ಅಭಿಮಾನಿ ಜೊತೆ ಮಾತನಾಡಿದ ಸಚಿನ್ ಟೀ ಶರ್ಟ್ ನೋಡಿ ನಿಮ್ಮನ್ನು ಮಾತನಾಡಿಸಬೇಕು ಎನಿಸಿತು ಅದಕ್ಕೆ ಗಾಡಿ ನಿಲ್ಲಿಸಿದೆವು ಎಂದು ಹೇಳಿದ್ದಾರೆ. ಜೊತೆಗೆ ಆತನಿಗೆ ಆಟೋಗ್ರಾಫ್ ನೀಡಿದರೆ, ಮೊದಲಿಗೆ ಸಚಿನ್ ಏರ್‌ಫೋರ್ಟ್‌ಗೆ ಹೋಗೋದು ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಇವರತ್ತ ತಿರುಗಿದ ಅಭಿಮಾನಿ ಶಾಕ್‌ನಿಂದ ನೋಡಿ ನಾನಿವತ್ತೂ ನಿಜವಾಗಿಯೂ ಭಗವಂತನನ್ನು ನೋಡಿದೆ ಎಂದು ಹೇಳಿದ್ದಾರೆ. 

ನಿಮ್ಮ ಧೈರ್ಯಕ್ಕೆ ಸೆಲ್ಯೂಟ್‌ ಎಂದ ಗೌತಮ್ ಅದಾನಿ: ಜಮ್ಮು ಕಾಶ್ಮೀರ ವಿಕಲಚೇತನ ಕ್ರಿಕೆಟಿಗನಿಗೆ ಉದ್ಯಮಿ ನೆರವು!

ನೀವು ಹೆಲ್ಮೆಟ್ ಧರಿಸಿದ್ದೀರಿ ನಾನು ಸೀಟ್ ಬೆಲ್ಟ್ ಧರಿಸಿದ್ದೇನೆ, ಸದಾ ಹೆಲ್ಮೆಟ್ ಧರಿಸಿ ಪ್ರಯಾಣಿಸಿ ಚೆನ್ನಾಗಿರಿ ಎಂದು ಹಾರೈಸಿ ಸಚಿನ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಸಚಿನ್ ಅಭಿಮಾನಿಗಳು ಕೂಡ ಭಾವುಕರಾಗಿದ್ದು, ಕೇವಲ ಕ್ರಿಕೆಟ್ ಗಾಡ್ ಈ ರೀತಿ ಮಾಡಲು ಸಾಧ್ಯ ಎಂದೆಲ್ಲಾ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೊಗಳಿದ್ದಾರೆ. ಆದರೆ ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್( ಪ್ಲಾನ್ ಮಾಡಿ ಮಾಡಿದ ವೀಡಿಯೋ) ಎಂದು ದೂರಿದ್ದಾರೆ. ಸ್ಕ್ರಿಫ್ಟ್ ಚೆನ್ನಾಗಿ ಬರೀತೀರಾ ಎಂದು ಟೀಕಿಸಿದ್ದಾರೆ.

ಆದರೆ ಸ್ವತಃ ಸಚಿನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿದ ಈ ವ್ಯಕ್ತಿಯ ಕಂಡು ನನ್ನ ಹೃದಯ ಖುಷಿಯಿಂದ ಭಾರವಾಯ್ತು. ನಾವು ನಿರೀಕ್ಷೆಯೇ ಮಾಡದ ಕಡೆಯಿಂದೆಲ್ಲಾ ಬರುವ ಈ ರೀತಿಯ ಅಗಾಧ ಪ್ರೀತಿಯಿಂದ ನಮಗೆ ಜೀವನ ತುಂಬಾ ವಿಶೇಷ ಎನಿಸುವುದು ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ. ಸಚಿನ್ ಭೇಟಿ ಮಾಡಿದ ಈ ಅಭಿಮಾನಿಯ ಹೆಸರು ಹರೀಶ್‌

ಒಟ್ಟಿನಲ್ಲಿ ಸಚಿನ್ ಭೇಟಿಯಿಂದ ಅಭಿಮಾನಿ ಒಂದು ಕ್ಷಣ ಮಾತೇ ಹೊರಡದಂತಾಗಿ  ಭಾವುಕರಾಗಿದ್ದು ಈ ವೀಡಿಯೋದಲ್ಲಿ ಕಣ್ಣಿಗೆ ಕಟ್ಟಿದಂತಿದೆ.

 

 

Follow Us:
Download App:
  • android
  • ios