ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಪ್ರವಾಸಿ ಇಂಗ್ಲೆಂಡ್ ತಂಡವು ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಪಂದ್ಯದ ಹೆಚ್ಚಿನ ವಿವರ ಇಲ್ಲಿದೆ ನೋಡಿ...

ಕೇಪ್‌ಟೌನ್‌(ಜ.08): ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ ರೋಚಕ ಅಂತ್ಯ ಕಂಡಿತು. ಪಂದ್ಯವನ್ನು 189 ರನ್‌ಗಳಿಂದ ಗೆದ್ದುಕೊಂಡ ಇಂಗ್ಲೆಂಡ್‌ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತು. ಇದರೊಂದಿಗೆ 63 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಕೇಪ್‌ಟೌನ್‌’ನಲ್ಲಿ ಗೆಲುವಿನ ನಗೆ ಬೀರಿದೆ. 

Scroll to load tweet…

ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ

ಗೆಲುವಿಗೆ 438 ರನ್‌ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ, 5ನೇ ಹಾಗೂ ಅಂತಿಮ ದಿನವಾದ ಮಂಗಳವಾರ ಭಾರೀ ಹೋರಾಟ ಪ್ರದರ್ಶಿಸಿತು. 4ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿದ್ದ ಆತಿಥೇಯ ತಂಡ, ಅಂತಿಮ ದಿನ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. 171 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳು ಪತನಗೊಂಡಿದ್ದವು. ಆದರೆ ಕ್ವಿಂಟನ್‌ ಡಿ ಕಾಕ್‌ ಹಾಗೂ ರಾಸ್ಸಿ ವಾನ್‌ ಡರ್‌ ಡುಸ್ಸೆನ್‌ ಪ್ರತಿರೋಧ ಒಡ್ಡಿದರು. ಇವರಿಬ್ಬರು 35 ಓವರ್‌ ಬ್ಯಾಟ್‌ ಮಾಡಿದರು. 

Scroll to load tweet…

ಕ್ವಿಂಟನ್ ಡಿ ಕಾಕ್‌ 107 ಎಸೆತಗಳಲ್ಲಿ 50 ರನ್‌ ಗಳಿಸಿದರೆ, ಡುಸ್ಸೆನ್‌ 140 ಎಸೆತಗಳನ್ನು ಎದುರಿಸಿ ಕೇವಲ 17 ರನ್‌ ಗಳಿಸಿದರು. ದಿನದಾಟದಲ್ಲಿ ಕೇವಲ 9 ಓವರ್‌ ಬಾಕಿ ಇದ್ದಾಗ ದ.ಆಫ್ರಿಕಾ 248 ರನ್‌ಗೆ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 3 ವಿಕೆಟ್‌ ಕಿತ್ತರು. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸ್ಕೋರ್‌:

ಇಂಗ್ಲೆಂಡ್‌ 269 ಹಾಗೂ 391/8

ಡಿ., ದ.ಆಫ್ರಿಕಾ 223 ಹಾಗೂ 248