'ಫುಟ್‌ಬಾಲ್ ಟೀಮ್‌ಗೆ ಚೆಸ್ ಪ್ಲೇಯರ್ ಕೋಚ್ ಆದಂಗಾಯ್ತು..' ಆರ್‌ಸಿಬಿ 'ಮೆಂಟರ್' ಆಯ್ಕೆಗೆ ತಲೆಕೆರೆದುಕೊಂಡ ಫ್ಯಾನ್ಸ್!
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಆರ್‌ಸಿಬಿ ತಂಡ ತನ್ನ ಮಹಿಳಾ ಕ್ರಿಕೆಟ್ ಟೀಮ್‌ಗೆ ಮೆಂಟರ್ ಆಗಿ ಆಯ್ಕೆ ಮಾಡಿದೆ. ಬಹುಶಃ ಕ್ರಿಕೆಟ್ ಟೀಮ್‌ಗೆ ಬೇರೆ ಕ್ರೀಡೆಯ ತಾರೆಯರು ಮೆಂಟರ್ ಆಗಿರುವುದು ಬಹುತೇಕ ಇದೇ ಮೊದಲಾಗಿರಬಹುದು. ಈ ನಡುವೆ ಆರ್‌ಸಿಬಿ ತಂಡದ ಆಯ್ಕೆಗೆ ಫ್ಯಾನ್ಸ್‌ಗಳು ಮಾತ್ರ ತಲೆಕೆರೆದುಕೊಂಡಿದ್ದಾರೆ.
ಬೆಂಗಳೂರು (ಫೆ.15): ಭಾರತ ಕಂಡ ಶ್ರೇಷ್ಠ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮಹಿಳಾ ತಂಡಕ್ಕೆ ಮೆಂಟರ್ ಆಗಿ ನೇಮಕ ಮಾಡಿದೆ. ಬಹುಶಃ ಕ್ರಿಕೆಟ್ ತಂಡದ ಮೆಂಟರ್ ಆಗಿ ಇನ್ನೊಂದು ಕ್ರೀಡೆಯ ಸ್ಟಾರ್‌ಗಳನ್ನು ಆಯ್ಕೆ ಮಾಡಿರುವುದು ಬಹುತೇಕ ಇದೇ ಮೊದಲು ಎನ್ನಬಹುದು. ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿರುವ ಆರ್‌ಸಿಬಿ ಮಹಿಳಾ ತಂಡಕ್ಕೆ ಸಾನಿಯಾರನ್ನು ಆಯ್ಕೆ ಮಾಡಿದ್ದನ್ನು ಹೆಚ್ಚಿನವರು ಅಚ್ಚರಿಯಿಂದ ನೋಡಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿಯೇ ಜೂಲನ್ ಗೋಸ್ವಾಮಿ, ಮಿಥಾಲಿ ರಾಜ್ ಇಂಗ್ಲೆಂಡ್‌ನ ಚಾರ್ಲೋಟ್ ಎಡ್ವರ್ಡ್ಸ್ ಅಂತಾ ಸ್ಟಾರ್‌ಗಳಿದ್ದ ನಡುವೆಯೂ ಟೆನಿಸ್ ಕ್ರೀಡೆಯ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡಿದ್ದರಿಂದ ಆಗುವ ಲಾಭವೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಸಾನಿಯಾ ಮಿರ್ಜಾರನ್ನು ಆರ್‌ಸಿಬಿ ತಂಡದ ಮೆಂಟರ್ ಆಗಿ ಆಯ್ಕೆ ಮಾಡಿದ ನಿರ್ಧಾರ ಹೇಗಿದೆಯೆಂದರೆ, ಫುಟ್‌ಬಾಲ್ ಟೀಮ್‌ಗೆ ಚೆಸ್ ಪ್ಲೇಯರ್‌ನ ಕೋಚ್ ಮಾಡಿದ ಹಾಗಿದೆ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಬಹುಶಃ ಸಾನಿಯಾ ಮಿರ್ಜಾ ಗಂಡ ಶೋಯೆಬ್ ಮಲೀಕ್ ಕ್ರಿಕೆಟರ್ ಆಗಿರುವ ಕಾರಣಕ್ಕೆ ಆರ್‌ಸಿಬಿ ಈ ನಿರ್ಧಾರ ಮಾಡಿರಬಹುದು. ಅವರಿಂದ ಸಾನಿಯಾ ಕ್ರಿಕೆಟ್ ಕಲಿತು ಈಗ ಮೆಂಟರ್ ಆಗಿರಬಹುದು ಎಂದು ಟೀಕಿಸಿದ್ದಾರೆ.
ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್‌ನಲ್ಲಿ ಪ್ರಕಟವಾದ ಸುದ್ದಿಗೆ ಫೇಸ್‌ಬುಕ್‌ನಲ್ಲಿ ಬಂದಿರುವ ಕಾಮೆಂಟ್‌ಗಳಲ್ಲಿ ಹೆಚ್ಚಿನವರು ಈ ಆಯ್ಕೆಯನ್ನು ಟೀಕಿಸಿದ್ದಾರೆ. ಸಾನಿಯಾ ಮಿರ್ಜಾ ಅವರಿಗೆ ತಂಡದಲ್ಲಿ ಆಟಗಾರ್ತಿಯರಿಗೆ ಯಾವುದೇ ಕೋಚಿಂಗ್ ನೀಡುವ ಜವಾಬ್ದಾರಿ ಇದ್ದಿರೋದಿಲ್ಲ. ಆಟಗಾರರಿಗೆ ಒತ್ತಡಗಳನ್ನು ನಿಭಾಯಿಸೋದು ಹೇಗೆ ಎನ್ನುವುದರ ಬಗ್ಗೆ ಮೆಂಟಲ್ ಕಂಡೀಷನಿಂಗ್ ವಿಚಾರದಲ್ಲಿ ಮಾತ್ರವೇ ಗಮನ ನೀಡುತ್ತಾರೆ ಎಂದು ಆರ್‌ಸಿಬಿ ತಂಡ ಹೇಳಿದೆ.
'ಈಕೆಯನ್ನು ನೋಡಿ ನಮ್ಮ ಆರ್‌ಸಿಬಿ ಹೈಕಳು ಮೆಂಟಲ್ ಆಗ್ದೆ ಇದ್ರೆ ಅಷ್ಟೇ ಸಾಕು..' ಎಂದು ಶಿವಕುಮಾರ್ ನಾಯಕ ಎನ್ನುವವರು ಕಾಮೆಂಟ್ ಮಾಡಿದ್ದರೆ, ಇಂಥ ಕಿತ್ತೋಗಿರೋ ಐಡಿಯಾಗಳು ನಮ್ಮ ಆರ್‌ಸಿಬಿಗೆ ಮಾತ್ರ ಬರೋದು ಅನ್ಸುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಆದರೂ ಈ ಸಾರಿ ಕಪ್ ನಮ್ದೆ ಎನ್ನುವ ಅಚಲ ವಿಶ್ವಾಸವೂ ಅವರಲ್ಲಿದೆ. 'ಆಕೆ ಟೆನಿಸ್ ಪ್ಲೇಯರ್. ಕ್ರಿಕೆಟ್‌ನಲ್ಲಿ ಅವರ ರೋಲ್ ಏನಿರಲು ಸಾಧ್ಯ' ಎಂದು ರಾಕೇಶ್ ಹೊನ್ನಳ್ಳಿ ಎನ್ನುವವರು ಬರೆದಿದ್ದಾರೆ.
Sania Mirza: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್!
ಪಾಕ್‌ನವರೇ ಬೇಕಾ ಎಂದು ಟೀಕೆ: ಇನ್ನು ಸಾನಿಯಾ ಮಿರ್ಜಾ ಪಾಕಿಸ್ತಾನದ ಪ್ರಜೆ ಆಗಿಲ್ಲದೇ ಇದ್ದರೂ, ಅವರ ಪತಿ ಶೋಯೆಬ್ ಮಲೀಕ್ ಪಾಕಿಸ್ತಾನದವರು ಎನ್ನುವ ಕಾರಣಕ್ಕೆ, 'ಪಾಕಿಸ್ತಾನದವರೇ ನಿಮಗೆ ಆಗ್ಬೇಕಾ' ಎಂದು ಚಂದ್ರಶೇಖರ್ ಆಜಾದ್ ಎನ್ನುವವರು ಬರೆದಿದ್ದಾರೆ. 'ಇವರನ್ನ ಆಯ್ಕೆ ಮಾಡಿರೋದು ಒಳ್ಳೆಯದೇ, ಆದ್ರೆ ಕೊನೆಗೆ ಇರೋ ಬರೋ ಮಹಿಳೆಯರನ್ನ ಪಾಕಿಸ್ತಾನಕ್ಕೆ ಬರುವಂತೆ ಕುಮ್ಮಕ್ಕು ಕೊಡದೇ ಇದ್ರೆ ಅಷ್ಟೇ ಸಾಕು..' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ' ಕ್ರಿಕೆಟ್‌ನ ಗಂಧಗಾಳಿ ಅವಳಿಗೆ ಗೊತ್ತಿಲ್ಲ. ಅದು ಹೇಗೆ ಅವರನ್ನು ಮೆಂಟರ್ ಮಾಡಿದರೋ' ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಏನೋ ಕ್ರಿಕೆಟ್ ಟೀಮ್ ಮಾಡಿ ಅಂದ್ರೆ ಫಿಲ್ಮ್ ಶೂಟಿಂಗ್ ಥರ ಚೆನ್ನಾಗಿರೋರನ್ನ ಚಾಯ್ಸ್ ಮಾಡ್ತಾ ಇದ್ದೀರಾ..' ಎಂದು ಸಂದೀಪ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
WPL 2023: ಆರ್‌ಸಿಬಿ ತಂಡಕ್ಕೆ ಬೆನ್ ಸಾಯರ್ ಮುಖ್ಯ ಕೋಚ್!
ಈ ಸೆಲೆಕ್ಷನ್ ನೀಡಿದ್ರೆ ಆರ್‌ಸಿಬಿ ಕಥೆ ಮುಗಿಯಿತು ಅನ್ನೋ ಥರ ಇದೆ. ಪುಟ್‌ಬಾಲ್ ಆಡೋರಿಗೆ ಚೆಸ್ ಪ್ಲೇಯರ್ ಮೆಂಟರ್ ಆದಂತಿದೆ... ಎಂದು ನಾಗಲಿಂಗಪ್ಪ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ನನಗೆ ಸಾಇಯಾ ಅವರ ಮೇಲೆ ಖಂಡಿತಾ ಗೌರವವಿದೆ. ಆದರೆ, ಟೆನಿಸ್ ಆಟಗಾರ್ತಿ ಆರ್‌ಸಿಬಿ ತಂಡಕ್ಕೆ ಏನು ಮಾಡಬಹುದು ಅನ್ನೋ ಕುತೂಹಲ ಖಂಡಿತಾ ಇದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಇವರನ್ನ ಮೆಂಟರ್ ಅಂಥಾ, ಯಾರೋ ಮೆಂಟಲ್ ಆಯ್ಕೆ ಮಾಡಿರಬೇಕು..' ಎಂದು ನಾಗರಾಜ್ ಲವೀನಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಆರ್‌ಸಿಬಿ ಇದನ್ನು ಟೆನಿಸ್ ಬಾಲ್ ಕ್ರಿಕೆಟ್ ಅಂದುಕೊಂಡಿರಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ. 'RCB ಪ್ಲಾನಿಂಗ್ ಗಂಡ್ ಹೈಕ್ಳ ಅಟ್ರಾಕ್ಷನ್ ಮಾಡೋದು ಅಷ್ಟೇ ವಿನ್ ಆಗೋದಲ್ಲ..' ಎಂದು ರಾಜೇಶ್ ಕುಮಾರ್ ಎನ್ನುವವರು ಬರೆದಿದ್ದಾರೆ.