WPL 2023: ಆರ್‌ಸಿಬಿ ತಂಡಕ್ಕೆ ಬೆನ್ ಸಾಯರ್ ಮುಖ್ಯ ಕೋಚ್!
ನ್ಯೂಜಿಲೆಂಡ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಸ್ಟ್ರೇಲಿಯಾದ ಬೆನ್ ಸಾಯರ್‌ರನ್ನು ಆರ್‌ಸಿಬಿ ತಂಡ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ತನ್ನ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
ಬೆಂಗಳೂರು (ಫೆ.15): ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಮೊದಲ ಆವೃತ್ತಿಯ ವುಮನ್ಸ್ ಪ್ರೀಮಿಯರ್ ಲೀಗ್‌ಗೆ ಆರ್‌ಸಿಬಿ ತಂಡ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ಮಹಿಳಾ ತಂಡದ ಹಾಲಿ ಕೋಚ್ ಆಗಿರುವ ಆಸ್ಟ್ರೇಲಿಯಾ ಮೂಲದ ಬೆನ್ ಸಾಯರ್‌ರನ್ನು ತಂಡದ ಕೋಚ್ ಆಗಿ ನೇಮಿಸಲಾಗಿದೆ. ಆರ್‌ಸಿಬಿ ತಂಡದ ಕ್ರಿಕೆಟ್ ವ್ಯವಹಾರಗಳ ನಿರ್ದೇಶಕ ಮೈಕ್ ಹೆಸನ್ ಬುಧವಾರ ತಂಡದ ಸಿಬ್ಬಂದಿಯನ್ನು ಪ್ರಕಟ ಮಾಡಿದ್ದಾರೆ. ಕರ್ನಾಟಕದ ಆರ್‌ಎಕ್ಸ್ ಮುರಳಿ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಪ್ರಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತಂಡದ ಮೆಂಟರ್ ಆಗಿ ಘೋಷಣೆ ಮಾಡಿದ ಕೆಲವೇ ಸಮಯದಲ್ಲಿ ಆರ್‌ಸಿಬಿ ತಂಡ ತನ್ನ ಕೋಚಿಂಗ್ ಸಿಬ್ಬಂದಿ ವಿವರಗಳನ್ನು ನೀಡಿದೆ. ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾದ ಬೆನ್ ಸಾಯರ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಬೆನ್ ಸಾಯರ್ ತಂಡದ ಕೋಚ್ ಆಗಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು. ಇದರೊಂದಿಗೆ ಮೊದಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿರುವ ಎಲ್ಲಾ ಐದೂ ತಂಡಗಳಿಗೆ ವಿದೇಶಿ ಕೋಚ್‌ಗಳ ಇರಲಿದ್ದಾರೆ.
ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿರುವ ನ್ಯೂಜಿಲೆಂಡ್ ತಂಡದ ಕೋಚ್ ಆಗಿ ಬೆನ್ ಸಾಯರ್ ಕಾರ್ಯನಿವರ್ಹಿಸುತ್ತಿದ್ದಾರೆ. ಅದಲ್ಲದೆ, ದಿ ಹಂಡ್ರೆಡ್ ಟೂರ್ನಿಯಲ್ಲಿ ಅವರು ಬರ್ಮಿಂಗ್ ಹ್ಯಾಂ ಫಿನಿಕ್ಸ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಆರ್‌ಸಿಬಿ ತಂಡದ ಮುಖ್ಯಕೊಂಡಿ ವನಿತಾ: ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ರಚನೆಯಲ್ಲಿ ಸ್ಕೌಂಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿರುವ ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ಕರ್ನಾಟಕದ ವಿಆರ್ ವನಿತಾ ಪ್ರಮುಖ ಪಾತ್ರ ವಹಿಸಿದ್ದರು. ಕನಿಷ್ಠ 100 ಆಟಗಾರ್ತಿಯರ ಹೆಸರನ್ನು ಇವರು ಶಾರ್ಟ್‌ಲಿಸ್ಟ್ ಮಾಡಿದ್ದರು.
Sania Mirza: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್!
'ಭಾರತ ತಂಡದ ಮಾಜಿ ಕ್ರಿಕೆಟರ್ ವಿಆರ್ ವನಿತಾ ಅವರನ್ನು ತಂಡದ ಮುಖ್ಯ ಸ್ಕೌಟ್ ಆಗಿ ನೇಮಕ ಮಾಡಿರುವುದರ ಹಿಂದೆ ಕಾರಣವಿದೆ. ಅವರಿಗೆ ಅಗಾಧವಾದ ಕ್ರಿಕೆಟ್ ಅನುಭವವಿದೆ ಅದರೊಂದಿಗೆ ದೇಶೀಯ ಕ್ರಿಕೆಟ್‌ನ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಅದಲ್ಲದೆ, ವೈಯಕ್ತಿಕವಾಗಿ ಅವರೊಬ್ಬ ಉತ್ತಮ ಆಟಗಾರ್ತಿ ಕೂಡ. ಹರಾಜಿನ ಸಮಯದಲ್ಲಿ ಅವರ ಇನ್‌ಪುಟ್‌ಗಳು ತಂಡ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು' ಎಂದು ಆರ್‌ಸಿಬಿ ಚೇರ್ಮನ್ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.
WPL 2023 ಮಹಿಳಾ ಐಪಿಎಲ್ ವೇಳಾಪಟ್ಟಿ ಪ್ರಕಟ, ಮಾರ್ಚ್ 4ಕ್ಕೆ ಉದ್ಘಾಟನೆ!
ಆರ್‌ಸಿಬಿ ಮಹಿಳಾ ತಂಡದ ಸಿಬ್ಬಂದಿ
ಮುಖ್ಯ ಕೋಚ್: ಬೆನ್ ಸಾಯರ್
ಸಹಾಯಕ ಕೋಚ್ ಮತ್ತು ಸ್ಕೌಟಿಂಗ್ ಮುಖ್ಯಸ್ಥ: ಮಲೋಲನ್ ರಂಗರಾಜನ್
ಸ್ಕೌಟ್ ಮತ್ತು ಫೀಲ್ಡಿಂಗ್ ಕೋಚ್: ವನಿತಾ ವಿ.ಆರ್
ಬ್ಯಾಟಿಂಗ್ ಕೋಚ್: ಆರ್ ಎಕ್ಸ್ ಮುರಳಿ
ಟೀಮ್ ಮ್ಯಾನೇಜರ್ ಮತ್ತು ಟೀಮ್ ಡಾಕ್ಟರ್: ಡಾ.ಹರಿಣಿ
ಮುಖ್ಯ ಅಥ್ಲೆಟಿಕ್ ಥೆರಪಿಸ್ಟ್: ನವನಿತಾ ಗೌತಮ್