Sania Mirza: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್!
ದೇಶದ ಅತ್ಯಂತ ಶ್ರೇಷ್ಠ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರಾಗಿರುವ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಮೆಂಟರ್ ಆಗಿ ಇರಲಿದ್ದಾರೆ. ಟೂರ್ನಿಯ ವೇಳೆ ಆಟಗಾರ್ತಿಯರಿಗೆ ಪ್ರೋತ್ಸಾಹ, ಸ್ಪೂರ್ತಿ ತುಂಬುವ ಕೆಲಸವನ್ನು ಅವರು ಮಾಡಲಿದ್ದಾರೆ ಎಂದು ಆರ್‌ಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು (ಫೆ.15): ದೇಶದ ಪ್ರಖ್ಯಾತ ಕ್ರೀಡಾ ತಾರೆಗಳನ್ನು ತನ್ನ ಐಕಾನ್‌ಗಳನ್ನಾಗಿ ಇರಿಸಿಕೊಳ್ಳುವ ಸಂಪ್ರದಾಯವನ್ನು ಆರ್‌ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರಿಸಿದೆ. ದೇಶ ಕಂಡ ದಿಗ್ಗಜ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಡಬ್ಲ್ಯುಪಿಎಲ್ 2023ಗೆ ತನ್ನ ಮೆಂಟರ್ ಆಗಿ ಆರ್‌ಸಿಬಿ ತಂಡ ನೇಮಿಸಿಕೊಂಡಿದೆ. ಆರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತೆಯಾಗಿರುವ ಸಾನಿಯಾ ಮಿರ್ಜಾ, ಕ್ಲಬ್‌ನ ಪ್ಲೇ ಬೋಲ್ಡ್ ಸಂಪ್ರದಾಯಕ್ಕೆ ಸೂಕ್ತವಾಗಿ ಒಗ್ಗಿಕೊಳ್ಳುತ್ತಾರೆ ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ' ಭಾರತದಲ್ಲಿ ಮಹಿಳಾ ವಿಭಾಗದ ಕ್ರೀಡೆಗಳ ಶ್ರೇಷ್ಠ ತಾರೆ, ಯುವ ಐಕಾನ್, ತನ್ನ ವೃತ್ತಿಜೀವನದುದ್ದಕ್ಕೂ ಧೈರ್ಯದ ನಿರ್ಧಾರದ ಮೂಲಕ ಗಮನಸೆಳೆದವರು. ಮೈದಾನದ ಒಳಗೆ ಹಾಗೂ ಮೈದಾನದ ಹೊರಗೆ ಎದುರಿನ ಅಡೆತಡೆಗಳನ್ನು ದಾಟಿ ಚಾಂಪಿಯನ್ ಎನಿಸಿಕೊಂಡವರು. ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಸಾನಿಯಾ ಮಿರ್ಜಾ ಅವರನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಆರ್‌ಸಿಬಿ ತನ್ನ ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿದೆ.
ಆರ್‌ಸಿಬಿ ತಂಡಕ್ಕೆ ಮೆಂಟರ್ ಆಗುವಂತೆ ಕೇಳಿದಾಗ ನನಗೆ ಅಚ್ಚರಿಯೊಂದಿಗೆ ಸಂಭ್ರಮ ಕೂಡ ಆಗಿತು. ಅದೃಷ್ಟವೋ ಅಥವಾ ದುರಾದೃಷ್ಟವೋ ತಿಳಿಯದು. ಕಳೆದ 20 ವರ್ಷಗಳಿಂದ ನಾನು ವೃತ್ತಿಪರ ಅಥ್ಲೀಟ್ ಆಗಿದ್ದೇನೆ. ಈಗ ನನ್ನ ಮುಂದಿನ ಕೆಲಸವೇನೆಂದರೆ, ಯುವ ಮಹಿಳೆಯರು ಹಾಗೂ ಬಾಲಕಿಯರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವಂತೆ ಪ್ರಯತ್ನಿಸುವುದು ಹಾಗೂ ಸಹಾಯ ಮಾಡುವುದು. ಅವರಿಗೆ ಕ್ರೀಡೆಯನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುವಂತೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನನ್ನದು ಎಂದು ಆರ್‌ಸಿಬಿಯ ಮೆಂಟರ್ ಆಗಿ ನೇಮಕವಾದ ಬಳಿಕ ನಡೆದ ಮಾತುಕತೆಯ ವೇಳೆ ತಿಳಿಸಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೆಂಟರ್ ಆಗಿ ನಿಮ್ಮ ಜವಾಬ್ದಾರಿ ಏನಿರಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದದ ಅವರು, ಕ್ರೀಡೆಯಲ್ಲಿ ಯಾವತ್ತಿಗೂ ಒತ್ತಡವನ್ನು ನಿಭಾಯಿಸುವುದೇ ದೊಡ್ಡ ಸವಾಲು. ಆಟಗಾರ್ತಿಯರನ್ನು ಮಾನಸಿಕವಾಗಿ ಗಟ್ಟಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ' ಎಂದು ಹೇಳಿದ್ದಾರೆ. 'ಕ್ರಿಕೆಟ್ ಹಾಗೂ ಟೆನಿಸ್ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಬಹುಶಃ ಎಲ್ಲಾ ಅಥ್ಲೀಟ್‌ಗಳು ಕೂಡ ಇದೇ ರೀತಿ ಯೋಚನೆ ಮಾಡುತ್ತಾರೆ. ಪ್ರತಿ ಆಟದಲ್ಲೂ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವನ್ನು ನಿಭಾಯಿಸಿ ಅದರಿಂದ ಗೆದ್ದು ಬರುವುದೇ ಪ್ಮರುಖವಾಗಿರುತ್ತದೆ. ಒತ್ತಡ ಎನ್ನುವುದು ಗೆಲುವಿನ ಹಾದಿಯಲ್ಲಿ ಸಿಗುವ ಪ್ರಮುಖ ವಿಚಾರ. ಇದನ್ನು ಸರಿಯಾಗಿ ನಿಭಾಯಿಸದೇ ಹೋದರೆ, ಯಶಸ್ಸು ಸಾಧ್ಯವಿಲ್ಲ. ಒತ್ತಡವನ್ನು ಸರಿಯಾಗಿ ನಿಭಾಯಿಸಿ ಗೆದ್ದವರೇ ಇಂದು ಕ್ರೀಡೆಯ ಚಾಂಪಿಯನ್‌ಗಳಾಗಿದ್ದಾರೆ ಎಂದು ಸಾನಿಯಾ ಮಿರ್ಜಾ ಮಾತನಾಡಿದ್ದಾರೆ.
WPL Auction:ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ಬಗ್ಗೆ ಆರ್‌ಸಿಬಿ ಮೈಕ್ ಹೆಸನ್ ಹೇಳಿದ್ದೇನು..?
ಮಹಿಳಾ ಐಪಿಎಲ್‌ನ ಹರಾಜು ಪ್ರಕ್ರಿಯೆ ಫೆ.13 ರಂದು ನಡೆದಿದ್ದು, ಆರ್‌ಸಿಬಿ ತಂಡ ದಾಖಲೆಯ 3.4 ಕೋಟಿ ರೂಪಾಯಿ ಮೊತ್ತಕ್ಕೆ ಸ್ಮೃತಿ ಮಂಧನಾರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಅವರೊಂದಿಗೆ ಸೋಫಿ ಡಿವೈನ್, ಎಲ್ಲೀಸ್ ಪೆರ್ರಿ, ರೇಣುಕಾ ಸಿಂಗ್ ಹಾಗೂ ರಿಚಾ ಘೋಷ್‌ರನ್ನೂ ಕೂಡ ಆರ್‌ಸಿಬಿ ತಂಡ ಖರೀದಿ ಮಾಡಿದೆ. ಈ ನಡುವೆ ಆರ್‌ಸಿಬಿ ತಂಡ ಸಿಬ್ಬಂದಿ ಬಳಗವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಆರ್‌ಸಿಬಿ ತಂಡಕ್ಕೆ ಯಾರು ಕೋಚ್ ಆಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಆದರೆ, ತಂಡ ಈಗಾಗಲೇ ಕರ್ನಾಟಕದ ವಿಆರ್ ವನಿತಾ, ರಾಯಲ್ ಚಾಲೆಂಜರ್ಸ್ ಪುರುಷರ ತಂಡ ಮುಖ್ಯ ಟ್ಯಾಲೆಂಟ್ ಸ್ಕೌಟ್ ಆಗಿರುವ ಎಂ. ರಂಗರಾಜನ್ ತಂಡದೊಂದಿಗೆ ಇದ್ದಾರೆ. ಇದರ ನಡುವೆ ಮೈಕ್ ಹೆಸನ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
WPL 2023 ಮಹಿಳಾ ಐಪಿಎಲ್ ವೇಳಾಪಟ್ಟಿ ಪ್ರಕಟ, ಮಾರ್ಚ್ 4ಕ್ಕೆ ಉದ್ಘಾಟನೆ!
ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಮಾರ್ಚ್ 5 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುವ ಮೂಲಕ ಆರ್‌ಸಿಬಿ ಅಭಿಯಾನ ಆರಂಭಿಸಲಿದೆ.