ಗುಜರಾತ್(ಫೆ.19):  ಚೇತನ್ ಸಕಾರಿಯಾ. ಈ ಹೆಸರು ಸಯ್ಯದ್ ಮುಷ್ತಾಕ್ ಆಲಿ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರಿದು. 22 ವರ್ಷದ ಸೌರಾಷ್ಟ್ರದ ಎಡಗೈ ವೇಗಿಯನ್ನು ರಾಜಸ್ಥಾನ ರಾಯಲ್ಸ್ 1.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಈ ಮೂಲಕ ಅತ್ಯುತ್ತಮ ಪ್ರತಿಭೆಯನ್ನು ತಂಡಕ್ಕೆ ಸೇರಿಸಿಕೊಂಡಿದೆ.

IPL ಹರಾಜಿನಲ್ಲಿ ಖರೀದಿಸಿದ RCB ಪ್ಲೇಯರ್ಸ್; ಇಲ್ಲಿದೆ ಫುಲ್ ಲಿಸ್ಟ್!.

ಚೇತನ್ ಸಕಾರಿಯಾ ತಂದೆ ಟೆಂಪೋ ಡ್ರೈವರ್, ಗುಜರಾತ್‌ನ ವರ್ತೇಜ್ ನಿವಾಸಿಯಾಗಿದ್ದಾರೆ. ಟೆಂಪೋ ಚಾಲಕನಾಗಿ ದುಡಿದು ಕುಟಂಬ ನಿರ್ವಹಿಸುವುದೇ ಅತೀ ದೊಡ್ಡ ಸವಾಲಾಗಿತ್ತು. ಸಕಾರಿಯಾ ಮನೆಯಲ್ಲಿ ಟೀವಿ ಕೂಡ ಇರಲಿಲ್ಲ. ಟೀಂ ಇಂಡಿಯಾ ಪಂದ್ಯಗಳನ್ನು ಗೆಳೆಯರ ಮನೆಗೆ ತೆರಳಿ ವೀಕ್ಷಿಸುತ್ತಿದ್ದ ಸಕಾರಿಯಾ ಅತ್ಯಂತ ಕಡು ಬಡತನದಲ್ಲಿ ಬೆಳೆದ ಪ್ರತಿಭೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಶಾರುಖ್ ಖಾನ್ ಸೇರ್ಪಡೆ; ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ!.

ಕಳೆದ ತಿಂಗಳ ಸಕಾರಿಯಾ ಬದುಕಿನಲ್ಲಿ ಮತ್ತೊಂದು ದುರ್ಘಟನೆ ನಡೆದಿತ್ತು. ಚೇತನ್ ಸಕಾರಿಯಾ ಸೌರಾಷ್ಟ್ರ ಪರ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಆಡುತ್ತಿದ್ದರು. ಈ ವೇಳೆ ಸಕಾರಿಯಾ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದರು. ಟೂರ್ನಿ ಆಡುತ್ತಿದ್ದ ಚೇತನ್ ಸಕಾರಿಯಾಗೆ ತನ್ನು ತಮ್ಮನ ಆತ್ಮಹತ್ಯೆ ವಿಚಾರವನ್ನು ತಿಳಿದೇ ಇರಲಿಲ್ಲ.

ಮನೆಗೆ ಬಂದಾಗ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದಿದೆ. ಈ ಆಘಾತ ಚೇತನ್ ಸಕಾರಿಯಾಗೆ ಇನ್ನಿಲ್ಲದಂತೆ ಕಾಡಿತ್ತು. ಇದೀಗ ತನ್ನ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. 1.2 ಕೋಟಿ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ಖರೀದಿ ಮಾಡಿದೆ. ಈ ಕುರಿತ ಸಂತಸ ವ್ಯಕ್ತಪಡಿಸಿದ ಚೇತನ್ ಸಕಾರಿಯಾ, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹಣದಲ್ಲಿ ತಾನು ರಾಜ್‌ಕೋಟ್‌ನಲ್ಲಿ ಉತ್ತಮ ಮನೆ ಖರೀದಿಸಬೇಕು ಎಂದಿದ್ದಾರೆ. ತಂದೆ ಈ ವಯಸ್ಸಿನ ಟೆಂಪೋ ಚಾಲನಕನಾಗಿ ದುಡಿಯುವುದು ಬೇಡ. ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸಬೇಕು. ಹೀಗಾಗಿ ಪೋಷಕರನ್ನು, ನನ್ನ ಕುಟುಂಬವನ್ನು ನೋಡಿಕೊಳ್ಳುತ್ತೇನೆ ಎಂದು ಚೇತನ್ ಸಕಾರಿಯಾ ಹೇಳಿದ್ದಾರೆ.