ಚೆನ್ನೈ(ಫೆ.18): ಶಾರುಖ್ ಖಾನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರಿಕೊಂಡಿದ್ದಾರೆ. ಗೊಂದಲಕ್ಕೀಡಾಗಬೇಡಿ. ಇದು ಕೆಕೆಆರ್ ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಅಲ್ಲ. ಇದು ಯುವ ಕ್ರಿಕೆಟಿಗ ಶಾರುಖ್ ಖಾನ್. ಈ ಕ್ರಿಕೆಟಿಗರ ಖರೀದಿಗೆ  ಪಂಜಾಬ್ ಕಿಂಗ್ಸ್ ಜಿದ್ದಿಗೆ ಬಿದ್ದಿತ್ತು. 

2014ರ ಬಳಿಕ ಐಪಿಎಲ್ ಟೂರ್ನಿಗೆ ಕಾಲಿಟ್ಟ ಚೇತೇಶ್ವರ್ ಪೂಜಾರ!

ಬರೋಬ್ಬರಿ 5.25 ಕೋಟಿ ರೂಪಾಯಿ ನೀಡಿ ಪಂಜಾಬ್ ಕಿಂಗ್ಸ್, ಶಾರೂಖ್ ಖಾನ್ ಖರೀದಿಸಿತು. ಬಿಡ್ಡಿಂಗ್ ಗೆದ್ದ ಖುಷಿಯಲ್ಲಿ ಪ್ರೀತಿ ಜಿಂಟಾ ಸಂತಸದಲ್ಲಿ ತೇಲಾಡಿದ್ದಾರೆ. 2018-19ರ ರಣಜಿ ಟೂರ್ನಿಯಲ್ಲಿ ತಮಿಳುನಾಡು ಪರ ಶಾರುಖ್ ಖಾನ್ ಪದಾರ್ಪಣೆ ಮಾಡಿದ್ದರು. 

 

ವಿದೇಶಿ ಆಟಗಾರರ ನಡುವೆ ಕರ್ನಾಟಕ ಆಟಗಾರರಿಗೆ ಹೆಚ್ಚಿನ ಬೇಡಿಕೆ; ಕಾರ್ಯಪ್ಪ, ಸುಚಿತ್ ಸೋಲ್ಡ್!.

ಫೈನಲ್ ಪಂದ್ಯದಲ್ಲಿ ಶಾರೂಖ್ ಖಾನ್ ಅಂತಿಮ 7 ಎಸೆತದಲ್ಲಿ 18 ರನ್ ಸಿಡಿಸಿ ತಮ್ಮ ಪ್ರತಿಭೆ ಸಾಬೀತು ಪಡಿಸಿದ್ದರು. ಹಿಮಾಚಲ ಪ್ರದೇಶ ವಿರುದ್ದ ಅಜೇಯ 40 ರನ್ ಸಿಡಿಸಿ ತಮಿಳುನಾಡು ಗೆಲುವಿಗೆ ಕಾರಣರಾಗಿದ್ದರು.