ಕೆಎಲ್‌ ರಾಹುಲ್‌ ಮೇಲೆ ನಮ್ಮ ಸಂಪೂರ್ಣ ಬೆಂಬಲವಿದೆ: ವಿಶ್ವಾಸ ವ್ಯಕ್ತಪಡಿಸಿದ ಗುರು ದ್ರಾವಿಡ್‌

KL Rahul Form: ಕಳಪೆ ಫಾರ್ಮ್‌ನಲ್ಲಿರುವ ಕೆಎಲ್‌ ರಾಹುಲ್‌ರನ್ನು ಮುಂದಿನ ಪಂದ್ಯ ಕೈ ಬಿಡುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ದ್ರಾವಿಡ್‌, ಕೆಎಲ್‌ ಮೇಲೆ ಸಂಪೂರ್ಣ ಭರವಸೆಯಿದೆ ಎಂದಿದ್ದಾರೆ. ತಂಡದ ನಾಯಕ ರೋಹಿತ್‌ ಶರ್ಮ ಕೂಡ ಭರವಸೆ ಇಟ್ಟಿದ್ದಾರೆ ಎಂದಿದ್ದಾರೆ.

Team management has complete faith on KL Rahul ahead of Bangladesh game

ನವದೆಹಲಿ: KL Rahul ಫಾರ್ಮ್‌ ಮೇಲೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಪಂದ್ಯದ ಮುನ್ನ ಮತ್ತು ಬಳಿಕ ಕೆಎಲ್‌ ರಾಹುಲ್‌ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ಕೇವಲ ಚಿಕ್ಕ ಪುಟ್ಟ ತಂಡಗಳ ವಿರುದ್ಧವಷ್ಟೇ ರಾಹುಲ್‌ ಆರ್ಭಟ, ಪ್ರಮುಖ ತಂಡಗಳ ವಿರುದ್ಧ ಪ್ರದರ್ಶನವಿಲ್ಲ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ವಿಶ್ವಕಪ್‌ನ ಮೂರು ಪಂದ್ಯಗಳಲ್ಲೂ ರಾಹುಲ್‌ ನೀರಸ ಪ್ರದರ್ಶನ ನೀಡಿದ್ದಾರೆ. ಇನ್ನಾದರೂ ಅವರನ್ನು ತಂಡದಿಂದ ಕೈಬಿಟ್ಟು ರಿಷಬ್‌ ಪಂತ್‌ ಅಥವಾ ಬೇರಾವುದಾದರೂ ಅರ್ಹ ಆಟಗಾರರಿಗೆ ಅವಕಾಶ ನೀಡಿ ಎಂದು ಜನ ಕೇಳುತ್ತಿದ್ದಾರೆ. ಆದರೆ ಬಿಸಿಸಿಐ ಮತ್ತು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಕೆ.ಎಲ್‌ ರಾಹುಲ್‌ ಮೇಲೆ ಅಪಾರವಾದ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದರಿಂದಲೇ ಉತ್ತಮ ಪ್ರದರ್ಶನ ನೀಡದಿದ್ದರೂ ಕೆಎಲ್‌ ರಾಹುಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 
ಕೆಎಲ್‌ ರಾಹುಲ್‌ ಪ್ರದರ್ಶನದ ಬಗ್ಗೆ ಮಾತನಾಡಿದ ರಾಹುಲ್‌ ದ್ರಾವಿಡ್‌ ತಂಡದ ಸಂಪೂರ್ಣ ಬೆಂಬಲ ಮತ್ತು ವಿಶ್ವಾಸ ರಾಹುಲ್‌ ಮೇಲಿದೆ. ಅವರು ನೆಟ್ಸ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ ಎಂದಿದ್ದಾರೆ.

ಇಡೀ ತಂಡ, ತಂಡದ ಮ್ಯಾನೇಜ್‌ಮೆಂಟ್‌ ಮತ್ತು ರೋಹಿತ್‌ ಶರ್ಮ ಕೂಡ ರಾಹುಲ್‌ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ರಾಹುಲ್‌ ದ್ರಾವಿಡ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಮುಂದಿನ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಉತ್ತಮವಾಗಿ ಆಡುವ ವಿಶ್ವಾಸವಿದೆ. ಅವರು ನೆಟ್ಸ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ ಎಂದು ದ್ರಾವಿಡ್‌ ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧ ನೀರಸ ಪ್ರದರ್ಶನ ನೀಡಿದ ಭಾರತ ಸೋಲು ಕಂಡಿತ್ತು. ವಿಶ್ವಕಪ್‌ನ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಭಾರತ ತಂಡ ಗೆಲುವು ಕಂಡಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಬಾಂಗ್ಲಾದೇಶದ ಮೇಲಿದ್ದು ಸೆಮಿ ಫೈನಲ್ಸ್‌ ತಲುಪುವುದನ್ನು ಖಾತ್ರಿ ಮಾಡಿಕೊಳ್ಳಲು ಬಾಂಗ್ಲಾ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ನಾಯಕ ರೋಹಿತ್‌ ಶರ್ಮ ಜೊತೆಗೆ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. 

ಇದನ್ನೂ ಓದಿ: T20 World Cup ನಂತರ ದಿನೇಶ್‌ ಕಾರ್ತಿಕ್‌ ಭವಿಷ್ಯವೇನು? ಭಾರತ ತಂಡದಲ್ಲಿ ಸಿಗತ್ತಾ ಸ್ಥಾನ

ರಾಹುಲ್‌ ಮೂರು ಪಂದ್ಯಗಳಿಂದ ಕೇವಲ 22 ರನ್‌ ಗಳಿಸಿದ್ದಾರೆ. ಒಂದು ಪಂದ್ಯದಲ್ಲೂ ಎರಡಂಕಿಯನ್ನೂ ಮುಟ್ಟಿಲ್ಲ. ದೀಪಕ್‌ ಹೂಡಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದರು, ಆದರೆ ರಿಷಬ್‌ ಪಂತ್‌ ಇನ್ನೂ ಬೆಂಚು ಕಾಯಿಸುತ್ತಿದ್ದಾರೆ. ಕೆಲ್‌ ರಾಹುಲ್‌ ಬದಲು ಇಬ್ಬರಲ್ಲಿ ಒಬ್ಬರನ್ನು ಆರಿಸಲಿ ಎಂಬುದು ಅಭಿಮಾನಿಗಳ ಬೇಡಿಕೆ. ಆದರೆ ತಂಡದ ಮ್ಯಾನೇಜ್‌ಮೆಂಟ್‌ ರಾಹುಲ್‌ ಮೇಲೆ ಅಪಾರವಾದ ವಿಶ್ವಾಸವಿಟ್ಟಿದೆ. ಇದೇ ಕಾರಣಕ್ಕೆ ಮುಂದಿನ ಪಂದ್ಯದಲ್ಲೂ ಅವರು ಆಡಲಿದ್ದಾರೆ. ಜತೆಗೆ ಅವರು ತಂಡದ ಉಪ ನಾಯಕ ಕೂಡ ಆಗಿರುವುದರಿಂದ ಅವರನ್ನು ತಂಡದಿಂದ ಹೊರಗಿಡುವುದು ಮುಜುಗರದ ಸಂಗತಿ. 

ಇದನ್ನೂ ಓದಿ: T20 World Cup ಟೀಂ ಇಂಡಿಯಾದಿಂದ ಹೊರಗಿಡಲು ಸರಿಯಾದ ಸಮಯ: ಮತ್ತೆ ಫೇಲಾದ ರಾಹುಲ್‌ ಮೇಲೆ ನೆಟ್ಟಿಗರು ಸಿಡಿಮಿಡಿ..!

"ಕೆಎಲ್‌ ರಾಹುಲ್‌ ಅದ್ಭುತ ಆಟಗಾರ. ಅದನ್ನು ಅವರಾಗಲೇ ಸಾಬೀತು ಮಾಡಿದ್ದಾರೆ. ಅವರ ರೆಕಾರ್ಡ್‌ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರು ನೆಟ್ಸ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ20ಯಲ್ಲಿ ಆಟಗಾರರಿಗೆ ಕೆಲವೊಮ್ಮೆ ಕಷ್ಟವಾಗುತ್ತದೆ. ಆಸ್ಟ್ರೇಲಿಯಾದ ಪಿಚ್‌ ಆರಂಭಿಕ ದಾಂಡಿಗರಿಗೆ ಕಾಟ ನೀಡುತ್ತಿದೆ. ಬೌಲರ್‌ಗಳಿಗೆ ಸಹಕಾರಿಯಾಗಿವೆ. ಇದು ಕ್ರಿಕೆಟ್‌ನಲ್ಲಿ ಸಾಮಾನ್ಯ," ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios