ಹೈದರಾಬಾದ್(ಡಿ.03):  ಮಿಥಾಲಿ ರಾಜ್ ಭಾರತ ಮಹಿಳಾ ತಂಡದ ಆಧಾರ ಸ್ಥಂಭವಾಗಿ ಗುರುತಿಸಿಕೊಂಡಿದ್ದಾರೆ. 1999ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ, ಹಂತ ಹಂತವಾಗಿ ಉನ್ನತಿಯತ್ತ ಹೆಜ್ಜೆಹಾಕಿದ ಮಿಥಾಲಿ, ಭಾರತ ಕಂಡ ಅತ್ಯಂತ ಯಶಸ್ವಿ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೀಗ ಹಿರಿಯ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ 37ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!

2005 ಹಾಗೂ 2019ರಲ್ಲಿ ವಿಶ್ವಕಪ್ ಫೈನಲ್ ತಲುಪಿದ ಮಿಥಾಲಿ ನೇತೃತ್ವದ ಭಾರತ ಮಹಿಳಾ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇದೀಗ 2021ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: T20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಿಥಾಲಿ ರಾಜ್

ಭಾರತದ ಪರ 209 ಏಕದಿನ ಪಂದ್ಯ ಆಡಿರುವ ಮಿಥಾಲಿ 6888 ರನ್ ಸಿಡಿಸಿದ್ದಾರೆ. 7 ಶತಕ ಹಾಗೂ 53 ಅರ್ಧಶತಕ ಸಿಡಿಸಿದ್ದಾರೆ. 89 ಟಿ20 ಪಂದ್ಯದಿಂದ 2364 ರನ್ ಸಿಡಿಸಿದ್ದಾರೆ. 10  ಟೆಸ್ಟ್ ಪಂದ್ಯಗಳಿಂದ 663     ರನ್ ದಾಖಲಿಸಿರುವ ಮಿಥಾಲಿ ಭಾರತದ ಶ್ರೇಷ್ಠ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಮಿಥಾಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.