Asianet Suvarna News Asianet Suvarna News

ಟೀಂ ಇಂಡಿಯಾ ಕೂಡಿಕೊಂಡ ರೋಹಿತ್; ಕೋಚ್‌ ಶಾಸ್ತ್ರಿಯಿಂದ ಸಿಕ್ತು ಒಳ್ಳೆಯ ಕಾಂಪ್ಲಿಮೆಂಟ್

ಕಳೆದ 14 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ರೋಹಿತ್ ಶರ್ಮಾ ಇದೀಗ ತಂಡ ಕೂಡಿಕೊಂಡಿದ್ದಾರೆ. ಕೋಚ್‌ ರವಿಶಾಸ್ತ್ರಿ ಹಿಟ್‌ಮ್ಯಾನ್‌ಗೆ ಒಳ್ಳೆಯ ಕಾಂಪ್ಲಿಮೆಂಟ್ಸ್‌ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Team India Warm Welcome For Rohit Sharma after completing quarantine kvn
Author
Melbourne VIC, First Published Dec 31, 2020, 1:48 PM IST

ಮೆಲ್ಬರ್ನ್(ಡಿ.31): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಂಡ ಕೂಡಿಕೊಂಡಿದ್ದಾರೆ. ಸಿಡ್ನಿಯಲ್ಲೇ 14 ದಿನಗಳ ಕಾಲ ಕಟ್ಟುನಿಟ್ಟಿನ ಕ್ವಾರಂಟೈನ್‌ ಮುಗಿಸಿ, ರೋಹಿತ್ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ.

ಬಿಸಿಸಿಐ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಸಹ ಆಟಗಾರರೆಲ್ಲ ರೋಹಿತ್ ಶರ್ಮಾ ಅವರನ್ನು ಪ್ರೀತಿಯಿಂದ ತಂಡಕ್ಕೆ ಸ್ವಾಗತಿಸಿದ್ದಾರೆ. ಮೊದಲಿಗೆ ಪೃಥ್ವಿ ಶಾ, ರವೀಂದ್ರ ಜಡೇಜಾ ಹಾಗೂ ವೃದ್ದಿಮಾನ್ ಸಾಹ ಹಿಟ್‌ಮ್ಯಾನ್‌ ಅವರನ್ನು ಸ್ವಾಗತಿಸಿದ್ದಾರೆ. ಬಳಿಕ ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಕೂಡಾ ರೋಹಿತ್ ಬಳಿ ಬಂದು ಸ್ವಾಗತ ಕೋರಿದ್ದಾರೆ.

ವಿಡಿಯೋದ ಕೊನೆಯಲ್ಲಿ ರೋಹಿತ್ ಶರ್ಮಾ ಕೋಚ್ ರವಿಶಾಸ್ತ್ರಿ ಹಾಗೂ ಹಂಗಾಮಿ ನಾಯಕ ಅಜಿಂಕ್ಯ ರಹಾನೆಯೊಟ್ಟಿಗೆ ಮಾತುಕತೆ ನಡೆಸುವ ವೇಳೆ ಕ್ವಾರಂಟೈನ್ ಅನುಭವ ಹೇಗಿತ್ತು? ಈಗಂತೂ ಇನ್ನಷ್ಟು ಯುವಕನಾಗಿ ಕಾಣಿಸುತ್ತಿದ್ದೀಯ ಎಂದು ಕೋಚ್‌ ಶಾಸ್ತ್ರಿ ಹಿಟ್‌ಮ್ಯಾನ್‌ಗೆ ಕಾಂಪ್ಲಿಮೆಂಟ್ಸ್‌ ನೀಡಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಶಿಪ್‌: 2ನೇ ಸ್ಥಾನ ಕಾಯ್ದುಕೊಂಡ ಭಾರತ

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಬಳಿಕ ಫಿಟ್ನೆಸ್ ಸಮಸ್ಯೆಗೆ ತುತ್ತಾಗಿದ್ದ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ಆಗಮಿಸಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಹಾಗೂ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು.
 

Follow Us:
Download App:
  • android
  • ios