ಆಸ್ಟ್ರೇಲಿಯಾ ವಿರುದ್ದ ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಡಿ.31): ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪೈಪೋಟಿಯಲ್ಲಿ ಭಾರತ ಉಳಿದುಕೊಂಡಿದೆ. ಮೆಲ್ಬರ್ನ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ 2ನೇ ಟೆಸ್ಟ್‌ನಲ್ಲಿ ಭರ್ಜರಿ 8 ವಿಕೆಟ್‌ ಗೆಲುವು ಸಾಧಿಸಿದ ಭಾರತ 30 ಅಂಕ ಸಂಪಾದಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟು 390 ಅಂಕಗಳನ್ನು ಹೊಂದಿರುವ ಭಾರತದ ಅಂಕ ಪ್ರತಿಶತ ಶೇ.72.2ರಷ್ಟಿದೆ. ಭಾರತದ ವಿರುದ್ಧ ಸೋತಿದ್ದಲ್ಲದೆ ನಿಧಾನಗತಿ ಬೌಲಿಂಗ್‌ನಿಂದಾಗಿ 4 ಅಂಕ ಕಳೆದುಕೊಂಡ ಆಸ್ಪ್ರೇಲಿಯಾ 322 ಅಂಕಗಳನ್ನು ಹೊಂದಿದ್ದು, ಶೇ 76.6 ಅಂಕ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

Scroll to load tweet…

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!

ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಯಗಳಿಸಿದ ನ್ಯೂಜಿಲೆಂಡ್‌, ಶೇ.66.7 ಅಂಕ ಪ್ರತಿಶತದೊಂದಿಗೆ 3ನೇ ಸ್ಥಾನ ಕಾಯ್ದುಕೊಂಡಿದ್ದು ಅಗ್ರ 2ರಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ. ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು 2021ರ ಜುಲೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸೆಣಸಲಿವೆ.

ಡಿಸೆಂಬರ್ 30ರ ಪರಿಷ್ಕೃತ ಅಂಕಪಟ್ಟಿಯಂತೆ ಆಸ್ಟ್ರೇಲಿಯಾ, ಭಾರತ ಮೊದಲೆರಡು ಸ್ಥಾನಗಳಲ್ಲಿ ಇದ್ದರೆ. ಆ ಬಳಿಕ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.