Asianet Suvarna News Asianet Suvarna News

ಭಾರತ vs ನ್ಯೂಜಿಲೆಂಡ್ WTCfinal: 3ನೇ ದಿನದಾಟ ಆರಂಭಕ್ಕೆ ವಿಘ್ನ!

  • ಐತಿಹಾಸಿಕ ವಿಶ್ವ ಟೆಸ್ಟ್ ಟಾಂಪಿಯನ್‌ಶಿಪ್ ಫೈನಲ್ ಪಂದ್ಯ
  • ಆರಂಭಿಕ 2 ದಿನದಲ್ಲೂ ಹಲವು ಅಡೆತಡೆಗಳಿಂದ ಸಾಗಿದ ಪಂದ್ಯ
  • 3ನೇ ದಿನದಾಟ ಆರಂಭ ವಿಳಂಭ
Team India vs New zealand WTC final Day 3 Start delayed due to wet outfield ckm
Author
Bengaluru, First Published Jun 20, 2021, 3:12 PM IST

ಸೌಥಾಂಪ್ಟನ್(ಜೂ.20): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಆರಂಭದಿಂದಲೇ ಕೆಲ ವಿಘ್ನಗಳು ಎದುರಾಗಿದೆ. ಮೊದಲ ದಿನ ಮಳೆಯಿಂದ ಸಂಪೂರ್ಣ ಆಟ ರದ್ದಾಗಿತ್ತು. 2ನೇ ದಿನದಲ್ಲಿ ಮಳೆ, ಮಂದ ಬೆಳಕಿನ ಕಾರಣ ಸಂಪೂರ್ಣ ದಿನದಾಟ ನಡೆದಿಲ್ಲ. ಇದೀಗ 3ನೇ ದಿನದಾಟ ಆರಂಭ ಕೊಂಚ ವಿಳಂಭವಾಗಿದೆ. ಒದ್ದೆಯಾದ ಮೈದಾನವೇ ಇದಕ್ಕೆ ಕಾರಣ.

ಟೀಂ ಇಂಡಿಯಾ ಹೋರಾಟಕ್ಕೆ ಮಳೆ ಅಡ್ಡಿ; ನ್ಯೂಜಿಲೆಂಡ್‌ಗೆ 2ನೇ ದಿನದಾಟದ ಗೌರವ!

ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಸುರಿದ ಮಳೆಗೆ ಮೈದಾನ ಒದ್ದೆಯಾಗಿದೆ. ಬೆಳಗ್ಗೆಯಿಂದಲೇ ಮೈದಾನ ಸಜ್ಜುಗೊಳಿಸಲಾಗುತ್ತಿದೆ. ಆದರೆ ಮೈದಾನ ಇನ್ನೂ ಆಡಲು ಸಜ್ಜುಗೊಂಡಿಲ್ಲ  ಅಂಪೈರ್ ಹಾಗೂ ಮ್ಯಾಚ್‌ರೆಫ್ರಿ ಮೈದಾನ ಪರಿಶೀಲನೆ ನಡೆಸಿದ್ದಾರೆ.  3.30ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಗಿದೆ.

2ನೇ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 34, ಶುಭಮನ್ ಗಿಲ್ 28 ರನ್ ಕಾಣಿಕೆ ನೀಡಿದ್ದರು. ಆದರೆ ಚೇತೇಶ್ವರ್ ಪೂಜಾರ ಕೇವಲ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಕುಸಿದ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಆಸೆರಯಾದರು.

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್!

ದಿಟ್ಟ ಹೋರಾಟ ನಡೆಸಿದ ವಿರಾಟ್ ಕೊಹ್ಲಿ ಅಜೇಯ 44 ರನ್ ಸಿಡಿಸಿದರೆ, ರಹಾನೆ ಅಜೇಯ 29 ರನ್ ಸಿಡಿಸಿದರು. ಪರಿಣಾಣ ಭಾರತ 3 ವಿಕೆಟ್ ಕಳೆದುಕೊಂಡ 146 ರನ್ ಸಿಡಿಸಿತ್ತು. ಬಳಿಕ ಮಂದ ಬೆಳಕಿನ ಕಾರಣ ದಿನದಾಟ ಅಂತ್ಯಗೊಳಿಸಲಾಯಿತು.

Follow Us:
Download App:
  • android
  • ios