Asianet Suvarna News

ದಿನೇಶ್ ಕಾರ್ತಿಕ್ ರಾಕ್ಸ್, ನಾಸಿರ್ ಹುಸೈನ್ ಶಾಕ್ಸ್; ಒಂದು ಪ್ರತಿಕ್ರಿಯೆಗೆ ಕಮೆಂಟೇಟರ್ ಟ್ರೋಲ್!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮಿಂಚಿದ ಡಿಕೆ
  • ವೀಕ್ಷಕ ವಿವರಣೆಗಾರನಾಗಿ ಡಿನೇಶ್ ಕಾರ್ತಿಕ್ ಮೋಡಿ
  • ನಾಸಿರ್ ಹುಸೈನ್ ಕಾಲೆಳೆದು ನೆಟ್ಟಿಗರ ಚಪ್ಪಾಳೆ ಗಿಟ್ಟಿಸಿದ ಕಾರ್ತಿಕ್
     
WTC final IND vs NZ Dinesh Karthik reply shocks commentator Nasser Hussain ckm
Author
Bengaluru, First Published Jun 19, 2021, 6:27 PM IST
  • Facebook
  • Twitter
  • Whatsapp

ಸೌಥಾಂಪ್ಟನ್(ಜೂ.19): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಕಮೆಂಟೇಟರ್ ಬಾಕ್ಸ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪ್ರತ್ಯಕ್ಷವಾಗೋ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ ಕಮೆಂಟರಿ ಆರಂಭವಾಗುತ್ತಿದ್ದಂತೆ, ಇಂಗ್ಲೆಂಡ್ ವೀಕ್ಷಕ ವಿವರಣೆಗಾರ ನಾಸಿರ್ ಹುಸೈನ್ ಕಾಲೆಳೆದು ಇದೀಗ ನೆಟ್ಟಿಗರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಪಡಿಕ್ಕಲ್‌ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆರಂಭಿಸಿತ್ತು. ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದ್ದರು. ರೋಹಿತ್ ಅತ್ಯುತ್ತಮ ಪುಲ್ ಶಾಟ್ ಸಿಡಿಸಿದಾಗ, ಇಂಗ್ಲೆಂಡ್ ಮಾಜಿ ಕ್ರಿಕಟಿಗ, ಕಮೆಂಟೇಟರ್ ನಾಸಿರ್ ಹುಸೈನ್, ರೋಹಿತ್ ಶರ್ಮಾ ಪುಲ್ ಶಾಟ್ ವಿಶ್ಲೇಷಣೆ ಮಾಡಿದ್ದಾರೆ.

ಪ್ರತಿ ಭಾರಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಪರೋಕ್ಷವಾಗಿ ಟಾಂಗ್ ನೀಡುವ ನಾಸಿರ್ ಹುಸೈನ್ ಈ ಬಾರಿ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆಗೆ ದಂಗಾಗಿದ್ದಾರೆ. ರೋಹಿತ್ ಶರ್ಮಾ ಶಾರ್ಟ್ ಬಾಲ್‌ಗಳನ್ನು ಉತ್ತಮವಾಗಿ ಪುಲ್ ಮಾಡುತ್ತಾರೆ. ಇನ್ನು ಸ್ಪಿನ್ ಬೌಲಿಂಗ್ ವೇಳೆ ತಮ್ಮ ಪಾದ ಚಲನೆಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂದಿದ್ದಾರೆ.

ದಿನೇಶ್ ಕಾರ್ತಿಕ್‌ -ಹಾರ್ದಿಕ್ ಪಾಂಡ್ಯ: ಬೇರೆ ಧರ್ಮೀಯರನ್ನು ವರಿಸಿದ ಕ್ರಿಕೆಟರ್ಸ್!.

ಈ ವೇಳೆ ದಿನೇಶ್ ಕಾರ್ತಿಕ್, ಹೌದು, ಖಂಡಿತವಾಗಿಯೂ ನಿಮಗೆ ವಿರುದ್ಧ ಎಂದಿದ್ದಾರೆ. ಕಾರ್ತಿಕ್ ನೀಡಿದ ಪ್ರತಿಕ್ರಿಯೆಯಿಂದ ನಾಸಿರ್ ಹುಸೈನ್ ಟ್ರೋಲ್ ಆಗಿದ್ದಾರೆ. ರೋಹಿತ್ ಉತ್ತಮ ಬ್ಯಾಟ್ಸಮನ್, ಹುಸೈನ್ ಕಳಪೆ ಎಂದು ಪರೋಕ್ಷವಾಗಿ ಹೇಳೋ ಮೂಲಕ ಕಾರ್ತಿಕ್ ಹುಸೈನ್ ಕಾಲೆಳೆದಿದ್ದಾರೆ.

 

Follow Us:
Download App:
  • android
  • ios