Asianet Suvarna News

ಮಳೆ ಆಟಕ್ಕೆ ಭಾರತ-ನ್ಯೂಜಿಲೆಂಡ್ ಸುಸ್ತು, ನಾಲ್ಕನೇ ದಿನದಾಟ ಅಂತ್ಯ!

  • ನಾಲ್ಕನೇ ದಿನದಾಟದಲ್ಲಿ ಸಂಪೂರ್ಣ ಮಳೆ ಆಟ
  • ಒಂದು ಎಸೆತ ಕಾಣದೆ ನಾಲ್ಕನೇ ದಿನದಾಟ ಅಂತ್ಯ
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಫಲಿತಾಂಶ ಅಸ್ಪಷ್ಟ
Team India vs New zealand Test championship final day four abandoned due to  havy rain ckm
Author
Bengaluru, First Published Jun 21, 2021, 8:54 PM IST
  • Facebook
  • Twitter
  • Whatsapp

ಸೌಥಾಂಪ್ಟನ್(ಜೂ.21):  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟಕ್ಕಿಂತ ಮಳೆ ಆರ್ಭಟವೇ ಹೆಚ್ಚಾಗಿದೆ. ಮೊದಲ ದಿನ ಸಂಪೂರ್ಣ ಮಳೆಗೆ ಆಹುತಿಯಾದರೆ, 2ನೇ ದಿನ ಮಂದ ಬೆಳಕಿನ ಕಾಟ ನೀಡಿತ್ತು. 3ನೇ ದಿನ ಸರಾಗವಾಗಿ ನಡೆದರೆ, ನಾಲ್ಕನೇ ದಿನ ಮತ್ತೆ ಮಳೆ ವಕ್ಕರಿಸಿದೆ. ಪರಿಣಾಮ ನಾಲ್ಕನೇ ದಿನಾದಾಟ ಒಂದು ಎಸೆತ ಕಾಣದೆ ಅಂತ್ಯಗೊಂಡಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 10 ವರ್ಷ ಭರ್ತಿ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಳೆಯ ಹವಾಮಾನ ವರದಿ ಪ್ರಕಾರ ಸಂಪೂರ್ಣ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಫಲಿತಾಂಶ ಹೊರಬೀಳುವ ಸಾಧ್ಯತೆ ಕ್ಷೀಣಿಸುತ್ತಿದೆ.

3ನೇ ದಿನದಾಟದ ಅಂತ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಸಿಡಿಸಿತ್ತು. ಆರಂಭಿಕರಾದ ಟಾಮ್ ಲಾಥಮ್ 30 ರನ್ ಸಿಡಿಸಿದರೆ, ಡೆವೋನ್ ಕಾನ್ವೆ 54 ರನ್ ಸಿಡಿಸಿದ್ದರು. ಆರಂಭಿಕರ ಜೊತೆಯಾಟದಿಂದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಆದರೆ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಹೋರಾಟದಿಂದ ಭಾರತ 2 ವಿಕೆಟ್ ಕಬಳಿಸಿತ್ತು.

ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!

ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್ ಹಿನ್ನಡೆಯಲ್ಲಿದೆ

Follow Us:
Download App:
  • android
  • ios