Asianet Suvarna News Asianet Suvarna News

ಜಿಂಬಾಬ್ವೆ ಪ್ರವಾಸಕ್ಕೆ ಕೆಲ ದಿನಗಳ ಮೊದಲು ಮಹತ್ವದ ಬದಲಾವಣೆ, ಧವನ್ ಬದಲು ರಾಹುಲ್‌ಗೆ ನಾಯಕತ್ವ!

ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಆದರೆ ಪ್ರವಾಸಕ್ಕೆ ಕೆಲವೇ ದಿನಗಳ ಮೊದಲು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶಿಖರ್ ಧವನ್‌ಗೆ ನೀಡಲಾಗಿದ್ದ ನಾಯಕತ್ವ ವಾಪಸ್ ಪಡೆಯಲಾಗಿದೆ.

Team India tour of Zimbabwe 2022 KL Rahul Replace Shikhar dhawan as a captain ckm
Author
Bengaluru, First Published Aug 11, 2022, 9:55 PM IST

ಮುಂಬೈ(ಆ.11): ಟೀಂ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಏಕದಿನ ಸರಣಿ ಆಗಸ್ಟ್ 18 ರಿಂದ ಆರಂಭಗೊಳ್ಳುತ್ತಿದೆ. ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಶಿಖರ್ ಧವನ್‌ಗೆ ಜಿಂಬಾಬ್ವೆ ಪ್ರವಾಸದಲ್ಲೂ ನಾಯಕತ್ವ ನೀಡಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ದದ ಸರಣಿಗೆ ಕೆಲ ದಿನ ಬಾಕಿ ಇರುವಾಗಲೇ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಶಿಖರ್ ಧವನ್ ನಾಯಕತ್ವ ವಾಪಸ್ ಪಡೆಯಲಾಗಿದ್ದು, ಈ ಸ್ಥಾನವನ್ನು ಕೆಎಲ್ ರಾಹುಲ್‌ಗೆ ನೀಡಲಾಗಿದೆ. ಕೆಎಲ್ ರಾಹುಲ್ ಕೋವಿಡ್ ಕಾರಣದಿಂದ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದರು. ಚೇತರಿಕೆಗೆ ಹೆಚ್ಚಿನ ಸಮಯದ ಕಾರಣ ಜಿಂಬಾಬ್ವೆ ಪ್ರವಾಸದಲ್ಲಿ ಶಿಖರ್ ಧವನ್‌ಗೆ ಮತ್ತೆ ನಾಯಕತ್ವ ನೀಡಲಾಗಿತ್ತು. ಆದರೆ ಕೆಎಲ್ ರಾಹುಲ್ ಕೋವಿಡ್‌ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಕೆಎಲ್  ರಾಹುಲ್‌ಗೆ ಏಕದಿನ ತಂಡದ ನಾಯಕತ್ವ ನೀಡಲಾಗಿದೆ.

ಜಿಂಬಾಬ್ವೆ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕನಾಗಿ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಶಿಖರ್ ಧವನ್‌ಗೆ ಉಪನಾಯಕ ಪಟ್ಟ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಜಿಂಬಾಬ್ವೆ ಸರಣಿಯಿಂದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ.

ಹೊಸ ಅವತಾರದಲ್ಲಿ ಕ್ಯಾಪ್ಟನ್ ಕೂಲ್‌ ಧೋನಿ ಕಮ್ಮಿಂಗ್​​

ವೆಸ್ಚ್ ಇಂಡೀಸ್ ವಿರುದ್ದದ ಏಕದಿನ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್‌ 5 ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗುಳಿದಿದ್ದರು.  ಕೋವಿಡ್‌ಗೆ ತುತ್ತಾಗಿರುವ ರಾಹುಲ್‌  ಸಂಪೂರ್ಣ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ  ವಿಶ್ರಾಂತಿ ಸೂಚಿಸಲಾಗಿತ್ತು. ಚೇತರಿಕೆ ಹಾದಿಯಲ್ಲಿದ್ದ ಕೆಎಲ್ ರಾಹುಲ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಜಿಂಬಾಬ್ವೆ ವಿರುದ್ಧದ ಸರಣಿಯಿಂದಲೂ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಸಂಪೂರ್ಣ ಚೇತರಿಸಿಕೊಂಡು ಫಿಟ್ನೆಸ್ ಸಾಬೀತು ಪಡಿಸಿರುವ ಕೆಎಲ್ ರಾಹುಲ್ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ
ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

 

Asia Cup 2022: ಹಾರ್ದಿಕ್​​​ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟಿತಾ ಬಿಸಿಸಿಐ..?

ಭಾರತ ಜಿಂಬಾಬ್ವೆ ನಡುವಿನ ಏಕದಿನ ಸರಣಿ
ಆಗಸ್ಟ್ 18, ಮೊದಲ ಏಕದಿನ ಪಂದ್ಯ, 12:45 PM
ಆಗಸ್ಟ್ 20, ಏರಡನೇ ಏಕದಿನ ಪಂದ್ಯ, 12:45 PM
ಆಗಸ್ಟ್ 22, ಮೂರನೇ ಏಕದಿನ ಪಂದ್ಯ, 12:45 PM

ಎಲ್ಲಾ ಪಂದ್ಯಗಳಿಗೆ ಜಿಂಬಾಬ್ವೆ ಹರಾರೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.  ಈ ಮೊದಲು 2016ರಲ್ಲಿ ಎಂ.ಎಸ್‌.ಧೋನಿ ಸಾರಥ್ಯದ ಭಾರತ ತಂಡ ಕೊನೆ ಬಾರಿ ಜಿಂಬಾಬ್ವೆಯಲ್ಲಿ ತಲಾ 3 ಪಂದ್ಯಗಳ ಏಕದಿನ, ಟಿ20ಕ್ರಿಕೆಟ್‌ ಸರಣಿ ಆಡಿತ್ತು.
 

Follow Us:
Download App:
  • android
  • ios