ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಶಾಕ್ಉಪನಾಯಕ ಪಟ್ಟ ಉಳಿಸಿಕೊಳ್ಳಲು ವಿಫಲವಾದ ಹಾರ್ದಿಕ್‌ನಾಯಕನಾಗಿ ಇತ್ತೀಚೆಗೆ ಯಶಸ್ವಿಯಾಗಿರುವ ಬರೋಡ ಆಲ್ರೌಂಡರ್ ಪಾಂಡ್ಯ

ಬೆಂಗಳೂರು(ಆ.11): ಏಷ್ಯಾಕಪ್​ಗೆ ಟೀಂ ಇಂಡಿಯಾವನ್ನ ಆನೌನ್ಸ್ ಮಾಡುತ್ತಿದಂತೆ ತಂಡದಲ್ಲಿ ನಾವಿದ್ದೀವಾ ಅಂತ ಕೆಲ ಪ್ಲೇಯರ್ಸ್ ತಮ್ಮ ಹೆಸರುಗಳನ್ನ ಹುಡುಕುತ್ತಿದ್ದರೆ, ಹಾರ್ದಿಕ್ ಪಾಂಡ್ಯ ಮಾತ್ರ ನಾನು ವೈಸ್ ಕ್ಯಾಪ್ಟನ್ ಆಗಿ ಮುಂದುವರೆದಿದ್ದೀನಾ ಅಂತ ನೋಡ್ತಿದ್ದರು. ಆದ್ರೆ ಟೀಂ​ ನೋಡಿದ್ಮೇಲೆ ಬರೋಡ ಆಲ್​ರೌಂಡರ್​ಗೆ ನಿರಾಸೆ ಕಾದಿತ್ತು. ಯಾಕಂದರೆ ಕನ್ನಡಿಗ ಕೆಎಲ್ ರಾಹುಲ್, ಟೀಮ್​ಗೆ ರಿಟರ್ನ್​ ಆಗಿದ್ದು, ಅವರೇ ವೈಸ್ ಕ್ಯಾಪ್ಟನ್ ಅಂತ ಅನೌನ್ಸ್ ಮಾಡಲಾಗಿತ್ತು. ತನ್ನ ಕ್ಲೋಸ್ ಫ್ರೆಂಡ್​ ವೈಸ್ ಕ್ಯಾಪ್ಟನ್ ಆಗಿದ್ದರೂ ಪಾಂಡ್ಯ ಮಾತ್ರ ಬೇಸರದಲ್ಲಿದ್ದಾರೆ.

ಈ ಸಲ ಐಪಿಎಲ್​ನಲ್ಲಿ ಗುಜರಾತ್ ಟೈಟನ್ಸ್​ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ಟಿ20 ಸಿರೀಸ್​ನಲ್ಲಿ ಟೀಂ ಇಂಡಿಯಾ ಲೀಡ್ ಮಾಡಿದ್ದರು. ವಿಂಡೀಸ್ ವಿರುದ್ಧ ಕೊನೆ ಪಂದ್ಯದಲ್ಲೂ ಅವರೇ ನಾಯಕ. ಮೂರಕ್ಕೆ ಮೂರು ಟಿ20 ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟ ಪಾಂಡ್ಯ, ಟಿ20 ತಂಡಕ್ಕೆ ಖಾಯಂ ಉಪನಾಯಕನಾಗೋ ಆಸೆ ವ್ಯಕ್ತಪಡಿಸಿದ್ದರು. ಆದ್ರೆ ಪಾಂಡ್ಯ ಕನಸಿಗೆ ಸೆಲೆಕ್ಟರ್ಸ್ ಎಣ್ಣು ನೀರು ಬಿಟ್ಟಿದ್ದಾರೆ.

ಎರಡು ತಿಂಗಳಲ್ಲಿ 7 ಸರಣಿ ಮಿಸ್, ಆದರೂ ರಾಹುಲ್​ ವೈಸ್ ಕ್ಯಾಪ್ಟನ್:

ಹೌದು, ಐಪಿಎಲ್ ಬಳಿಕ ರಾಹುಲ್ ಒಂದೇ ಒಂದು ಸರಣಿ ಆಡಿಲ್ಲ. ಸೌತ್ ಆಫ್ರಿಕಾ ಟಿ20 ಸರಣಿಯಲ್ಲಿ ನಾಯಕನಾಗಿದ್ದ ಕನ್ನಡಿಗ, ಪಂದ್ಯ ಆರಂಭಕ್ಕೂ ಮುನ್ನ ಇಂಜುರಿಯಾಗಿ ಹೊರಬಿದ್ದರು. ಬಳಿಕ ಸ್ಪೋರ್ಟ್ಸ್ ಹರ್ನಿಯಾ ಮತ್ತು ಕೋವಿಡ್​-19ನಿಂದ ಬಳಲಿ ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 7 ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಈಗ ಫಿಟ್ ಆಗಿ ಏಷ್ಯಾಕಪ್​ಗೆ ರಿಟರ್ನ್​ ಆಗಿದ್ದಾರೆ. ಅದು ವೈಸ್ ಕ್ಯಾಪ್ಟನ್ ಆಗಿ.

ಮಿಚೆಲ್ ಸ್ಟಾರ್ಕ್​- ಅಲೀಸಾ ಹೀಲಿ ಕ್ರಿಕೆಟ್​​ ಜಗತ್ತಿನ ಚಾಂಪಿಯನ್​ ಜೋಡಿ..!

ಪದೇ ಪದೇ ಗಾಯಾಳುವಾಗಿ ತಂಡದಿಂದ ಹೊರಬಿದ್ದರೂ, ಸತತ 7 ಸರಣಿಗಳನ್ನ ಮಿಸ್ ಮಾಡಿಕೊಂಡರೂ ರಾಹುಲ್​ ಅವರನ್ನ ಮತ್ತೆ ವೈಸ್ ಕ್ಯಾಪ್ಟನ್ ಮಾಡಿದ್ದೇಕೆ ಅನ್ನೋ ಪ್ರಶ್ನೆ ಕಾಡದೆ ಇರಲ್ಲ. ಸದ್ಯ ಟೀಂ ಇಂಡಿಯಾದಲ್ಲಿ ಮೂರು ಫಾಮ್ಯಾಟ್ ಆಡೋರು ಇರೋದು ಕೆಲವೇ ಕೆಲವು ಆಟಗಾರರು ಮಾತ್ರ. ಅದರಲ್ಲಿ ರಾಹುಲ್ ಸಹ ಒಬ್ಬರು. ಈ ಕೆಲ ಆಟಗಾರರಲ್ಲಿ ಭವಿಷ್ಯದಲ್ಲಿ ಕ್ಯಾಪ್ಟನ್ ಆಗೋ ಅರ್ಹತೆ ಇರೋದು ರಾಹುಲ್​ಗೆ ಮಾತ್ರ. ಹಾಗಾಗಿ ಕನ್ನಡಿಗನಿಗೆ ವೈಸ್ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ.

ಭಾರತೀಯ ಕ್ರಿಕೆಟರ್​ಗಳಲ್ಲಿ ಉತ್ತಮ ಫಿಟ್ನೆಸ್ ಹೊಂದಿರುವ ಕೆಲವೇ ಕೆಲ ಆಟಗಾರರಲ್ಲಿ ರಾಹುಲ್ ಸಹ ಒಬ್ಬರು. ಆದ್ರೆ ಅದ್ಯಾಕೋ ಅವರಿಗೆ ಗಾಯ ಅನ್ನೋ ಭೂತ ಬೆಂಬಿಡದೆ ಕಾಡುತ್ತಿದೆ. ಇನ್ನು ಮುಂದೆಯಾದ್ರೂ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿದ್ರೆ ಉತ್ತಮ. ಯಾಕಂದ್ರೆ ಮೂರು ಫಾಮ್ಯಾಟ್​ನಲ್ಲೂ ಉತ್ತಮ ಪ್ರದರ್ಶನ ನೀಡೋ ರಾಹುಲ್, ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ದ್ರಾವಿಡ್​-ಕುಂಬ್ಳೆ ನಂತರ ಮತ್ತೊಬ್ಬ ಕನ್ನಡಿಗ ಟೀಂ ಇಂಡಿಯಾ ಕ್ಯಾಪ್ಟನ್ ಆಗೋದನ್ನ ನೋಡಲು ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಜತನದಿಂದ ಕಾಯ್ತಿದ್ದಾರೆ.