Asianet Suvarna News Asianet Suvarna News

ಹೊಸ ಅವತಾರದಲ್ಲಿ ಕ್ಯಾಪ್ಟನ್ ಕೂಲ್‌ ಧೋನಿ ಕಮಿಂಗ್​​

* ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿ ಹೆಗಲಿಗೆ ಮತ್ತೊಂದು ಜವಾಬ್ದಾರಿ
* ಮತ್ತೆ ಹೊಸ ಅವತಾರದಲ್ಲಿ ಘರ್ಜಿಸಲು ಧೋನಿ ರೆಡಿ
*  ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡವೊಂದರ ಮೆಂಟರ್?

Chennai Super Kings eye MS Dhoni as mentor in CSA T20 league Says Report kvn
Author
Bengaluru, First Published Aug 11, 2022, 6:50 PM IST

ಬೆಂಗಳೂರು(ಆ.11): ಎಂ. ಎಸ್. ಧೋನಿ, ಈ ಲೆಜೆಂಡ್ರಿ ಹೆಸರನ್ನು ಕೇಳಿದ್ರೆ ಮೈಯಲ್ಲಿ ಮಿಂಚಿನ ಸಂಚಾರವಾಗುತ್ತೆ. ಇಂಟರ್​ನ್ಯಾಶನಲ್​ ಕ್ರಿಕೆಟ್​ಗೆ ವಿದಾಯ ಹೇಳಿದ್ರೂ ಈಗಲೂ ಮಹಿಯ ಪವರ್​ ಮತ್ತು ಪವಾಡ ಕಮ್ಮಿಯಾಗಿಲ್ಲ. ಸದ್ಯ ಮಹಿ ಬರೀ ಐಪಿಎಲ್​​​ನಲ್ಲಷ್ಟೇ ಕಾಣಿಸಿಕೊಳ್ತಿದ್ದಾರೆ. ವರ್ಷಕ್ಕೊಮ್ಮೆ ಆದ್ರೂ ಕ್ರಿಕೆಟ್ ಲೋಕದಲ್ಲಿ ಮಾಸ್ಟರ್ ​​ಮೈಂಡ್​​ ಇನ್ನೂ ಹೆಸರು ಗುನುಗುತ್ತಿದೆ. ಅದು ಈ ದಿ ಚಾಂಪಿಯನ್​​ ಕ್ಯಾಪ್ಟನ್​​​​​ ಹೆಸರಿಗಿರುವ ತಾಕತ್ತು, ಗತ್ತು ಕಣ್ರಿ.

ಬರೀ ಐಪಿಎಲ್​​ಗೆ ಸೀಮಿತವಾಗಿದ್ದ ಧೋನಿ, ಈಗ ಮತ್ತೆ ಹೊಸ ಅವತಾರದಲ್ಲಿ ಘರ್ಜಿಸಲು ಸಜ್ಜಾಗಿದ್ದಾರೆ. ಅಂದ್ರೆ ಐಪಿಎಲ್​ ಆಚೆಗೂ ಮಹಿಯನ್ನ ನೀವು ಇನ್ಮುಂದೆ ಅಂಗಳದಲ್ಲಿ ನೋಡಬಹುದು. ಹಾಗಂತ ಗ್ಲೌಸ್​ ಹಿಡಿದು ವಿಕೆಟ್ ಕೀಪರ್ ಆಗಿ ಅಲ್ಲ. ಬದಲಿಗೆ ಮೆಂಟರ್ ಅನ್ನೋ ನ್ಯೂ ಗೆಟಪ್​​ನಲ್ಲಿ. 

ಸಿಎಸ್​​ಕೆ ತಂಡಕ್ಕೆ ಕೀಪಿಂಗ್​ ರಾಜ ಮೆಂಟರ್​​: 

ಹೌದು, ಎರಡು ವಿಶ್ವಕಪ್ ವಿಜೇತ ಟೀಂ ಇಂಡಿಯಾದ ನಾಯಕ, ಚೆನ್ನೈ ಸೂಪರ್ ಕಿಂಗ್ಸ್​​​​​ನ ಲೆಜೆಂಡ್ರಿ ಕ್ಯಾಪ್ಟನ್ ಧೋನಿ, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡವೊಂದರ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆ ಮೂಲಕ ರಾಂಚಿ ಪುತ್ತರ್​​ ಹೊಸ ಜವಾಬ್ದಾರಿ ಹೊರಲು ಸಜ್ಜಾಗಿದ್ದಾರೆ. ದಕ್ಷಿಣ ಆಫ್ರಿಕಾ ಟಿ20 ಲೀಗ್ ಮುಂದಿನ ವರ್ಷ ಜನವರಿಯಲ್ಲಿ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಆಡುವ ಆರು ತಂಡಗಳನ್ನ ಐಪಿಎಲ್​ ಫ್ರಾಂಚೈಸಿಗಳೇ ಖರೀದಿಸಿವೆ. ಜೊಹಾನ್ಸ್​​​​ ಬರ್ಗ್ ಫ್ರಾಂಚೈಸಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಹೀಗಾಗಿ ಜೊಹಾನ್ಸ್’ಬರ್ಗ್ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. 

Asia Cup 2022: ಹಾರ್ದಿಕ್​​​ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟಿತಾ ಬಿಸಿಸಿಐ..?

ಇನ್ನು ಚೆನ್ನೈ ಪರ ಐಪಿಎಲ್​​ನಲ್ಲಿ ಆಡಿದ ಆಟಗಾರರನ್ನೇ ಜೋಹನ್ಸ್​​ ಬರ್ಗ್​ ತಂಡಕ್ಕೆ ಕೊಂಡುಕೊಳ್ಳಲು ಭರ್ಜರಿ ಪ್ಲಾನ್​​ ಕೂಡ ನಡೆದಿದೆ. ಸಿಎಸ್​​ಕೆ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್​​​​ರನ್ನ ಮಾರ್​ಕ್ಯೂ ಆಟಗಾರನಾಗಿ ಖರೀದಿಸಲು ಚೆನ್ನೈ ತಯಾರಿ ನಡೆಸಿದೆ. ಒಟ್ಟು 17 ಆಟಗಾರರನ್ನ ಒಂದು ತಂಡ ಖರೀದಿಸಬಹುದಾಗಿದ್ದು, ಸಿಎಸ್​​ಕೆ ಜೋಹನ್ಸ್​​ ಬರ್ಗ್​ ತಂಡ ಧೋನಿ ಮಾರ್ಗದರ್ಶನದಲ್ಲಿ ಮುನ್ನಡೆಯಲು ಸಿದ್ಧತೆ ನಡೆದಿದೆ.

ಇನ್ನು ಐಪಿಎಲ್‌ ಫ್ರಾಂಚೈಸಿಗಳಿಂದ ಒತ್ತಡವಿರುವ ಕಾರಣ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮನ್ಯ ಸಭೆಯಲ್ಲಿ ಬಿಸಿಸಿಐ ನಿರ್ಧರಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಹೊಸದಾಗಿ ಆರಂಭಿಸುತ್ತಿರುವ ಟಿ20 ಲೀಗ್‌ನ ಎಲ್ಲಾ 6 ತಂಡಗಳನ್ನು ಖರೀದಿಸಿದ ಐಪಿಎಲ್‌ ಫ್ರಾಂಚೈಸಿಗಳು, ಬಿಸಿಸಿಐ ಮೇಲೆ ಒತ್ತಡ ಹೇರುತ್ತಿವೆ ಎನ್ನಲಾಗಿದೆ. ಸದ್ಯ ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡಬೇಕಿದ್ದರೆ, ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಿದೆ.

Follow Us:
Download App:
  • android
  • ios