ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಲಿರುವ ಟೀಂ ಇಂಡಿಯಾಬಾಂಗ್ಲಾ ಪ್ರವಾಸದಲ್ಲಿ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯವನ್ನಾಡಲಿರುವ ಭಾರತಡಿಸೆಂಬರ್ 4ರಿಂದ ಸರಣಿ ಆರಂಭಗೊಳ್ಳಲಿದೆ ಎಂದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ

ಢಾಕಾ(ಅ.21): 2015ರ ಬಳಿಕ ಭಾರತ ಕ್ರಿಕೆಟ್‌ ತಂಡ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳ ಸರಣಿಗಳನ್ನು ಆಡಲಿದೆ. ಡಿಸೆಂಬರ್ 4ರಿಂದ ಸರಣಿ ಆರಂಭಗೊಳ್ಳಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಗುರುವಾರ ಘೋಷಿಸಿದೆ. ಢಾಕಾದ ಮೀರ್‌ಪುರ್‌ ಕ್ರೀಡಾಂಗಣದಲ್ಲಿ ಡಿಸೆಂಬರ್ 4, ಡಿಸೆಂಬರ್ 7, ಡಿಸೆಂಬರ್ 10ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 14ರಿಂದ 18ರ ವರೆಗೂ ಛಟ್ಟೋಗ್ರಾಮ್‌ನಲ್ಲಿ ಮೊದಲ ಟೆಸ್ಟ್‌, ಡಿ.22ರಿಂದ 26ರ ವರೆಗೂ ಢಾಕಾದಲ್ಲಿ 2ನೇ ಟೆಸ್ಟ್‌ ನಡೆಯಲಿದೆ. ಟೆಸ್ಟ್‌ ಸರಣಿಯು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಒಳಪಡಲಿದೆ.

ಮುಷ್ತಾಕ್‌ ಅಲಿ ಟಿ20: ಕರ್ನಾಟಕಕ್ಕೆ ಸುಲಭ ಜಯ

ಮೊಹಾಲಿ: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಕ್ವಾರ್ಟರ್‌ ಫೈನಲ್‌ ರೇಸ್‌ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸರ್ವಿಸಸ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಗುಂಪು ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಆ ಪಂದ್ಯದಲ್ಲಿ ಹರಾರ‍ಯಣ ವಿರುದ್ಧ ಗೆದ್ದರೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ. ಸೋತರೆ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಬೇಕಿದೆ.

ಸರ್ವಿಸಸ್‌ ವಿರುದ್ಧ ರಾಜ್ಯದ ಬೌಲರ್‌ಗಳು ಮಾರಕ ದಾಳಿ ಸಂಘಟಿಸಿದರು. ಇದರ ಪರಿಣಾಮ ಮೊದಲು ಬ್ಯಾಟ್‌ ಮಾಡಿದ ಸರ್ವಿಸಸ್‌ 20 ಓವರಲ್ಲಿ 8 ವಿಕೆಟ್‌ಗೆ 129 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಅಮಿತ್‌ ಪಚ್ಚಾರ 35 ರನ್‌ ಗಳಿಸಿದರು. ರಾಜ್ಯದ ಪರ ವೈಶಾಕ್‌ 3, ಕೆ.ಗೌತಮ್‌ 2 ವಿಕೆಟ್‌ ಕಬಳಿಸಿದರು.

ಆಟಗಾರರ ಗಾಯಕ್ಕೆ ಕಾರಣ ಪತ್ತೆ ಹಚ್ಚುತ್ತೇವೆ: ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ

ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 39 ರನ್‌ಗೆ 2 ವಿಕೆಟ್‌ ಕಳೆದುಕೊಂಡರೂ, ಆರಂಭಿಕ ಬ್ಯಾಟರ್‌ ಎಲ್‌.ಆರ್‌.ಚೇತನ್‌ ಔಟಾಗದೆ 61, ಮನೀಶ್‌ ಪಾಂಡೆ ಔಟಾಗದೆ 37 ರನ್‌ ಗಳಿಸಿ ತಂಡವನ್ನು 18.1 ಓವರಲ್ಲಿ ಗೆಲ್ಲಿಸಿದರು.

ಸ್ಕೋರ್‌: ಸರ್ವಿಸಸ್‌ 20 ಓವರಲ್ಲಿ 129/8(ಅಮಿತ್‌ 35, ವೈಶಾಕ್‌ 3-24, ಗೌತಮ್‌ 2-13) 
ಕರ್ನಾಟಕ 18.1 ಓವರಲ್ಲಿ 130/2(ಚೇತನ್‌ 61*, ಪಾಂಡೆ 37*, ಪುಲ್ಕಿತ್‌ 1-14)

ಮಹಿಳಾ ಬಿಗ್‌ಬ್ಯಾಶ್‌: ಹರ್ಮನ್‌ಪ್ರೀತ್‌ ಔಟ್‌

ಮೆಲ್ಬರ್ನ್‌: ಬೆನ್ನು ನೋವಿನಿಂದ ಬಳಲುತ್ತಿರುವ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಈ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್‌ ಟಿ20 ಲೀಗ್‌ನಿಂದ ಹೊರಬಿದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಮೆಲ್ಬರ್ನ್‌ ರೆನಿಗೇಡ್‌್ಸ ತಂಡವನ್ನು ಪ್ರತಿನಿಧಿಸಿದ್ದ ಹರ್ಮನ್‌, ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಏಷ್ಯಾಕಪ್‌ನಿಂದಾಗಿ ಈ ಆವೃತ್ತಿಯ ಮೊದಲೆರೆಡು ಪಂದ್ಯಗಳಿಗೆ ಗೈರಾಗಿದ್ದ ಹರ್ಮನ್‌ ಈಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅ.13ರಿಂದ ಆರಂಭಗೊಂಡಿರುವ 8ನೇ ಆವೃತ್ತಿ ನ.20ರ ವರೆಗೂ ನಡೆಯಲಿದೆ.