Asianet Suvarna News Asianet Suvarna News

Virat Kohli vs Rohit Sharma: ಒಂಡೇ ಕ್ಯಾಪ್ಟನ್ ಟೆಸ್ಟ್ ಸರಣಿಗಿಲ್ಲ, ಟೆಸ್ಟ್ ಕ್ಯಾಪ್ಟನ್ ಏಕದಿನ ಸರಣಿಗೆ ಇಲ್ಲ!

ಜನವರಿ 11 ಕ್ಕೆ ಮಗಳು ವಮಿಕಾಗೆ ಒಂದು ವರ್ಷ
ಕುಟುಂಬದ ಜೊತೆ ಪ್ರವಾಸದ ಯೋಚನೆಯಲ್ಲಿರುವ ವಿರಾಟ್ ಕೊಹ್ಲಿ
ಟೆಸ್ಟ್ ಸರಣಿ ಮುಗಿದ ಬಳಿಕ ಪ್ರವಾಸದ ಚಿಂತನೆ
 

Team India Test Captain virat kohli may Skip odi series against south africa san
Author
Bengaluru, First Published Dec 14, 2021, 12:42 PM IST | Last Updated Dec 14, 2021, 12:42 PM IST

ಬೆಂಗಳೂರು (ಡಿ. 14): ಕಳೆದ ವಾರದ ದೊಡ್ಡ ಬೆಳವಣಿಗೆಯಲ್ಲಿ ಟೀಂ ಇಂಡಿಯಾ (Team India) ಏಕದಿನ ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿಯನ್ನು (Virat Kohli) ವಜಾ ಮಾಡಿ ರೋಹಿತ್ ಶರ್ಮ (Rohit Sharma)ಅವರನ್ನು ನೇಮಕ ಮಾಡಲಾಯಿತು. ಬಿಸಿಸಿಐ (BCCI) ನೇತೃತ್ವದಲ್ಲಿ ಆಯ್ಕೆ ಸಮಿತಿ ಮಾಡಿದ ಈ ನಿರ್ಧಾರದಿಂದ ಒಂದಲ್ಲಾ ಒಂದು ಟೀಕೆಗಳು ಕ್ರಿಕೆಟ್ ಮಂಡಳಿಯ ಮೇಲೆ ಕೇಳು ಬರುತ್ತಿವೆ. ವಿರಾಟ್ ಕೊಹ್ಲಿಗೆ ಯಾವ ಸೂಚನೆಯನ್ನೂ ನೀಡದೇ ಅವರನ್ನು ವಜಾ ಮಾಡಲಾಯಿತು ಎನ್ನುವ ವರದಿ ಬಂದ ಬಳಿಕ, ಕಿಂಗ್ ಕೊಹ್ಲಿಯ ಅಭಿಮಾನಿಗಳು ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದರು.

ಸೋಮವಾರದ ಬೆಳವಣಿಗೆಯಲ್ಲಿ ಸ್ನಾಯುಸೆಳೆತದ ಗಾಯಕ್ಕೆ ತುತ್ತಾದ ಏಕದಿನ ತಂಡದ ನಾಯಕ ರೋಹಿತ್ ಶರ್ಮ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದು ಅವರ ಬದಲು ಪ್ರಿಯಾಂಕ್ ಪಾಂಚಾಲ್ ರನ್ನು (Priyank Panchal) ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ (Jay Shah) ಪ್ರಕಟಣೆಯ ಮೂಲಕ ತಿಳಿಸಿದ್ದರು.ಹೊಸ ಬೆಳವಣಿಗೆಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಭಾಗವಹಿಸದೇ ಇರುವ ತೀರ್ಮಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಮಗಳು ವಮಿಕಾಗೆ (Vamika)ಜನವರಿ 11 ರಂದು ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿ ಕೊಹ್ಲಿ ಇದ್ದಾರೆ.

ನಾಯಕ ಸ್ಥಾನದಿಂದ ವಜಾ ಮಾಡಿದ ಬಳಿಕ ವಿರಾಟ್ ಕೊಹ್ಲಿ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿಲ್ಲ. ಆದರೆ, ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮುಂಬರುವ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎನ್ನುವುದನ್ನು ವಿರಾಟ್ ಕೊಹ್ಲಿ ಈಗಾಗಲೇ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಟೆಸ್ಟ್ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಟೆಸ್ಟ್ ಸರಣಿ ಮುಗಿದ ಬಳಿಕ, ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.  ನಾಯಕತ್ವದ ವಿಚಾರವಾಗಿ ಕೊಹ್ಲಿ ಈವರೆಗೂ ಏನೂ ಮಾತನಾಡಿಲ್ಲವಾದರೂ, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ತಮ್ಮ ನಿರ್ಧಾರಕ್ಕೂ ನಾಯಕತ್ವದಿಂದ ವಜಾ ಮಾಡಿದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ.

India tour South Africa ಟೀಂ ಇಂಡಿಯಾ ಬಿಗ್ ಶಾಕ್, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್!
ಮಗಳ ಒಂದನೇ ವರ್ಷದ ಜನ್ಮದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವ ಯೋಜನೆಯಲ್ಲಿ ಕೊಹ್ಲಿ ಇದ್ದಾರೆ. ಕಳೆದ ವರ್ಷದ ಜನವರಿ 11 ರಂದು ವಮಿಕಾ ಜನಿಸಿದ್ದಳು. ಆದರೆ, ಈ ವರ್ಷ ಜನವರಿ 11 ರಿಂದ ಜನವರಿ 15ರ ವೇಳೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ಆಡುತ್ತಿರುತ್ತದೆ. ಟೆಸ್ಟ್ ಸರಣಿ ಮುಗಿದ ಬಳಿಕ ಕುಟುಂಬದೊಂದಿಗೆ ಮಗಳ ಜನ್ಮದಿನವನ್ನು ಆಚರಿಸುವ ಯೋಚನೆಯನ್ನು ಕೊಹ್ಲಿ ಮಾಡಿದ್ದಾರೆ ಎಂದು ವರದಿಯಾಗಿದೆ.

Rohit Sharma on Virat Kohli: ಕೊಹ್ಲಿ ನಾಯಕತ್ವದಲ್ಲಿ ಪ್ರತಿ ಕ್ಷಣ ಆನಂದಿಸಿದ್ದೇನೆಂದ ರೋಹಿತ್‌
ನಾಯಕತ್ವ ಬದಲಾವಣೆ ಮಾಡಿರುವ ಕುರಿತಾಗಿ  ಏಕದಿನ ತಂಡದ ಟೆಸ್ಟ್ ಸರಣಿಗೆ ಇಲ್ಲದೇ ಇರುವುದು ಹಾಗೂ ಟೆಸ್ಟ್ ತಂಡದ ನಾಯಕ ಏಕದಿನ ಸರಣಿಗೆ ಇಲ್ಲದೇ ಇರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನಗಳೂ ವ್ಯಕ್ತವಾಗಿವೆ.  ಟೀಂ ಇಂಡಿಯಾ ಏಕದಿನ ತಂಡದ ನಾಯಕತ್ವ ಬದಲಾವಣೆ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನಾಯಕತ್ವವನ್ನು ಬದಲಾವಣೆ ಮಾಡಿದ್ದಕ್ಕಿಂತ ಹೆಚ್ಚಾಗಿ, ಬದಲಾವಣೆ ಮಾಡಿದ ರೀತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ವಿರಾಟ್ ಕೊಹ್ಲಿಯಿಂದ ಜವಾಬ್ದಾರಿಯನ್ನು ರೋಹಿತ್ ಶರ್ಮಗೆ ನೀಡುವ ವೇಳೆ ಬಿಸಿಸಿಐ ಅಥವಾ ಅಯ್ಕೆ ಸಮಿತಿ ಇನ್ನಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಣೆ ಮಾಡಬೇಕಿತ್ತು ಎನ್ನುವುದು ಮಾಜಿ ಕ್ರಿಕೆಟಿಗರ ಅಭಿಪ್ರಾಯವಾಗಿದೆ.

Latest Videos
Follow Us:
Download App:
  • android
  • ios