Asianet Suvarna News Asianet Suvarna News

India tour South Africa ಟೀಂ ಇಂಡಿಯಾ ಬಿಗ್ ಶಾಕ್, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್!

  • ಸೌತ್ ಆಫ್ರಿಕಾ ಪ್ರವಾಸದಲ್ಲಿ ಭಾರತಕ್ಕೆ ಮೊದಲ ಆಘಾತ
  • ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಹೊರಕ್ಕೆ
  • ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಅಲಭ್ಯ
India tour of South Africa Rohit Sharma ruled out from Test series Priyank Panchal named replacement ckm
Author
Bengaluru, First Published Dec 13, 2021, 9:06 PM IST

ಮುಂಬೈ(ಡಿ.13):  ಸೌತ್ ಆಫ್ರಿಕಾ ಸರಣಿಗೂ ಮುನ್ನ ಟೀಂ ಇಂಡಿಯಾದಲ್ಲಿನ(Team India) ಕೆಲ ಬದಲಾವಣೆ, ಓಮಿಕ್ರಾನ್ ಪ್ರಕರಣಗಳು ಭಾರತದಲ್ಲಿ ಭಾರಿ ಸದ್ದು ಮಾಡಿತ್ತು. ನಿಗದಿತ ಓವರ್ ಕ್ರಿಕೆಟ್‌ಗೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿತ್ತು. ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸೌತ್ ಆಫ್ರಿಕಾ(South Africa) ಸರಣಿ ತಯಾರಿಯಿಂದ ಆರಂಭಗೊಂಡ ಅಡೆ ತಡೆ ಇನ್ನೂ ಮುಗಿದಿಲ್ಲ. ಇದೀಗ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ(Rohit Sharma) ತಂಡದಿಂದ ಹೊರಬಿದ್ದಿದ್ದಾರೆ.

ಡಿಸೆಂಬರ್ 26 ರಿಂದ ಸೌತ್ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯದ ಸರಣಿ ಆರಂಭಗೊಳ್ಳಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆಗೆ ಗೇಟ್‌ಪಾಸ್ ನೀಡಿದ ಆಯ್ಕೆ ಸಮಿತಿ, ರೋಹಿತ್ ಶರ್ಮಾಗೆ ಉಪನಾಯಕನ ಪಟ್ಟ ಕಟ್ಟಿತ್ತು. ಇತ್ತ ಏಕದಿನ ಹಾಗೂ ಟಿ20 ಸರಣಿಗೆ ಸರಣಿಗೆ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾಗಿದ್ದರು.  ಆದರೆ ಗಾಯಗೊಂಡಿರುವ ರೋಹಿತ್ ಶರ್ಮಾ, ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ಅಲಭ್ಯರಾದ ಕಾರಣ, ಈ ಸ್ಥಾನಕ್ಕೆ ಗುಜರಾತ್ ಬ್ಯಾಟ್ಸ್‌ಮನ್ ಪ್ರಿಯಾಂಕ್ ಪಾಂಚಾಲ್(Priaynk panchal) ಆಯ್ಕೆಯಾಗಿದ್ದಾರೆ. 

Rohit Sharma Double Century: ಹಿಟ್‌ ಮ್ಯಾನ್‌ ಮೂರನೇ ಏಕದಿನ ದ್ವಿಶತಕಕ್ಕೆ ನಾಲ್ಕರ ಸಂಭ್ರಮ..!

ಮುಂಬೈನಲ್ಲಿ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಹ್ಯಾಮ್‌ಸ್ಟ್ರಿಂಗ್ ಇಂಜುರಿಗೆ(Injury) ತುತ್ತಾಗಿದ್ದಾರೆ. ಗಾಯದಿಂದ ಚೇತರಿಕೆಗೆ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮೂರು ಪಂದ್ಯದ ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ರೌಹಿತ್ ಶರ್ಮಾ ಲಭ್ಯರಿಲ್ಲ. ಸೆಂಚುರಿಯನ್, ಜೋಹಾನ್ಸ್‌ಬರ್ಗ್ ಹಾಗೂ ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ರೋಹತ್ ಶರ್ಮಾಗೆ 20 ದಿನಗಳ ವಿಶ್ರಾಂತಿ ಸಿಗಲಿದೆ. ಇದರಿಂದ ರೋಹಿತ್ ಶರ್ಮಾ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಜನವರಿ 19 ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

India Tour of South Africa: ಬಯೋ ಬಬಲ್‌ ಪ್ರವೇಶಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

ಏಕದಿನ ಹಾಗೂ ಟಿ20ಯಲ್ಲಿ ಮಾತ್ರವಲ್ಲ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಬ್ಯಾಟ್ಸಮನ್ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಇದೀಗ ರೋಹಿತ್ ಅಲಭ್ಯತೆ ಟೀಂ ಇಂಡಿಯಾ ಹಿನ್ನಡೆ ತಂದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 43 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 3047 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಗರಿಷ್ಠ ಸ್ಕೋರ್ 212. ಟೆಸ್ಟ್‌ನಲ್ಲಿ ರೋಹಿತ್ 8 ಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ.

ಭಾರತ ಸೌತ್ ಆಫ್ರಿಕಾ ಟೆಸ್ಟ್ ಸರಣಿ
ಡಿ.26 ರಿಂದ ಡಿ.30;  ಸೌತ್ ಆಫ್ರಿಕಾ vs ಭಾರತ 1ನೇ ಟೆಸ್ಟ್ ಪಂದ್ಯ, ಸೆಂಚುರಿಯನ್
ಜ.03 ರಿಂದ ಜ.07;  ಸೌತ್ ಆಫ್ರಿಕಾ vs ಭಾರತ 2ನೇ ಟೆಸ್ಟ್ ಪಂದ್ಯ, ಜೋಹಾನ್ಸ್‌ಬರ್ಗ್
ಜ.11 ರಿಂದ ಜ.15;  ಸೌತ್ ಆಫ್ರಿಕಾ vs ಭಾರತ 3ನೇ ಟೆಸ್ಟ್ ಪಂದ್ಯ, ಕೇಪ್‌ಟೌನ್

ಭಾರತ ಸೌತ್ ಆಫ್ರಿಕಾ ಏಕದಿನ ಸರಣಿ
ಜ.19: ಸೌತ್ ಆಫ್ರಿಕಾ vs ಭಾರತ 1ನೇ ಏಕದಿನ, ಪಾರ್ಲ್
ಜ.21: ಸೌತ್ ಆಫ್ರಿಕಾ vs ಭಾರತ 2ನೇ ಏಕದಿನ, ಪಾರ್ಲ್
ಜ.23: ಸೌತ್ ಆಫ್ರಿಕಾ vs ಭಾರತ 3ನೇ ಏಕದಿನ, ಕೇಪ್‌ಟೌನ್

ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್‌ಬೈ ಹೇಳಿದ ಕಾರಣ, ರೋಹಿತ್ ಶರ್ಮಾಗೆ ನಾಯಕ ಪಟ್ಟ ನೀಡಲಾಗಿತ್ತು. ಆದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಯ್ಕೆ ಸಮಿತಿ ಏಕದಿನ ತಂಡದ ನಾಯಕತ್ವದಲ್ಲಿ ಮಹತ್ವದ ಘೋಷಣೆ ಮಾಡಿತ್ತು. ವಿರಾಟ್ ಕೊಹ್ಲಿಗೆ ಕೊಕ್ ನೀಡಿ ರೋಹಿತ್‌ಗೆ ನಾಯಕತ್ವ ನೀಡಲಾಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios