Asianet Suvarna News Asianet Suvarna News

Rohit Sharma on Virat Kohli: ಕೊಹ್ಲಿ ನಾಯಕತ್ವದಲ್ಲಿ ಪ್ರತಿ ಕ್ಷಣ ಆನಂದಿಸಿದ್ದೇನೆಂದ ರೋಹಿತ್‌

* ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ರೋಹಿತ್ ಶರ್ಮಾ

* ಟೀಂ ಇಂಡಿಯಾ ಸೀಮಿತ ತಂಡದ ನಾಯಕರಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ

* ಕೊಹ್ಲಿ ನಾಯಕತ್ವವನ್ನು ಕೊಂಡಾಡಿದ ಹಿಟ್‌ ಮ್ಯಾನ್‌

I enjoyed each and every moment under Virat Kohli Captaincy Says Rohit Sharma kvn
Author
Bengaluru, First Published Dec 14, 2021, 12:26 PM IST

ಮುಂಬೈ(ಡಿ.14): ವಿರಾಟ್‌ ಕೊಹ್ಲಿ (Virat Kohli) 5 ವರ್ಷ ಕಾಲ ಭಾರತ ತಂಡವನ್ನು ಮುನ್ನಡೆಸಿದ ರೀತಿಯನ್ನು ಸೀಮಿತ ಓವರ್‌ ತಂಡಗಳಿಗೆ ಹೊಸದಾಗಿ ನೇಮಕಗೊಂಡಿರುವ ನಾಯಕ ರೋಹಿತ್‌ ಶರ್ಮಾ(Rohit Sharma) ಕೊಂಡಾಡಿದ್ದಾರೆ. ‘ಕೊಹ್ಲಿ ನಾಯಕತ್ವದಲ್ಲಿ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ’ ಎಂದು ಹೇಳಿದ್ದಾರೆ. ಬಿಸಿಸಿಐನ (BCCI) ಅಧಿಕೃತ ವೆಬ್‌ಸೈಟ್‌ನೊಂದಿಗೆ ನಡೆಸಿರುವ ಮಾತುಕತೆಯಲ್ಲಿ ರೋಹಿತ್‌, ‘ಪ್ರತಿ ಬಾರಿ ಕೊಹ್ಲಿ ಜೊತೆಯಲ್ಲಿ ಆಡಿದ್ದಾಗ ಖುಷಿಯಿಂದ ಆಡಿದ್ದೇನೆ. ಅವರೊಂದಿಗೆ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ಮುಂದೆಯೂ ಆನಂದಿಸಲಿದ್ದೇನೆ. ಅವರು ತಂಡವನ್ನು ಮುನ್ನಡೆಸಿದ ರೀತಿ ನಮಗೆಲ್ಲಾ ಮಾದರಿ’ ಎಂದಿದ್ದಾರೆ.

ಇದೇ ವೇಳೆ ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿರುವ ರೋಹಿತ್‌, ‘ಮುಂದಿನ 3-4 ವರ್ಷಗಳಲ್ಲಿ ಹಲವು ವಿಶ್ವಕಪ್‌ಗಳು ನಡೆಯಲಿವೆ. ವಿಶ್ವ ಚಾಂಪಿಯನ್‌ಶಿಪ್‌ ಗೆಲ್ಲುವುದು ನಮ್ಮ ಗುರಿ’ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. 2021ರ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು.

ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ (India Tour of South Africa) ಮುನ್ನ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡುವ ವೇಳೆ, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬರೇ ನಾಯಕರಿರಲಿ ಎನ್ನುವ ಕಾರಣ ನೀಡಿ ಬಿಸಿಸಿಐ, ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 

ಸೋಮವಾರವೂ ತಂಡ ಕೂಡಿಕೊಳ್ಳದ ವಿರಾಟ್ ಕೊಹ್ಲಿ !

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೊರಬೇಕಿರುವ ಭಾರತ ತಂಡ ಮುಂಬೈನಲ್ಲಿ 3 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದೆ. ತಂಡ ಡಿಸೆಂಬರ್ 16ರಂದು ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದೆ. ಆದರೆ ನಾಯಕ ವಿರಾಟ್‌ ಕೊಹ್ಲಿ ಇನ್ನೂ ತಂಡ ಕೂಡಿಕೊಂಡಿಲ್ಲ ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

India tour South Africa ಟೀಂ ಇಂಡಿಯಾ ಬಿಗ್ ಶಾಕ್, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್!

ಟೆಸ್ಟ್‌ ಸರಣಿಗೆ ಆಯ್ಕೆಯಾಗಿರುವ ಆಟಗಾರರು ಭಾನುವಾರ ಮುಂಬೈನ ಹೋಟೆಲ್‌ನಲ್ಲಿ ಬಿಸಿಸಿಐ ವ್ಯವಸ್ಥೆ ಮಾಡಿರುವ ಬಯೋ ಬಬಲ್‌ (Bio Bubble) ಪ್ರವೇಶಿಸಿದರು. ಕೊಹ್ಲಿ ಸೋಮವಾರ ಹೋಟೆಲ್‌ಗೆ ಆಗಮಿಸುವುದಾಗಿ ತಿಳಿಸಿದ್ದರಂತೆ. ಆದರೆ ಅವರು ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಅವರು ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಏಕದಿನ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ಕೊಹ್ಲಿ, ಬಿಸಿಸಿಐ ಮೇಲೆ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಸರಣಿಯಲ್ಲಿ ಮಯಾಂಕ್‌, ರಾಹುಲ್‌ ಆರಂಭಿಕರು?

ರೋಹಿತ್‌ ಹೊರಬಿದ್ದಿರುವ ಕಾರಣ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ (KL Rahul) ಹಾಗೂ ಮಯಾಂಕ್‌ ಅಗರ್‌ವಾಲ್‌ (Mayank Agarwal) ಆರಂಭಿಕರಾಗಿ ಆಡುವುದು ಬಹುತೇಕ ಖಚಿತ. ಮಯಾಂಕ್‌ ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸ್ಥಾನಗಟ್ಟಿಗೊಳಿಸಿಕೊಂಡಿದ್ದರು.

ಇನ್ನು ಪ್ರಿಯಾಂಕ್‌ ಪಾಂಚಾಲ್‌ ಭಾರತೀಯ ದೇಸಿ ಕ್ರಿಕೆಟ್‌ನಲ್ಲಿ ಹೊಸ ಮುಖವೇನಲ್ಲ. ಅವರು ಈಗಾಗಲೇ 100 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 24 ಶತಕಗಳೊಂದಿಗೆ 7,011 ರನ್‌ ಕಲೆಹಾಕಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡವನ್ನು ಪ್ರಿಯಾಂಕ್‌ ಮುನ್ನಡೆಸಿ ಉತ್ತಮ ಪ್ರದರ್ಶನ ತೋರಿದ್ದರು. ಸರಣಿಯಲ್ಲಿ ಅವರು ಆರಂಭಿಕರಾಗಿ ಆಡಿದ್ದ ಕಾರಣ, ರೋಹಿತ್‌ ಬದಲಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

Follow Us:
Download App:
  • android
  • ios