Breaking: ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗರಿಗೆ ಸ್ಥಾನವಿಲ್ಲ!

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟ. ಮೊಹಮ್ಮದ್ ಶಮಿ ವಾಪಸಿ, ಸೂರ್ಯಕುಮಾರ್ ಯಾದವ್ ನಾಯಕ, ಅಕ್ಷರ್ ಪಟೇಲ್ ಉಪನಾಯಕ.

Team India squad for T20I series against England announced san

ಬೆಂಗಳೂರು (ಜ.11): ರಾಷ್ಟ್ರೀಯ ಆಯ್ಕೆ ಸಮಿತಿ ಇಂಗ್ಲೆಂಡ್‌ ವಿರುದ್ಧ ಜನವರಿ 22 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ ವಿಶ್ವಚಾಂಪಿಯನ್‌ ಭಾರತ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ತಂಡಕ್ಕೆ ಮೊಹಮದ್ ಶಮಿ ವಾಪಸಾಗಿದ್ದಾರೆ. ಜನವರಿ 22 ರಂದು ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಟಿ20 ತಂಡದಲ್ಲಿ ಕರ್ನಾಟಕ ಯಾವೊಬ್ಬ ಆಟಗಾರ ಕೂಡ ಸ್ಥಾನ ಪಡೆದಿಲ್ಲ. ಸೂರ್ಯಕುಮಾರ್‌ ಯಾದವ್‌ ತಂಡಕ್ಕೆ ನಾಯಕರಾಗಿದ್ದರೆ, ಅಕ್ಷರ್‌ ಪಟೇಲ್‌ರನ್ನು ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಕರ್ನಾಟಕದ ಯಾವ ಆಟಗಾರ ಕೂಡ ರಾಷ್ಟ್ರೀಯ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕೆಎಲ್‌ ರಾಹುಲ್‌ ಅವರ ಹೆಸರು ಕೂಡ ಮಿಸ್‌ ಆಗಿದೆ. ಹೆಚ್ಚಿನ ಯುವ ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಅನುಭವಿ ವೇಗಿ ಮೊಹಮದ್‌ ಶಮಿ ಕೊನೆಗೂ ರಾಷ್ಟ್ರೀಯ ತಂಡಕ್ಕೆ ಮರಳಲು ಯಶಸ್ವಿಯಾಗಿದ್ದಾರೆ.34 ವರ್ಷದ ವೇಗದ ಬೌಲರ್‌, 2023ರ ಏಕದಿನ ವಿಶ್ವಕಪ್‌ ಫೈನಲ್‌ ಬಳಿಕ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಸರ್ಜರಿಗೆ ಒಳಗಾಗಿದ್ದ ಅವರು ಚೇತರಿಕೆ ಕಂಡು ತಂಡಕ್ಕೆ ವಾಪಸಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲೂ ಅವರು ಆಡಿರಲಿಲ್ಲ. ಆದರೆ, ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಹಾಗೂ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡುವ ಮೂಲಕ ಅವರ ಫಿಟ್‌ನೆಸ್‌ ಮೇಲೆ ಗಮನ ನೀಡಲಾಗಿತ್ತು. ಚಾಂಪಿಯನ್ಸ್‌ ಟ್ರೋಫಿಗೆ ಮೊಹಮದ್‌ ಶಮಿ ಸೇವೆ ಅಗತ್ಯವಾಗಿರುವ ಹಿನ್ನಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

Team India squad for T20I series against England announced san

ಶಮಿ ರಿಟರ್ನ್‌ಗಿಂತ ಹೆಚ್ಚಾಗಿ ಅಕ್ಸರ್‌ ಪಟೇಲ್‌ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಿದ್ದೇ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ, ರಿಷಬ್‌ ಪಂತ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. 2024ರ ಜುಲೈನಿಂದ ರಿಷಬ್‌ ಪಂತ್‌ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ. ಸಂಜು ಸ್ಯಾಮ್ಸನ್‌ ಪ್ರಮುಖ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಮುಂದುವರಿದಿದ್ದಾರೆ.

ಇದು ಟೀಮ್‌ ಇಂಡಿಯಾದ ಡಿವೋರ್ಸ್‌ ‍XI; ಮನೀಷ್‌ ಪಾಂಡೆ, ಚಾಹಲ್‌ ಹೊಸ ಎಂಟ್ರಿ!

ಇಂಗ್ಲೆಂಡ್ ವಿರುದ್ಧದ T20I ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (C), ಸಂಜು ಸ್ಯಾಮ್ಸನ್ (WK), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್ (vc), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ , ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿ.ಕೀ)

Kho Kho World Cup 2025: ಭಾರತ ತಂಡದ ನಾಯಕ ಪ್ರತೀಕ್‌ ವೈಕರ್‌ ಬಗ್ಗೆ ಇಲ್ಲಿದೆ ಮಾಹಿತಿ..

 

 

Latest Videos
Follow Us:
Download App:
  • android
  • ios