ಹಾರ್ದಿಕ್‌ ಪಾಂಡ್ಯಗೆ ಟಿ20 ನಾಯಕತ್ವ ಕೈ ತಪ್ಪಿದ್ದೇಕೆ? ಸೂರ್ಯಕುಮಾರ್ ಕ್ಯಾಪ್ಟನ್ ಆಗಿದ್ದು ಹೇಗೆ?

ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್‌ ಶ್ರೀಲಂಕಾ ಸರಣಿ ಮೂಲಕ ಭಾರತದ ಭವಿಷ್ಯದ ಟಿ20 ನಾಯಕನಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಸೂರ್ಯಕುಮಾರ್‌ ಯಾದವ್ ಲಂಕಾ ಸರಣಿಗೆ ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Team India Players trust Suryakumar Yadav more then Hardik Pandya says report kvn

ನವದೆಹಲಿ: ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಹಾರ್ದಿಕ್‌ ಪಾಂಡ್ಯ ಬದಲು ಸೂರ್ಯಕುಮಾರ್‌ ಕುಮಾರ್‌ರನ್ನು ಭಾರತದ ನಾಯಕನಾಗಿ ಘೋಷಿಸಲು ಆಟಗಾರರ ಅಭಿಪ್ರಾಯವೇ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಆಗಲು ನೂತನ ಕೋಚ್ ಗೌತಮ್ ಗಂಭೀರ್ ಎಂದು ವರದಿಯಾಗಿತ್ತು.

ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್‌ ಶ್ರೀಲಂಕಾ ಸರಣಿ ಮೂಲಕ ಭಾರತದ ಭವಿಷ್ಯದ ಟಿ20 ನಾಯಕನಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಟೀಂ ಇಂಡಿಯಾ ಆಟಗಾರರು ಸೂರ್ಯಕುಮಾರ್‌ ಯಾದವ್ ಪರ ಬ್ಯಾಟ್‌ ಮಾಡಿದ ಕಾರಣ ಹಾರ್ದಿಕ್‌ಗೆ ನಾಯಕತ್ವ ತಪ್ಪಿದೆ.

ಹಾರ್ದಿಕ್‌ಗಿಂತ ಸೂರ್ಯ ಬಗ್ಗೆ ಹೆಚ್ಚಿನ ನಂಬಿಕೆ ಇದೆ ಎಂದು ಆಟಗಾರರಿಂದ ಅಭಿಪ್ರಾಯ ವ್ಯಕ್ತವಾಗಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಆಡುವುದಕ್ಕೆ ಹೆಚ್ಚಿನ ಆಟಗಾರರು ಒಲವು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಸೂರ್ಯಗೆ ನಾಯಕತ್ವದ ಹೊಣೆ ನೀಡಿದೆ ವರದಿಯಾಗಿದೆ. ಅಲ್ಲದೆ, ಪಾಂಡ್ಯ ಸತತವಾಗಿ ಗಾಯಗೊಳ್ಳುತ್ತಿರುವುದು ಕೂಡಾ ಅವರನ್ನು ನಾಯಕತ್ವಕ್ಕೆ ಪರಿಗಣಿಸದಿರಲು ಪ್ರಮುಖ ಕಾರಣ ಎಂದು ವರದಿಯಾಗಿದೆ.

ಮಹಿಳಾ ಏಷ್ಯಾಕಪ್‌ ಟಿ20: ಭಾರತದ ಅಬ್ಬರಕ್ಕೆ ಪಾಕಿಸ್ತಾನ ಧೂಳೀಪಟ!

ಟಿ20 ಸರಣಿಯ 3 ಪಂದ್ಯಗಳು ಕ್ರಮವಾಗಿ ಜು.27, 28 ಹಾಗೂ 30ರಂದು ಪಲ್ಲೆಕೆಲೆಯಲ್ಲಿ ನಡೆಯಲಿವೆ. ಬಳಿಕ ಕೊಲಂಬೊದಲ್ಲಿ ಆ.2, 4 ಹಾಗೂ 7ರಂದು 3 ಏಕದಿನ ಪಂದ್ಯಗಳು ನಿಗದಿಯಾಗಿವೆ.

ಟಿ20 ತಂಡ: ಸೂರ್ಯಕುಮಾರ್‌(ನಾಯಕ), ಗಿಲ್‌(ಉಪ ನಾಯಕ), ಜೈಸ್ವಾಲ್‌, ರಿಂಕು ಸಿಂಗ್‌, ರಿಯಾನ್‌, ರಿಷಭ್‌, ಸ್ಯಾಮ್ಸನ್‌, ಹಾರ್ದಿಕ್‌, ಶಿವಂ ದುಬೆ, ಅಕ್ಷರ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌, ಅರ್ಶ್‌ದೀಪ್‌, ಖಲೀಲ್‌ ಅಹ್ಮದ್‌, ಸಿರಾಜ್‌.

ಏಕದಿನ ತಂಡ: ರೋಹಿತ್‌(ನಾಯಕ), ಗಿಲ್‌(ಉಪ ನಾಯಕ), ವಿರಾಟ್‌, ರಾಹುಲ್‌, ರಿಷಭ್‌, ಶ್ರೇಯಸ್‌, ದುಬೆ, ಕುಲ್ದೀಪ್‌, ಸಿರಾಜ್‌, ವಾಷಿಂಗ್ಟನ್‌, ಅರ್ಶ್‌ದೀಪ್‌, ರಿಯಾನ್‌, ಅಕ್ಷರ್‌, ಖಲೀಲ್‌,ಹರ್ಷಿತ್‌.

ಬಾಲಿವುಡ್ ಬಿಗ್ ಸ್ಟಾರ್ಸ್‌ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ..! ಕಿಂಗ್ ಕೊಹ್ಲಿಗೆ ಮತ್ತೊಂದು ಗರಿ

ಗಂಭೀರ್‌ಗೆ ಆರಂಭಿಕ ಮೇಲುಗೈ!

ಲಂಕಾ ಸರಣಿ ಮೂಲಕ ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿರುವ ಗೌತಮ್‌ ಗಂಭೀರ್‌ ಸರಣಿಗೂ ಮುನ್ನ ಆರಂಭಿಕ ಮೇಲುಗೈ ಸಾಧಿಸಿದ್ದಾರೆ. ರೋಹಿತ್‌, ಕೊಹ್ಲಿ ಸರಣಿಗೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಹಿರಿಯರು ಸರಣಿಗೆ ಲಭ್ಯವಿರಬೇಕು ಎಂದು ಗಂಭೀರ್‌ ಸೂಚಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ರೋಹಿತ್‌, ಕೊಹ್ಲಿ ತಂಡಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
 

Latest Videos
Follow Us:
Download App:
  • android
  • ios