ಬಾಲಿವುಡ್ ಬಿಗ್ ಸ್ಟಾರ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ..! ಕಿಂಗ್ ಕೊಹ್ಲಿಗೆ ಮತ್ತೊಂದು ಗರಿ
ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇದೀಗ ಹಲವು ಬಾಲಿವುಡ್ ಸೆಲಿಬ್ರಿಟಿಗಳನ್ನು ಹಿಂದಿಕ್ಕಿರುವ ಕೊಹ್ಲಿ ದೇಶದ ನಂ.1 ಪಟ್ಟ ಅಲಂಕರಿಸಿದ್ದಾರೆ
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆನ್ ಫೀಲ್ಡ್ ಇರಲಿ. ಆಫ್ ಫೀಲ್ಡ್ ಇರಲಿ. ಸದಾ ಒಂದಿಲ್ಲೊಂದು ದಾಖಲೆಯನ್ನು ಬರೀತಾ ಇರ್ತಾರೆ. ಈಗ ಮತ್ತೊಂದು ದಾಖಲೆಗೆ ರನ್‌ಮಷಿನ್ ಪಾತ್ರರಾಗಿದ್ದಾರೆ. ಬಾಲಿವುಡ್ ಬಿಗ್ ಸ್ಟಾರ್‌ಗಳನ್ನೇ ಹಿಂದಿಕ್ಕಿ ನಂಬರ್ ಒನ್ ಪಟ್ಟ ಅಲಂಕರಿಸಿದ್ದಾರೆ.
ಬಾಲಿವುಡ್ ಸ್ಟಾರ್‌ಗಳನ್ನ ಹಿಂದಿಕ್ಕಿ ನಂಬರ್ ಒನ್ ಪಟ್ಟ..!
ವಿರಾಟ್ ಕೊಹ್ಲಿ..! ಕ್ರಿಕೆಟ್ ದುನಿಯಾದ ಸೂಪರ್ ಸ್ಟಾರ್. ಕೊಹ್ಲಿಗಿರೋವಷ್ಟು ಫ್ಯಾನ್ಸ್, ಫಾಲೋವರ್ಸ್ ಬೇರೆ ಯಾವ ಕ್ರಿಕೆಟರ್‌ಗೂ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯನ್ನ 50 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡ್ತಾರೆ. ಹೈಯೆಸ್ಟ್ ಫಾಲೋವರ್ಸ್ ಹೊಂದಿರೋ ಕ್ರೀಡಾಪಟುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈಗ ಕೊಹ್ಲಿಯ ಆಫ್ ದಿ ಫೀಲ್ಡ್ ದಾಖಲೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರಿದೆ. ಭಾರತದ ಮೋಸ್ಟ್ ವ್ಯಾಲ್ಯೂಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ.
ಗುಜರಾತ್ ಟೈಟಾನ್ಸ್ ಮಾರಾಟಕ್ಕಿದೆ; ಖರೀದಿಸಲು ತುದಿಗಾಲಲ್ಲಿ ನಿಂತ ದೇಶದ ಎರಡು ಪ್ರಮುಖ ಉದ್ಯಮಿಗಳು..!
ಯೆಸ್, ಈ ವರ್ಷ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ಶೇಕಡ 29ರಷ್ಟು ಅಂದ್ರೆ, 227.9 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಕೊಹ್ಲಿ ನಂತರದ ಸ್ಥಾನದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಇದ್ದು, ರಣ್ವೀರ್ 203.1 ಮಿಲಿಯನ್ ಡಾಲರ್ ಮೌಲ್ಯ ಹೊಂದಿದ್ದಾರೆ. ಅಕ್ಷಯ್ ಕುಮಾರ್, ಅಲಿಯಾ ಭಟ್ 3 ಮತ್ತು ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಕ್ರಿಕೆಟರ್‌ಗಳಲ್ಲಿ ಧೋನಿ 7ನೇ ಸ್ಥಾನ, ಸಚಿನ್ ತೆಂಡುಲ್ಕರ್ 8ನೇ ಸ್ಥಾನ ಗಳಿಸಿದ್ದಾರೆ.
ಲಂಡನ್ನಲ್ಲಿ ಫ್ಯಾಮಿಲಿಯೊಂದಿಗೆ ವಿರಾಟ್ ಫುಲ್ ರಿಲ್ಯಾಕ್ಸ್..!
ಯೆಸ್, ಸದ್ಯ ಲಂಡನ್ನಲ್ಲಿ ಠಿಕಾಣಿ ಹೂಡಿರೋ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಮತ್ತು ಇಬ್ಬರು ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ದೊಡ್ಡ ಸೆಲೆಬ್ರೆಟಿಯಾಗಿದ್ರೂ, ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಲಂಡನ್ನ ಬೀದಿ ಬದಿಯಲ್ಲಿ ಮಗ ಅಕಾಯ್ನ ಎತ್ತಿಕೊಂಡು ಶಾಪಿಂಗ್ ಮಾಡುತ್ತಿದ್ದಾರೆ. ಕೊಹ್ಲಿಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಸಾವಿರ ಕೋಟಿ ಸರದಾರನ ಸರಳತೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಗೌತಮ್ ಗಂಭೀರ್ ಜತೆಗೆ ಕಿತ್ತಾಟ: ಇದೀಗ ಬಿಸಿಸಿಐಗೆ ಸ್ಪಷ್ಟ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!
ವಿಕ್ಟರಿ ಪರೇಡ್ ಮುಗಿಯುತ್ತಿದ್ದಂತೆ ಲಂಡನ್‌ಗೆ ಕೊಹ್ಲಿ..!
ವಿರಾಟ್ ಕೊಹ್ಲಿ ಗ್ರೇಟ್ ಕ್ರಿಕೆಟರ್ ಅಷ್ಟೇ ಅಲ್ಲ. ಗ್ರೇಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಕ್ರಿಕೆಟ್‌ನ ಪ್ರೀತಿಸುವಷ್ಟೇ, ವಿರಾಟ್ ತಮ್ಮ ಕುಟುಂಬವನ್ನ ಪ್ರೀತಿಸ್ತಾರೆ. ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮೈದಾನದಲ್ಲೇ ಪತ್ನಿ ಅನುಷ್ಕಾ ಶರ್ಮಾಗೆ ಪೋನ್ ಮಾಡಿ ಸಂಭ್ರಮಿಸಿದ್ದೇ ಅದಕ್ಕೆ ಸಾಕ್ಷಿ.
ಇನ್ನು ಟಿ20 ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಳಿಕ ಭಾರತಕ್ಕೆ ಆಗಮಿಸಿದ ದಿನ ಟೀಂ ಇಂಡಿಯಾ ಆಟಗಾರರು, ಫುಲ್ ಬ್ಯುಸಿ ಆಗಿದ್ರು. ಪ್ರಧಾನಿ ಮೋದಿ ಜೊತೆ ಬ್ರೇಕ್‌ಪಾಸ್ಟ್, 2 ಗಂಟೆಗಳ ಸಂವಾದ, ಅದು ಮುಗಿಯುತ್ತಿದ್ದಂತೆ ಮುಂಬೈಗೆ ಕಡೆ ಪ್ರಯಾಣ. ಮುಂಬೈನಲ್ಲಿ ವಿಜಯೋತ್ಸವ ಮೆರವಣಿಗೆ, ಅದರ ನಂತರ ವಾಂಖೇಡೆ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ. ಇದೆಲ್ಲದರಿಂದ ವಿಶ್ವಕಪ್ ವೀರರು ಬಳಲಿ ಬೆಂಡಾಗಿದ್ರು.
ವಿಕ್ಟರಿ ಪರೇಡ್ ಮುಗಿಯುತ್ತಿದ್ದಂತೆ ಬೇರೆ ಆಟಗಾರರು ಹೋಟೆಲ್ ಸೇರಿ, ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ರು. ಆದ್ರೆ, ಕೊಹ್ಲಿಯ ಮನಸ್ಸು ಮಾತ್ರ ಮನೆ, ಮಡದಿ ಮಕ್ಕಳ ಕಡೆ ಸೆಳೆಯುತ್ತಿತ್ತು. ಇದ್ರಿಂದ ರಾತ್ರೋ ರಾತ್ರಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ರು. ಒಟ್ಟಿನಲ್ಲಿ ಕೊಹ್ಲಿ ಆನ್‌ಫೀಲ್ಡ್ ಇರಲಿ, ಆಫ್‌ಫೀಲ್ಡ್ ಇರಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ.
- ಸ್ಪೋರ್ಟ್ಸ್ ಬ್ಯುರೊ, ಏಷ್ಯಾನೆಟ್ ಸುವರ್ಣ ನ್ಯೂಸ್