* ಹುಟ್ಟೂರಿನಲ್ಲಿ ಒಂದು ವರ್ಷದ ಬಳಿಕ ಕ್ರಿಕೆಟ್ ಮೈದಾನ ನಿರ್ಮಿಸಿದ ಟಿ ನಟರಾಜನ್*  ತಮ್ಮ ಕನಸು ನನಸು ಮಾಡಿಕೊಂಡ ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್* ಟ್ವೀಟ್ ಮೂಲಕ ತಮ್ಮ ಖುಷಿ ಹಂಚಿಕೊಂಡ ವೇಗಿ ನಟರಾಜನ್

ಚೆನ್ನೈ(ಡಿ.18): ಭಾರತದ ಯುವ ವೇಗಿ ಟಿ.ನಟರಾಜನ್‌ (T Natarajan) ತಮ್ಮ ಹುಟ್ಟೂರಲ್ಲಿ ಕ್ರಿಕೆಟ್‌ ಮೈದಾನವೊಂದನ್ನು (Cricket Stadium) ನಿರ್ಮಿಸಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಮ್‌ಪಟ್ಟ ಎಂಬಲ್ಲಿ ಈ ಮೈದಾನವನ್ನು ನಿರ್ಮಿಸಲಾಗಿದ್ದು, ‘ನಟರಾಜನ್‌ ಕ್ರಿಕೆಟ್‌ ಮೈದಾನ’ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಟ್ವೀಟ್‌ ಮೂಲಕ ಮೈದಾನದ ಫೋಟೋ ಹಂಚಿಕೊಂಡ ಅವರು, ‘ಎಲ್ಲಾ ಸೌಲಭ್ಯಗಳೊಂದಿಗೆ ನನ್ನ ಹುಟ್ಟೂರಿನಲ್ಲಿ ಮೈದಾನ ನಿರ್ಮಿಸಿದ್ದೇನೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಭಾರತಕ್ಕೆ ಪಾದಾರ್ಪಣೆ ಮಾಡಿದ್ದೆ ಮತ್ತು ಈ ಡಿಸೆಂಬರ್‌ನಲ್ಲಿ ಕ್ರಿಕೆಟ್‌ ಮೈದಾನದ ಕನಸು ನನಸು ಮಾಡಿದ್ದೇನೆ’ ಎಂದಿದ್ದಾರೆ.

2018ರ ಐಪಿಎಲ್ (IPL 2020) ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ (Sunrisers Hyderabad) ಫ್ರಾಂಚೈಸಿಯು ಟಿ. ನಟರಾಜನ್ ಅವರನ್ನು ಖರೀದಿಸಿ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತ್ತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ನಟರಾಜನ್, ಕರಾರುವಕ್ಕಾದ ಯಾರ್ಕರ್‌ ಮೂಲಕ ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡರು. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಟಿ. ನಟರಾಜನ್ 16 ಪಂದ್ಯಗಳಿಂದ 16 ವಿಕೆಟ್ ಉರುಳಿಸಿದ್ದರು. 

ಇದಾದ ಬಳಿಕ 2020ರ ನವೆಂಬರ್‌ನಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ವರುಣ್ ಚಕ್ರವರ್ತಿ ಬದಲಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ನಟರಾಜನ್ ಯಶಸ್ವಿಯಾದರು. ಡಿಸೆಂಬರ್ 02ರಂದು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಟರಾಜನ್, ಬಳಿಕ ಡಿಸೆಂಬರ್ 04ರಂದು ಟಿ20 ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದರು. ಇನ್ನು ಜನವರಿ 15ರಂದು ನಟರಾಜನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೂಲಕ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು. 

Scroll to load tweet…

Virat vs BCCI: ಕೊಹ್ಲಿ ವಿರುದ್ದ ಬಿಸಿಸಿಐನಿಂದ ತಕ್ಷಣಕ್ಕೆ ಯಾವುದೇ ಕ್ರಮವಿಲ್ಲ..?

ಸದ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಟಿ. ನಟರಾಜನ್, ಇದುವರೆಗೂ ಭಾರತ ಪರ ಒಂದು ಟೆಸ್ಟ್‌, ಎರಡು ಏಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾರೆ 13 ವಿಕೆಟ್ ಕಬಳಿಸಿದ್ದಾರೆ. 

ಅಂಡರ್‌-19 ಆಟಗಾರರಿಗೆ ಸ್ಫೂರ್ತಿ ತುಂಬಿದ ರೋಹಿತ್‌

ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಆಕಾಡೆಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿರುವ ಭಾರತ ಟಿ20, ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma), ಏಷ್ಯಾ ಕಪ್‌ ಹಾಗೂ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ಅಂಡರ್‌-19 ತಂಡದ ಆಟಗಾರರೊಂದಿಗೆ ಸಂವಾದ ನಡೆಸಿದರು. ತಮ್ಮ ಕ್ರಿಕೆಟ್‌ ವೃತ್ತಿಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವ ಆಟಗಾರರಲ್ಲಿ ಸ್ಫೂರ್ತಿ ತುಂಬಿದರು. 

ಮಹತ್ವದ ಟೂರ್ನಿಗೂ ಮುನ್ನ ಅಗತ್ಯವಿರುವ ಸಿದ್ಧತೆಗಳ ಬಗ್ಗೆ ರೋಹಿತ್‌ ಮಾಹಿತಿ ನೀಡಿದರು. ಎನ್‌ಸಿಎನಲ್ಲಿ ರವೀಂದ್ರ ಜಡೇಜಾ (Ravindra Jadeja) ಸಹ ಪುನಶ್ಚೇತನ ಶಿಬಿರದಲ್ಲಿ ತೊಡಗಿದ್ದು, ಅವರೂ ಸಹ ಅಂಡರ್‌-19 ಆಟಗಾರರೊಂದಿಗೆ ಸಂವಾದ ನಡೆಸುವ ಸಾಧ್ಯತೆ ಇದೆ.

Scroll to load tweet…

U 19 Squad For Asia Cup: ಟೂರ್ನಿಗೆ ಭಾರತ ಕಿರಿಯರ ಕ್ರಿಕೆಟ್ ತಂಡ ಪ್ರಕಟ

14ನೇ ಆವೃತ್ತಿಯ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್‌, ಅಂಡರ್ 19 ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಿದೆ. ಕಳೆದ ನವೆಂಬರ್ 17ರಂದು ಐಸಿಸಿ, ಅಂಡರ್ 19 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 4 ಬಾರಿಯ ಅಂಡರ್ 19 ವಿಶ್ವಕಪ್ ಚಾಂಪಿಯನ್ ಭಾರತ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಯಶ್ ಧುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದು, ವಿವಿಎಸ್ ಲಕ್ಷ್ಮಣ್ (VVS Laxman) ಮಾರ್ಗದರ್ಶನದಲ್ಲಿ ಭಾರತ ಕಿರಿಯರ ತಂಡ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.