Asianet Suvarna News Asianet Suvarna News

U 19 Squad For Asia Cup: ಟೂರ್ನಿಗೆ ಭಾರತ ಕಿರಿಯರ ಕ್ರಿಕೆಟ್ ತಂಡ ಪ್ರಕಟ

* ಅಂಡರ್ 19 ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ

* 20 ಆಟಗಾರರನ್ನೊಳಗೊಂಡ ತಂಡಕ್ಕೆ ಯಶ್ ಧುಲ್ ನಾಯಕ

* ಡಿಸೆಂಬರ್ 23ರಿಂದ ಆರಂಭವಾಗಲಿದೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿ

India Announces U19 Cricket Squad For Asia Cup And Preparatory Camp at NCA kvn
Author
Bengaluru, First Published Dec 10, 2021, 12:20 PM IST

ನವದೆಹಲಿ(ಡಿ.10): ಮುಂಬರುವ ಡಿಸೆಂಬರ್ 23ರಿಂದ ಯುಎಇನಲ್ಲಿ ಆರಂಭವಾಗಲಿರುವ ಅಂಡರ್‌ 19 ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಗೆ (U-19 Asia Cup Cricket Tournament) ಆಲ್ ಇಂಡಿಯಾ ಜೂನಿಯರ್ ಸೆಲೆಕ್ಷನ್ ಕಮಿಟಿಯು 20 ಆಟಗಾರರನ್ನೊಳಗೊಂಡ ಭಾರತ ಕಿರಿಯರ ತಂಡವನ್ನು ಪ್ರಕಟಿಸಲಾಗಿದ್ದು, ಯಶ್ ಧುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ಅಯ್ಕೆ ಸಮಿಯು ಎನ್‌ಸಿಎನಲ್ಲಿ ಪೂರ್ವಭಾವಿ ಶಿಬಿರದಲ್ಲಿ ಪಾಲ್ಗೊಳ್ಳಲು ಒಟ್ಟು 25 ಆಟಗಾರರನ್ನು ಆಯ್ಕೆ ಮಾಡಿದೆ.

ಹೌದು, ಬೆಂಗಳೂರಿನ (Bengaluru) ನ್ಯಾಷನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ) (National Cricket Academy)ನಲ್ಲಿ ಡಿಸೆಂಬರ್ 11ರಿಂದ 19ರವರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಯೋಜಿಸುವ ಟೂರ್ನಿಗೆ ಪೂರ್ವಭಾವಿ ಸಿದ್ದತೆ ನಡೆಸಲು ಕಿರಿಯರ ಆಯ್ಕೆ ಸಮಿತಿಯು 25 ಆಟಗಾರರನ್ನು ಆಯ್ಕೆ ಮಾಡಿದೆ. ಇನ್ನು ಮುಂಬರುವ 2022ರ ಜನವರಿ ಹಾಗೂ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್‌ನಲ್ಲಿ (West Indies) ನಡೆಯಲಿರುವ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್‌ (U-19 World Cup) ಟೂರ್ನಿಗೆ ಕೆಲವು ದಿನಗಳ ನಂತರ ತಂಡವನ್ನು ಪ್ರಕಟಿಸಲಾಗುವುದು.

14ನೇ ಆವೃತ್ತಿಯ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್‌, ಅಂಡರ್ 19 ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಿದೆ. ಕಳೆದ ನವೆಂಬರ್ 17ರಂದು ಐಸಿಸಿ, ಅಂಡರ್ 19 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 4 ಬಾರಿಯ ಅಂಡರ್ 19 ವಿಶ್ವಕಪ್ ಚಾಂಪಿಯನ್ ಭಾರತ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.

Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ

ಇನ್ನು 'ಬಿ' ಗುಂಪಿನಲ್ಲಿ ಭಾರತ ತಂಡದ ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಹಾಗೂ ಉಗಾಂಡ ತಂಡಗಳು ಸಹ ಸ್ಥಾನ ಪಡೆದಿವೆ. ಭಾರತ ತಂಡವು ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಜನವರಿ 14ರಿಂದ ಫೆಬ್ರವರಿ 5ರವರೆಗೆ 48 ಪಂದ್ಯಗಳು ನಡೆಯಲಿವೆ. ಕಳೆದ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಅಂಡರ್‌ 19 ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:

ಹರ್ನೊರ್ ಸಿಂಗ್ ಪನ್ನು, ಆಂಕ್ರಿಶ್ ರಘುವಂಶಿ, ಅಂಶ್ ಗೊಸಾಯಿ, ಎಸ್ ಕೆ ರಶೀದ್, ಯಶ್ ಧುಲ್(ನಾಯಕ), ಅನ್ನೇಶ್ವರ್ ಗೌತಮ್, ಸಿದ್ದಾರ್ಥ್‌ ಯಾದವ್, ಕೌಶಲ್‌ ತಂಬೆ, ನಿಶಾಂತ್ ಸಿಧು, ದಿನ್ನೇಶ್ ಬಾನಾ(ವಿಕೆಟ್ ಕೀಪರ್), ಆರಾಧ್ಯ ಯಾದವ್(ವಿಕೆಟ್ ಕೀಪರ್), ರಾಜನ್‌ಗಡ್‌ ಬಾವಾ, ರಾಜ್‌ವರ್ಧನ್‌ ಹಂಗಾರ್‌ಗೆಕರ್, ಗರ್ವ್‌  ಸಂಗ್ವಾನ್, ರವಿ ಕುಮಾರ್, ರಿಶಿತ್ ರೆಡ್ಡಿ, ಮಾನವ್ ಪರಾಕ್, ಅಮೃತ್ ರಾಜ್ ಉಪಾಧ್ಯಾಯ್, ವಿಕಿ ಓಸ್ವಾಲ್, ವಸು ವತ್ಸ್‌(ಫಿಟ್ನೆಸ್ ಸಾಬೀತುಪಡಿಸಿದರೆ)

ಇನ್ನು ಎನ್‌ಸಿಎನಲ್ಲಿ ಪೂರ್ವಭಾವಿ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಮೀಸಲು ಆಟಗಾರರು: ಆಯುಶ್ ಸಿಂಗ್ ಠಾಕೂರ್, ಉದಯ್‌ ಸಹರಾನ್‌, ಶಾಶ್ವತ್ ದಂಗ್ವಾಲ್‌, ಧನುಶ್ ಗೌಡ ಹಾಗೂ ಪಿಎಂ ಸಿಂಗ್ ರಾಥೋಡ್.
 

Follow Us:
Download App:
  • android
  • ios