Asianet Suvarna News Asianet Suvarna News

ಪ್ರೇಮಿಗಳ ದಿನ ಪೋಸ್ಟ್‌ಗೆ ಬುಮ್ರಾ ಪತ್ನಿಗೆ ಬಾಡಿ ಶೇಮಿಂಗ್ ಮಾಡಿದ ನೆಟ್ಟಿಗ; ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಸಂಜನಾ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿವೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Team India Pacer Jasprit Bumrah Wife Sanjana Ganesan Body Shamed on Valentaine Day Post her replay goes viral kvn
Author
First Published Feb 13, 2024, 5:59 PM IST

ರಾಜ್‌ಕೋಟ್(ಫೆ.13): ಕ್ರಿಕೆಟ್‌ನಿಂದ ಅಲ್ಪ ವಿರಾಮ ಪಡೆದುಕೊಂಡಿರುವ ಟೀಂ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಫೆಬ್ರವರಿ 15ರಂದು ರಾಜ್‌ಕೋಟ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೂರನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಇನ್ನೊಂದೆಡೆ ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ನೆಟ್ಟಿಗನೊಬ್ಬ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್‌ಗೆ ಬಾಡಿ ಶೇಮಿಂಗ್ ಮಾಡಲು ಹೋಗಿ ಮುಖಕ್ಕೆ ಮಂಗಳಾರತಿ ಎತ್ತಿಸಿಕೊಂಡಿದ್ದಾನೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿವೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿ(9 ವಿಕೆಟ್) ನೆರವಿನಿಂದ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೇ ಟೆಸ್ಟ್ ಪಂದ್ಯದ ಬಳಿಕ ಕೊಂಚ ಬಿಡುವು ಇದ್ದಿದ್ದರಿಂದ ಎಲ್ಲಾ ಕ್ರಿಕೆಟಿಗರು ತಮ್ಮ ಕುಟುಂಬದ ಜತೆ ಕ್ವಾಲಿಟಿ ಸಮಯ ಕಳೆದರು. ಅದೇ ರೀತಿ ಜಸ್ಪ್ರೀತ್ ಬುಮ್ರಾ ಕೂಡಾ ತಮ್ಮ ಕುಟುಂಬದ ಜತೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದರು.

ರಾಜ್‌ಕೋಟ್‌ನಲ್ಲಿ ಇತಿಹಾಸ ನಿರ್ಮಿಸಲು ಇಬ್ಬರು ಲೆಜೆಂಡ್ ಬೌಲರ್ಸ್‌ ರೆಡಿ..!

ಇನ್ನು ಜಸ್ಪ್ರೀತ್ ಬುಮ್ರಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ಜತೆಗಿರುವ ಫೋಟೋದೊಂದಿಗೆ, "ಖುಷಿ ಇಲ್ಲಿದೆ" ಎಂದು ಕ್ಯಾಪ್ಷನ್ ನೀಡಿದ್ದರು. ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಖ್ಯಾತ ಕ್ರೀಡಾ ನಿರೂಪಕಿಯಾಗಿದ್ದಾರೆ. ಇತ್ತೀಚೆಗೆ ಈ ಜೋಡಿ ತಮ್ಮ ಕುಟುಂಬಕ್ಕೆ ಗಂಡು ಮಗುವನ್ನು ಸ್ವಾಗತಿಸಿದ್ದರು.

ಇದೀಗ ಸಂಜನಾ ಗಣೇಶನ್ ವ್ಯಾಲೆಂಟೈನ್ ಡೇ ಪ್ರಯುಕ್ತ ಒಂದು ಪ್ರಮೋಷನಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಸಂಜನಾ ಅವರು ಹಂಚಿಕೊಂಡ ವಿಡಿಯೋಗೆ ನೆಟ್ಟಿಗನೊಬ್ಬ, "ಅತ್ತಿಗೆ ದಪ್ಪಗಾದಂತೆ ಕಾಣುತ್ತಿದ್ದಾರೆ ಎಂದು ಬಾಡಿ ಶೇಮಿಂಗ್ ಮಾಡಿದ್ದಾನೆ.

ಇದನ್ನು ನೋಡಿ ಉರಿದುಹೋದ ಸಂಜನಾ ಗಣೇಶನ್, "ನಿಮಗೆ ಶಾಲೆಯಲ್ಲಿನ ವಿಜ್ಞಾನದ ಪಠ್ಯಪುಸ್ತಕ ನೆನಪಿಲ್ಲವೇನೋ. ಹೆಣ್ಣಿನ ದೇಹದ ಬಗ್ಗೆ ಹೀಗೆ ಕಾಮೆಂಟ್ ಮಾಡಲು ನಿನಗೆಷ್ಟು ಧೈರ್ಯ. ಇಲ್ಲಿಂದ ತೊಲಗಾಚೆ" ಎಂದು ಸಂಜನಾ ಗಣೇಶನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Team India Pacer Jasprit Bumrah Wife Sanjana Ganesan Body Shamed on Valentaine Day Post her replay goes viral kvn

ಸಂಜನಾ ಅವರು ಮಾಡಿದ ಕಾಮೆಂಟ್‌ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸರಿಯಾಗಿಯೇ ಉತ್ತರ ಕೊಟ್ಟಿದ್ದೀರಾ ಎಂದು ಹಲವು ನೆಟ್ಟಿಗರು ಸಂಜನಾ ಗಣೇಶನ್ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನು ಟೀಂ ಇಂಡಿಯಾ ವೇಗಿ ಹಾಗೂ ಸಂಜನಾ ಗಣೇಶನ್ ಪತಿ ಜಸ್ಪ್ರೀತ್ ಬುಮ್ರಾ, ವೈಜಾಗ್ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ಬೆನ್ನಲ್ಲೇ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು. ಈ ಮೂಲಕ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ವೇಗದ ಬೌಲರ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದರು. 

Follow Us:
Download App:
  • android
  • ios