ನಿಂಗೊಳ್ಳೆ ಭವಿಷ್ಯವಿದೆ ಕಂದ ಎಂದ ವೇಗಿ ಜಸ್ಪ್ರೀತ್ ಬುಮ್ರಾ
ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ತನ್ನ ಬೌಲಿಂಗ್ ಶೈಲಿಯನ್ನು ಅನುಕರಿಸಿದ ಪುಟ್ಟ ಬಾಲಕನನ್ನು ಕೊಂಡಾಡಿದ್ದಾರೆ. ನಿಂಗೊಳ್ಳೆಯ ಭವಿಷ್ಯವಿದೆ ಕಂದ ಎಂದು ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.13): ಆರಂಭದ ದಿನಗಳಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ವಿಚಿತ್ರ ಬೌಲಿಂಗ್ ಶೈಲಿಯ ಮೂಲಕ ಗಮನ ಸೆಳೆದಿದ್ದರು. ಇದೀಗ 2013ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಕ್ರಿಕೆಟ್ ಜಗತ್ತಿಗೆ ಪರಿಚಿತವಾದ ಬುಮ್ರಾ ಇದೀಗ ಮಾರಕ ವೇಗಿಯಾಗಿ ಬೆಳೆದು ನಿಂತಿದ್ದಾರೆ.
ಬುಮ್ರಾಗೆ ಇದೀಗ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವರಂತೂ ಬುಮ್ರಾ ಬೌಲಿಂಗ್ ಶೈಲಿಯನ್ನೇ ಅನುಕರಿಸಲಾರಂಭಿಸಿದ್ದಾರೆ. ಅದರಲ್ಲೂ ಕೆಲವು ಮಕ್ಕಳಂತೂ ಬುಮ್ರಾ ಬೌಲಿಂಗ್ ಶೈಲಿಗೆ ಫಿದಾ ಆಗಿ ಹೋಗಿದ್ದು, ಅವರಂತೆಯೇ ಬೌಲಿಂಗ್ ಮಾಡುವುದನ್ನು ಅನುಕರಿಸುತ್ತಿದ್ದಾರೆ. ಈ ಪೈಕಿ ಪುಟ್ಟ ಬಾಲಕನೊಬ್ಬ ರಸ್ತೆಯ ಮೇಲೆ ಟೀಂ ಇಂಡಿಯಾ ವೇಗಿಯಂತೆಯೇ ಬೌಲಿಂಗ್ ಅನುಕರಿಸಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
IPL ಇತಿಹಾಸದಲ್ಲಿ ಗರಿಷ್ಠ ರನ್ ಸಿಡಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಿವರು
ಇದು ಸ್ವತಃ ಬುಮ್ರಾ ಅವರ ಮನಸ್ಸನ್ನೇ ಗೆದ್ದಿದೆ. ಇದೇ ರೀತಿಯೇ ಅಭ್ಯಾಸ ನಡೆಸು, ನಿಮಗೆ ಒಳ್ಳೆಯ ಭವಿಷ್ಯವಿದೆ, ಜೂನಿಯರ್ ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ಮಕ್ಕಳ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಆದರೆ 26 ವರ್ಷ ವೇಗಿಯ ಬೌಲಿಂಗ್ ಕಾಫಿ ಮಾಡುವುದು ಅಷ್ಟು ಸುಲಭವೇನಲ್ಲ. ಅವರ ರನ್ ಅಪ್ ಶೈಲಿ, ಜಂಪ್, ಹೈ ಆರ್ಮ್ ಆಕ್ಷನ್‌ಗಳು, ಬೌಲಿಂಗ್ ವೇಗದಲ್ಲಿ ಏರಿತ ಮಾಡುವುದನ್ನು ಕರಗತ ಮಾಡಿಕೊಂಡಿರುವುದರಿಂದ ಬುಮ್ರಾ ಎದುರಿಸುವುದು ಹಲವು ಬ್ಯಾಟ್ಸ್‌ಮನ್‌ಗಳ ಪಾಲಿಗೆ ಕಬ್ಬಿಣದ ಕಡಲೆಯಂತೆ.
ಕೊರೋನಾ ಭೀತಿಯಿಂದಾಗಿ ನಾಲ್ಕು ತಿಂಗಳು ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇದೀಗ ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಸದ್ಯದಲ್ಲಿ ಬುಮ್ರಾ ಮೈದಾನಕ್ಕಿಳಿಯಲಿದ್ದಾರೆ.