IPL ಇತಿಹಾಸದಲ್ಲಿ ಗರಿಷ್ಠ ರನ್ ಸಿಡಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಿವರು
ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಈ ಬಾರಿಯ ಐಪಿಎಲ್ ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಹೊಡಿಬಡಿಯಾಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್‌ನಲ್ಲಿ ಹೊಸಹೊಸ ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. 13ನೇ ಆವೃತ್ತಿ ಐಪಿಎಲ್ ಟೂರ್ನಿಗೂ ಮುನ್ನ ಈ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಆಟಗಾರರ ಪರಿಚಯವನ್ನು Suvarnanews.com ಮಾಡುತ್ತಿದೆ ನೋಡಿ.
1. ವಿರಾಟ್ ಕೊಹ್ಲಿ (ಪಂದ್ಯ: 177, ರನ್:5412, ಗರಿಷ್ಠ ವೈಯುಕ್ತಿಕ ಸ್ಕೋರ್: 113)
2. ಸುರೇಶ್ ರೈನಾ (ಪಂದ್ಯ: 193 ರನ್:5368, ಗರಿಷ್ಠ ವೈಯುಕ್ತಿಕ ಸ್ಕೋರ್: 100*)
3. ರೋಹಿತ್ ಶರ್ಮಾ (ಪಂದ್ಯ: 188, ರನ್:4898, ಗರಿಷ್ಠ ವೈಯುಕ್ತಿಕ ಸ್ಕೋರ್: 109*)
4. ಡೇವಿಡ್ ವಾರ್ನರ್ (ಪಂದ್ಯ: 126, ರನ್:4706, ಗರಿಷ್ಠ ವೈಯುಕ್ತಿಕ ಸ್ಕೋರ್: 126)
5. ಶಿಖರ್ ಧವನ್ (ಪಂದ್ಯ: 159, ರನ್:4579, ಗರಿಷ್ಠ ವೈಯುಕ್ತಿಕ ಸ್ಕೋರ್: 97)
6. ಕ್ರಿಸ್ ಗೇಲ್ (ಪಂದ್ಯ: 125, ರನ್:4484, ಗರಿಷ್ಠ ವೈಯುಕ್ತಿಕ ಸ್ಕೋರ್: 175*)
7. ಎಂ. ಎಸ್. ಧೋನಿ (ಪಂದ್ಯ: 190, ರನ್:4432, ಗರಿಷ್ಠ ವೈಯುಕ್ತಿಕ ಸ್ಕೋರ್: 84*)
8. ರಾಬಿನ್ ಉತ್ತಪ್ಪ (ಪಂದ್ಯ: 177, ರನ್:4411, ಗರಿಷ್ಠ ವೈಯುಕ್ತಿಕ ಸ್ಕೋರ್: 87)
9. ಎಬಿ ಡಿವಿಲಿಯರ್ಸ್ (ಪಂದ್ಯ: 154, ರನ್:4395, ಗರಿಷ್ಠ ವೈಯುಕ್ತಿಕ ಸ್ಕೋರ್: 133*)
10. ಗೌತಮ್ ಗಂಭೀರ್ (ಪಂದ್ಯ: 154, ರನ್:4217, ಗರಿಷ್ಠ ವೈಯುಕ್ತಿಕ ಸ್ಕೋರ್: 93)