ಮುಂಬೈ(ಅ.25): ದೀಪಾವಳಿ ಹಬ್ಬ ಆಚರಣೆಗೆ ದೇಶವೆ ರೆಡಿಯಾಗಿದೆ. ಇತ್ತ ಮುಂಬೈ ಇಂಡಿಯನ್ಸ್ ಹಬ್ಬಕ್ಕೂ ಮೊದಲೇ ದೀಪಾವಳಿ ಸಂಭ್ರಮ ಆಚರಿಸಿದೆ. ಲಭ್ಯವಿರುವ ಮುಂಬೈ ಇಂಡಿಯನ್ಸ್ ಕ್ರಿಕೆಟಿಗರಿಗೆ ಫ್ರಾಂಚೈಸಿ ಮಾಲೀಕರಾದ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಸಾಥ್ ನೀಡಿದರು. ಸಂಭ್ರಮದ ಬಳಿಕ ಮುಂಬೈ ಇಂಡಿಯನ್ಸ್ ಫೋಟೋ ಶೇರ್ ಮಾಡಿದೆ. 

 

ಇದನ್ನೂ ಓದಿ: IPL 2020: ರಾಜಸ್ಥಾನಕ್ಕೆ RCB ಮಾಜಿ ಕ್ರಿಕೆಟಿಗ ಕೋಚ್..!

ಮುಂಬೈ ಇಂಡಿಯನ್ಸ್ ಆಯೋಜಿಸಿದ ದೀಪಾವಳಿ ಸಡಗರದಲ್ಲಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಯೋರ್ವ ಮುಂಬೈ ಇಂಡಿಯನ್ಸ್‌ಗೆ ಪ್ರಶ್ನೆ ಮಾಡಿದ್ದಾನೆ. ಮುಂಬೈ ಇಂಡಿಯನ್ಸ್ ದೀಪಾವಳಿ ಸಡಗರದ ಫೋಟೋದಲ್ಲಿ ಬುಮ್ರಾ ಎಲ್ಲಿ? RCB ತಂಡ ಸೇರಿಕೊಳ್ಳುತ್ತಿದ್ದಾರೆಯೇ? ಎಂದು ಕೇಳಿದ್ದಾನೆ.

ಇದನ್ನೂ ಓದಿ: IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!

ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ ಜಿಫ್ ಇಮೇಜ್ ಶೇರ್ ಮಾಡಿ, ತಾಳ್ಮೆಯಿಂದ ಇರಿ ಎಂದು ಉತ್ತರಿಸಿದೆ. ಈ ಮೂಲಕ ಬುಮ್ರಾ ಮುಂಬೈ ಇಂಡಿಯನ್ಸ್ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.