SENA ರಾಷ್ಟ್ರಗಳ ಎದುರು ಹೊಸ ಮೈಲಿಗಲ್ಲು ನೆಟ್ಟ ಜಸ್ಪ್ರೀತ್ ಬುಮ್ರಾ* ಸೆನಾ ರಾಷ್ಟ್ರಗಳ ಎದುರು 100 ಬಲಿ ಪಡೆದ ಭಾರತದ 6ನೇ ಬೌಲರ್‌* ಬುಮ್ರಾ ಭಾರತದಲ್ಲಿ ಮಿಂಚಿದ್ದಕ್ಕಿಂದ ವಿದೇಶದಲ್ಲಿ ಅಬ್ಬರಿಸಿದ್ದೇ ಹೆಚ್ಚು

ಬೆಂಗಳೂರು(ಜು.07): ಮಾರಕ ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಸದ್ಯ ಟೀಂ ಇಂಡಿಯಾದ ಟ್ರಂಪ್​ ಕಾರ್ಡ್​ ಬೌಲರ್. ಟೀಂ ಇಂಡಿಯಾ (Team India) ವಿದೇಶದಲ್ಲಿ ಟೆಸ್ಟ್ ಸರಣಿಗಳನ್ನು ಗೆಲ್ಲುತ್ತಿದೆ ಅಥವಾ ಡ್ರಾ ಮಾಡಿಕೊಳ್ಳುತ್ತಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಬುಮ್ರಾ ಅವರ ಬೂಮ್ ಬೂಮ್ ಬೌಲಿಂಗ್. ಹೌದು, ಈ ಗುಜರಾತಿ ವೇಗಿ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಫಾರಿನ್ ಪಿಚ್​ಗಳು ಅಂದರೆ ಬುಮ್ರಾಗೆ ಅದೇನು ಪ್ರೀತಿನೋ ಗೊತ್ತಿಲ್ಲ. ಮೈದಾನಕ್ಕಿಳಿದ್ರು ಅಂದ್ರೆ ವಿಕೆಟ್ ಬೇಟೆಯಿಲ್ಲದ ವಾಪಾಸ್ ಹೋಗೋ ಮಾತೇ ಇಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸಿರೀಸ್​ನಲ್ಲಿ 23 ವಿಕೆಟ್​ಗಳನ್ನ ಪಡೆದಿದ್ದಾರೆ. 

SENA ರಾಷ್ಟ್ರಗಳಲ್ಲಿ 100ರಕ್ಕೂ ಅಧಿಕ ವಿಕೆಟ್: 

ಯಾವುದೇ ಒಬ್ಬ ಆಟಗಾರ ತವರಿನಲ್ಲಿ ಅಬ್ಬರಿಸಿ, ವಿದೇಶದಲ್ಲಿ ವಿಫಲನಾಗ್ತಾನೆ. ಆದ್ರೆ ಜಸ್​ಪ್ರೀತ್ ಬುಮ್ರಾ ಇವರಿಗೆಲ್ಲಾ ವಿಭಿನ್ನ. ಮನೆಯಲ್ಲಿ ಇಲಿ, ಬೀದಿಲಿ ಹುಲಿ ಅಂಥರಲ್ಲ ಹಾಗೆ. ಭಾರತದಲ್ಲಿ ಸೈಲೆಂಟ್, ವಿದೇಶದಲ್ಲಿ ವೈಲೆಂಟ್. ಭಾರತದಲ್ಲಿ ಜಸ್ಪ್ರೀತ್ ಆಡಿರೋ 4 ಟೆಸ್ಟ್​ಗಳಿಂದ ಪಡೆದಿರುವುದು ಕೇವಲ 14 ವಿಕೆಟ್ ಮಾತ್ರ. ಅದು ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಮಾತ್ರ ಆಡಿದ್ದಾರೆ. 

ಆದರೆ SENA(South Africa, England, New Zealand, Australia) ರಾಷ್ಟ್ರಗಳಲ್ಲಿ 22 ಟೆಸ್ಟ್​ಗಳನ್ನಾಡಿದ್ದಾರೆ. ಪಡೆದಿರೋ ವಿಕೆಟ್ 100ಕ್ಕೂ ಅಧಿಕ. ಇಂಗ್ಲೆಂಡ್ ವಿರುದ್ಧದ ಕೊನೆ ಟೆಸ್ಟ್​ನ 2ನೇ ಇನ್ನಿಂಗ್ಸ್​​ನಲ್ಲಿ ವಿಕೆಟ್ ಪಡೆಯೋ ಮೂಲಕ ಸೆನಾ ರಾಷ್ಟ್ರಗಳಲ್ಲಿ ವಿಕೆಟ್​ ಸೆಂಚುರಿ ಬಾರಿಸಿದ ಸಾಧನೆ ಮಾಡಿದ್ರು ಬುಮ್ರಾ. ಜೊತೆಗೆ ಸೆನಾ ರಾಷ್ಟ್ರದಲ್ಲಿ ವೇಗವಾಗಿ 100 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ರು. ಜಸ್​ಪ್ರೀತ್ ಬುಮ್ರಾ ಸೌತ್ ಆಫ್ರಿಕಾದಲ್ಲಿ 6 ಟೆಸ್ಟ್​ಗಳನ್ನಾಡಿದ್ದು 26 ವಿಕೆಟ್ ಪಡೆದ್ರೆ, ಇಂಗ್ಲೆಂಡ್​ನಲ್ಲಿ 9 ಟೆಸ್ಟ್​ಗಳಿಂದ 37 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲೆಂಡ್​ನಲ್ಲಿ ಕೇವಲ 2 ಟೆಸ್ಟ್​ ಆಡಿದ್ದು 6 ವಿಕೆಟ್​ ಉರುಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ 7 ಟೆಸ್ಟ್​ಗಳಿಂದ 32 ವಿಕೆಟ್​ ಪಡೆದಿದ್ದಾರೆ.

World Test Championship: ಭಾರತದ ಫೈನಲ್‌ ಹಾದಿ ಕಠಿಣ

ಬುಮ್ರಾ ವೆಸ್ಟ್ ಇಂಡೀಸ್​ನಲ್ಲೂ ಜಸ್ಪ್ರೀತ್ ಬುಮ್ರಾ 14 ವಿಕೆಟ್ ಪಡೆದಿದ್ದಾರೆ. ಅಲ್ಲಿಗೆ ಬ್ಯಾಟಿಂಗ್​ನಲ್ಲಿ ರಾಹುಲ್ ದ್ರಾವಿಡ್. ಬೌಲಿಂಗ್​ ಬುಮ್ರಾ. ದ್ರಾವಿಡ್ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಿನಲ್ಲಿ ಸೇನಾ ರಾಷ್ಟ್ರದಲ್ಲಿ ಬೂಮ್ ಬೂಮ್ ಬುಮ್ರಾ.

SENA ರಾಷ್ಟ್ರಗಳಲ್ಲಿ 100 ವಿಕೆಟ್‌ ಕಬಳಿಸಿದ ಭಾರತೀಯ ಬೌಲರ್‌ಗಳ ವಿವರ ಹೀಗಿದೆ

ಅನಿಲ್ ಕುಂಬ್ಳೆ - 141 ವಿಕೆಟ್
ಇಶಾಂತ್ ಶರ್ಮಾ - 130 ವಿಕೆಟ್
ಜಹೀರ್ ಖಾನ್ - 119 ವಿಕೆಟ್
ಮೊಹಮ್ಮದ್ ಶಮಿ - 119 ವಿಕೆಟ್
ಕಪಿಲ್ ದೇವ್ - 117 ವಿಕೆಟ್
ಜಸ್ಪ್ರೀತ್ ಬುಮ್ರಾ - 100 ವಿಕೆಟ್