Asianet Suvarna News Asianet Suvarna News

World Test Championship: ಭಾರತದ ಫೈನಲ್‌ ಹಾದಿ ಕಠಿಣ

* ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನಕ್ಕೆ ಜಾರಿದ ಭಾರತ
* ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ 2 ಅಂಕಗಳನ್ನು ಕಳೆದುಕೊಂಡ ಟೀಂ ಇಂಡಿಯಾ
* ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ

Ind vs Eng Team India drop below Pakistan in World Test Championship table to No 4 kvn
Author
Bengaluru, First Published Jul 6, 2022, 1:55 PM IST

ನವದೆಹಲಿ(ಜು.06): ಇಂಗ್ಲೆಂಡ್‌ ವಿರುದ್ಧದದ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಸೋಲು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ ಹಾದಿಯನ್ನು ಕಠಿಣಗೊಳಿಸಿದೆ. ಇಂಗ್ಲೆಂಡ್ ಎದುರಿನ ಟೆಸ್ಟ್‌ ಸೋಲಿನ ಜತೆಗೆ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ಭಾರತದ 2 ಅಂಕ ಕಡಿತಗೊಂಡಿದ್ದು, ಅಂಕಪಟ್ಟಿಯಲ್ಲಿ ಪಾಕಿಸ್ತಾನ, ಭಾರತವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಸೋಲಿನ ಜೊತೆಗೆ ಅಂಕವೂ ಕಡಿತಗೊಂಡಿದ್ದು ಭಾರತಕ್ಕೆ ಮತ್ತಷ್ಟು ಆಘಾತ ನೀಡಿದೆ. ವಿಶ್ವ ಟೆಸ್ಟ್‌ ಕೂಟದಲ್ಲಿ ಈವರೆಗೆ ಭಾರತದ 5 ಅಂಕ ಕಡಿತಗೊಂಡಿದೆ. 

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮರುನಿಗದಿಯಾಗಿದ್ದ ಬರ್ಮಿಂಗ್‌ಹ್ಯಾಮ್ ಟೆಸ್ಟ್ (Birmingham Test) ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಸುವರ್ಣಾವಕಾಶವಿತ್ತು. 5ನೇ ಟೆಸ್ಟ್‌ ಪಂದ್ಯದ ಮೊದಲ ಮೂರು ದಿನವು ಭಾರತ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಹೀಗಾಗಿ ಭಾರತ ಕ್ರಿಕೆಟ್ ತಂಡವು 2007ರ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಮತ್ತೊಮ್ಮೆ ಟೆಸ್ಟ್‌ ಸರಣಿ ಗೆಲ್ಲುವ ಕನಸು ಕಾಣುತ್ತಿತ್ತು. ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 378 ರನ್‌ಗಳ ಕಠಿಣ ಗುರಿ ನೀಡಿತ್ತು. ಭಾರತದ ಗುರಿಯನ್ನು ಅನಾಯಾಸವಾಗಿ ಬೆನ್ನತ್ತುವಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾಯಿತು. ಜೋ ರೂಟ್ ಹಾಗೂ ಜಾನಿ ಬೇರ್‌ಸ್ಟೋವ್ ಆಕರ್ಷಕ ಅಜೇಯ ಶತಕ ಸಿಡಿಸುವ ಮೂಲಕ ಮೊದಲ ಬಾರಿಗೆ 378 ರನ್‌ಗಳ ಗುರಿ ಬೆನ್ನತ್ತಿ ದಾಖಲೆ ಬರೆಯಿತು. ಇದರ ಜತೆಗೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತು. 

ಸದ್ಯ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (World Test Championship) ಭಾರತ 12 ಪಂದ್ಯಗಳಲ್ಲಿ 6 ಜಯ, 4 ಸೋಲು, 2 ಡ್ರಾದೊಂದಿಗೆ ಒಟ್ಟು 75 ಅಂಕಗಳಿಸಿದ್ದು ಶೇ.52.08ರ ಗೆಲುವಿನ ಪ್ರತಿಶತ ಹೊಂದಿದೆ. ಆಸ್ಪ್ರೇಲಿಯಾ, ದ.ಆಫ್ರಿಕಾ ಮೊದಲೆರಡು ಸ್ಥಾನಗಳಲ್ಲಿವೆ. ಎರಡನೇ ಅವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡವು ಅಗ್ರ 2ರಲ್ಲಿ ಸ್ಥಾನ ಪಡೆದು ಫೈನಲ್‌ಗೇರಬೇಕಿದ್ದರೆ ಬಾಕಿ ಇರುವ ಬಾಂಗ್ಲಾದೇಶ, ಆಸ್ಪ್ರೇಲಿಯಾ ವಿರುದ್ಧದ ಸರಣಿಗಳನ್ನು ಗೆಲ್ಲಬೇಕಿದ್ದು, ಉಳಿದ ತಂಡಗಳ ಫಲಿತಾಂಶ ಭಾರತದ ಪರ ಬರಬೇಕಿದೆ. 

ಭಾರತ ತಂಡವು ಎಜ್‌ಬಾಸ್ಟನ್‌ನಲ್ಲಿ  ನಿಧಾನಗತಿಯ ಬೌಲಿಂಗ್‌ ಮಾಡಿ ತಪ್ಪಿಗಾಗಿ 2 ಅಂಕಗಳನ್ನು ಕಳೆದುಕೊಂಡಿದ್ದರಿಂದಾಗಿ, ಪಾಕಿಸ್ತಾನ ತಂಡವು, ಟೀಂ ಇಂಡಿಯಾವನ್ನು (Team India) ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಏಕೈಕ ಟೆಸ್ಟ್ ಸರಣಿಯನ್ನು ಮಾತ್ರ ಸೋತಿದೆ. ಪಾಕಿಸ್ತಾನ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ಎದುರು 0-1 ಅಂತರದಲ್ಲಿ ಟೆಸ್ಟ್ ಸರಣಿ ಸೋಲು ಕಂಡಿದೆ. ಇದೀಗ ಪಾಕಿಸ್ತಾನ ತಂಡವು ಭಾರತಕ್ಕಿಂತ ಅಂಕಪಟ್ಟಿಯಲ್ಲಿ ಮತ್ತಷ್ಟು ಉತ್ತಮ ಅವಕಾಶವಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡವು ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಎದುರು 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. 

Ind vs Eng ಬೇರ್‌ಸ್ಟೋವ್, ರೂಟ್‌ ದಾಳಿಗೆ ದಾರಿ ತಪ್ಪಿದ ಟೀಂ ಇಂಡಿಯಾ..!

ಜುಲೈ 05ರ ವೇಳೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ನ ಅಗ್ರ 5 ಸ್ಥಾನ ಪಡೆದಿರುವ ತಂಡಗಳ ವಿವರ ಹೀಗಿದೆ

1. ಆಸ್ಟ್ರೇಲಿಯಾ - 84 ಅಂಕ - 77.78%
2. ದಕ್ಷಿಣ ಆಫ್ರಿಕಾ - 60 ಅಂಕ 71.43%
3. ಪಾಕಿಸ್ತಾನ - 44 ಅಂಕ - 52.38%
4. ಭಾರತ - 75 ಅಂಕ - 52.98%
5.  ವೆಸ್ಟ್ ಇಂಡೀಸ್ - 54 ಅಂಕ - 54%  

Follow Us:
Download App:
  • android
  • ios