ನವದೆಹಲಿ(ನ.02): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ಬಿಸಿಸಿಐ ಎಲ್ಲಾ ತಯಾರಿ ಮಾಡಿಕೊಂಡಿದೆ. ದೆಹಲಿ ಮಾಲಿನ್ಯದಿಂದ ಪಂದ್ಯ ಸ್ಥಳಾಂತರಿಸೋ ಒತ್ತಡ ಕೇಳಿ ಬಂದಿದ್ದರೂ ಬಿಸಿಸಿಐ ದೆಹಲಿಯಲ್ಲೇ ಮುಂದಾಗಿದೆ. ಮೊದಲ ಟಿ20 ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ನಾಯಕ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದರು. ಇದೀಗ ರೋಹಿತ್ ಗಾಯದ ವೈದ್ಯಕೀಯ ವರದಿ ಬಹಿರಂಗವಾಗಿದೆ.

ಇದನ್ನೂ ಓದಿ: ಅಭ್ಯಾಸದ ವೇಳೆ ರೋಹಿತ್ ಗೆ ಗಾಯ: ಮುಂದೇನು..?

ಅಭ್ಯಾಸದ ವೇಳೆ ರೋಹಿತ್ ಶರ್ಮಾಗೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಥ್ರೋಡೌನ್ ಮಾಡುತ್ತಿದ್ದ ವೇಳೆ ಗಾಯಗೊಂಡಿದ್ದರು. ತಕ್ಷಣವೇ ರೋಹಿತ್ ಶರ್ಮಾ ಅಭ್ಯಾಸ ಮೊಟಕುಗೊಳಿಸಿ ವಾಪಾಸ್ಸಾಗಿದ್ದರು. ಇದೀಗ ವೈದ್ಯಕೀಯ ವರದಿ ಬಹಿರಂಗವಾಗಿದೆ. ರೋಹಿತ್ ಶರ್ಮಾ ಮೊದಲ ಪಂದ್ಯ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಇದನ್ನೂ ಓದಿ: ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ಮೊದಲ ಪಂದ್ಯಕ್ಕೆ ಲಭ್ಯವಿರುವುದಾಗಿ ಟೀಂ ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ. ರೋಹಿತ್ ಫಿಟ್ ಆಗಿದ್ದು, ತಂಡ ಮುನ್ನಡೆಸಲಿದ್ದಾರೆ ಎಂದಿದೆ.