Asianet Suvarna News Asianet Suvarna News

IPL 2021: ಆಶಿಶ್ ನೆಹ್ರಾ ಅಹಮದಾಬಾದ್‌ ತಂಡದ ಹೆಡ್‌ ಕೋಚ್‌..!

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಭರದ ಸಿದ್ದತೆಗಳು ಆರಂಭ

* ಆಶಿಶ್ ನೆಹ್ರಾ ಅಹಮದಾಬಾದ್ ತಂಡದ ಕೋಚ್ ಆಗಿ ನೇಮಕ

* ಅಹಮದಾಬಾದ್ ತಂಡದ ಮೆಂಟರ್ ಆಗಿ ಗ್ಯಾರಿ ಕರ್ಸ್ಟನ್‌ ಆಯ್ಕೆ

Team India Former Cricketer Ashish Nehra set to become Ahmedabad IPL team head coach Says Report kvn
Author
Bengaluru, First Published Jan 4, 2022, 6:02 PM IST

ನವದೆಹಲಿ(ಜ.04): ಟೀಂ ಇಂಡಿಯಾ ಮಾಜಿ ವೇಗದ ಬೌಲರ್‌ ಆಶಿಶ್ ನೆಹ್ರಾ (Ashish Nehra) ಮುಂಬರುವ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ನೂತನ ಫ್ರಾಂಚೈಸಿಯಾದ ಅಹಮದಾಬಾದ್‌ ತಂಡದ ಹೆಡ್‌ ಕೋಚ್‌ ಆಗಿ ನೇಮಕವಾಗಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿಕ್ರಂ ಸೋಲಂಕಿ (Vikram Solanki) ಅವರನ್ನು ಡೈರೆಕ್ಟರ್‌ ಆಗಿ ಆಯ್ದುಕೊಂಡಿದ್ದು, ವಿಶ್ವಕಪ್ ವಿಜೇತ ಕೋಚ್ ಗ್ಯಾರಿ ಕರ್ಸ್ಟನ್‌ ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ ಎಂದು ವರದಿ ಮಾಡಿದೆ.

ನನಗೆ ಬಂದಿರುವ ಮಾಹಿತಿಯ ಪ್ರಕಾರ ಈಗಾಗಲೇ ಆಶಿಶ್ ನೆಹ್ರಾ ಅಹಮದಾಬಾದ್ ತಂಡದ ಹೆಡ್‌ ಕೋಚ್ ಆಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನು ವಿಕ್ರಂ ಸೋಲಂಕಿ ತಂಡದ ಮ್ಯಾನೇಜರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗ್ಯಾರಿ ಕರ್ಸ್ಟನ್‌ ಮೆಂಟರ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಐಪಿಎಲ್‌ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. 

ಆಶಿಶ್‌ ನೆಹ್ರಾ ಈ ಮೊದಲು ಟೀಂ ಇಂಡಿಯಾ ಪರ ಆಡುವಾಗ ಗ್ಯಾರಿ ಕರ್ಸ್ಟನ್‌ ಅವರ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಈ ಇಬ್ಬರು ಕ್ರಿಕೆಟಿಗರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡದ ಕೋಚ್‌ ಸಿಬ್ಬಂದಿಗಳಾಗಿ ಕಾಣಿಸಿಕೊಂಡಿದ್ದರು. 

IPL 2022: ಅಹಮದಾಬಾದ್ ಕೋಚ್‌ಗಳಾಗಿ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ನೇಮಕ..?

ಐಪಿಎಲ್‌ನ ಹೊಸ ತಂಡಗಳ ಪೈಕಿ ಅಹಮದಾಬಾದ್‌ ತಂಡವನ್ನು ಖರೀದಿಸಿದ ಲಕ್ಸೆಂಬರ್ಗ್‌ ಮೂಲದ ಸಿವಿಸಿ ಕ್ಯಾಪಿಟಲ್ಸ್‌ (CVC Capitals) ಸಂಸ್ಥೆ, ಬೆಟ್ಟಿಂಗ್‌ ಕಂಪನಿಗಳ ಜೊತೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಗ್ಗೆ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಿದ್ದು, ಸಮಿತಿಯು ಇನ್ನಷ್ಟೇ ಈ ಬಗ್ಗೆ ವರದಿ ಸಲ್ಲಿಸಬೇಕಿದೆ. ಸಿವಿಸಿ ಕ್ಯಾಪಿಟಲ್ಸ್‌ ಯುರೋಪ್‌ ಹಾಗೂ ಏಷ್ಯಾದಲ್ಲಿ ಪ್ರತ್ಯೇಕ ಬಂಡವಾಳ ಹೂಡಿಕೆ ವ್ಯವಸ್ಥೆಯನ್ನು ಹೊಂದಿದ್ದು, ಯುರೋಪ್‌ ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಆದರೆ ಏಷ್ಯಾದಲ್ಲಿ ಸಂಸ್ಥೆಯು ಬೆಟ್ಟಿಂಗ್‌ ವ್ಯವಹಾರದಲ್ಲಿ ತೊಡಗಿಲ್ಲ ಎಂದು ನಾಲ್ವರು ಸದಸ್ಯರ ಸಮಿತಿ ಬಿಸಿಸಿಐಗೆ ವರದಿ ನೀಡಿದೆ ಎನ್ನಲಾಗಿದೆ. ಅಹಮದಾಬಾದ್‌ ತಂಡಕ್ಕೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ, ಆಟಗಾರರ ಮೆಗಾ ಹರಾಜು (IPL Mega Auction) ಪ್ರಕ್ರಿಯೆ ಕೊಂಚ ತಡವಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಬಿಸಿಸಿಐ ಗ್ರೀನ್ ಸಿಗ್ನಲ್ ಬಳಿಕ ಅಹಮದಾಬಾದ್‌ ಫ್ರಾಂಚೈಸಿಯಿಂದ ಅಧಿಕೃತ ಘೋಷಣೆ:

ಅಹಮದಾಬಾದ್ ಫ್ರಾಂಚೈಸಿಯ (Ahmedabad Franchise) ಕುರಿತಂತೆ ಈಗಾಗಲೇ ಬಿಸಿಸಿಐ (BCCI) ಸ್ವತಂತ್ರ ತನಿಖೆ ನಡೆಸಿದ್ದು, ಬಹುತೇಕ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಹಮದಾಬಾದ್ ಫ್ರಾಂಚೈಸಿಗೆ ಬಿಸಿಸಿಐ ಅನುಮತಿ ನೀಡಲಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಹೀಗಾಗಿ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದ ಬಳಿಕವಷ್ಟೇ ಅಹಮದಾಬಾದ್ ಫ್ರಾಂಚೈಸಿಯು ತನ್ನ ಕೋಚ್‌ ನೇಮಕ ಕುರಿತಂತೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಇನ್ನು ಐಪಿಎಲ್ ಮೆಗಾ ಹರಾಜಿಗೂ (IPL Mega Auction) ಮುನ್ನ ಹೊಸ ಎರಡು ತಂಡಗಳಿಗೆ ಗರಿಷ್ಠ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಹೀಗಾಗಿ ಅಹಮದಾಬಾದ್‌ ಫ್ರಾಂಚೈಸಿಯು ಯಾವೆಲ್ಲಾ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ.

Follow Us:
Download App:
  • android
  • ios