ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಭಾರತದ ವೇಗಿಗಳ ಪರಾಕ್ರಮಕ್ಕೆ ಬಾಂಗ್ಲಾದೇಶ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂದೋರ್(ನ.16): ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಮೂರನೇ ದಿನದಲ್ಲೇ ಅಂತ್ಯವಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಭಾರತದ 493 ರನ್ ಸಿಡಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 343 ರನ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಆರಂಭಿಕ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಭಾರತ 493 ರನ್‌ಗೆ ಡಿಕ್ಲೇರ್; ಸಂಕಷ್ಟದಲ್ಲಿ ಬಾಂಗ್ಲಾದೇಶ!

ಟೀಂ ಇಂಡಿಯಾ ವೇಗಿಗಳ ಪರಾಕ್ರಮಕ್ಕೆ ಬಾಂಗ್ಲಾದೇಶ ತತ್ತರಿಸಿದೆ. ಆರಂಭದಲ್ಲೇ ಉಮೇಶ್ ಯಾದವ್ ಶಾಕ್ ನೀಡಿದರೆ, ಬಳಿಕ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟಿದ್ದಾರೆ. 

Scroll to load tweet…

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಇಮ್ರುಲ್ ಕೈಸ್ 6 ರನ್ ಸಿಡಿಸಿ ಔಟಾದರೆ, ಶದ್ಮನ್ ಇಸ್ಲಾಂ 6 ರನ್‌ಗಳಿಸಿ ಔಟಾದರು. ನಾಯಕ ಮೊಮಿನಲ್ ಹಕ್ 7 ರನ್‌ಗಳಿಸಿ ನಿರ್ಗಮಿಸಿದರು. ಮೊಹಮ್ಮದ್ ಮಿಥುನ್ 18 ರನ್ ಸಿಡಿಸಿ, ಶಮಿಗೆ ವಿಕೆಟ್ ಒಪ್ಪಿಸಿದರು 44 ರನ್‌ಗಳಿಗೆ ಬಾಂಗ್ಲಾ 4 ವಿಕೆಟ್ ಕಳೆದುಕೊಂಡಿತು.. ಸದ್ಯ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದುಲ್ಲಾ ಆಸರೆಯಾಗಿದ್ದಾರೆ.