ಮುಂಬೈ(ನ.26): ಭಾರತೀಯ ಇತಿಹಾಸದಲ್ಲಿ ನವೆಂಬರ್ 26 ಅತ್ಯಂತ ಕರಾಳ ದಿನ. ಮುಂಬೈ ಮೇಲೆ ಭಯೋತ್ಪಾದಕರ ದಾಳಿಗೆ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಪಾಕಿಸ್ತಾನದ 10 ಉಗ್ರರ ತಂಡ, ಮುಂಬೈನ ಪ್ರಮುಖ ತಾಣಗಳ ಮೇಲೆ ದಾಳಿ ಮಾಡಿ ಬರೋಬ್ಬರಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಇಷ್ಟೇ ಅಲ್ಲ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ 9 ಮಂದಿ ಉಗ್ರರನ್ನು ಸದೆಬಡದು, ಓರ್ವನನ್ನು ಜೀವಂತವಾಗಿ ಹಿಡಿಯಲಾಗಿತ್ತು. ಈ ದಾಳಿ ನಡೆದು ಇಂದಿಗೆ 11 ವರ್ಷ ಪೂರೈಸಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಉಗ್ರರ ದಾಳಿಯಲ್ಲಿ ಸಾವೀಗೀಡಾದ ನಾಗರಿಕರೂ ಹಾಗೂ ಪೊಲೀಸರಿಗೆ ಗೌರವ ನುಡಿ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!

ನವೆಂಬರ್ 26, 2008ರಲ್ಲಿ ಭಾರತ ಭೀಕರ ದಾಳಿಗೆ ತುತ್ತಾಗಿತ್ತು. 3 ದಿನಗಳ ಕಾಳಗದಲ್ಲಿ ಉಗ್ರರ ಹೆಡೆಮುರಿ ಕಟ್ಟಲಾಯಿತು. ಆದರೆ ಭಾರತದ ಹೆಮ್ಮೆಯ ಪೊಲೀಸರು, ಹಾಗೂ NSG ಕಮಾಂಡೋ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಈ ದಾಳಿಯಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕೂಡ ರದ್ದಾಗಿತ್ತು. ಇದೀಗ ಈ ಕರಾಳ ದಿನದಲ್ಲಿ ಧರ್ಯದಿಂದ ಮುನ್ನಗ್ಗಿ ಮತ್ತಷ್ಟು ಅಪಾಯವನ್ನು ತಪ್ಪಿಸಿದ ಹುತಾತ್ಮ ಭದ್ರತಾ ಸಿಬ್ಬಂಧಿಗಳನ್ನು ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ಮರಿಸಿದ್ದಾರೆ.