ಟೀಂ ಇಂಡಿಯಾ ಕ್ರಿಕೆಟಿಗ ಹೋಳಿ ಸಂಭ್ರಮ ವಿಡಿಯೋ ವೈರಲ್ ಆಗಿದೆ.  ಟೀಂ ಬಸ್‌ನಲ್ಲಿ ಆರಂಭಗೊಂಡ ಹೋಳಿ ಸಂಭ್ರಮ ಹೊಟೆಲ್, ಆಟಗಾರರ ರೂಂನಲ್ಲೂ ಅದ್ಧೂರಿಯಾಗಿ ಆಚರಿಸಲಾಗಿದೆ. 

ಅಹಮ್ಮದಾಬಾದ್(ಮಾ.07): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಾರ್ಚ್ 9 ರಿಂದ 4ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಈಗಾಗಲೇ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ಇದರ ನಡುವೆ ಟೀಂ ಇಂಡಿಯಾ ಹೋಳಿ ಹಬ್ಬ ಆಚರಿಸಿದೆ. ತಂಡದ ಬಸ್‌ನಲ್ಲಿ ಕ್ರಿಕೆಟಿಗರು ಬಣ್ಣ ಎರಚಿ ಸಂಭ್ರಮ ಶುರು ಮಾಡಿದ್ದಾರೆ. ಒಬ್ಬರಿಗೊಬ್ಬರು ಬಣ್ಣದೊಕುಳಿ ಆಡಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಶುಬಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಬಸ್‌ನಲ್ಲಿ ಹೋಳಿ ಸಂಭ್ರಮ ಶುರುಮಾಡಿದ್ದಾರೆ. ಬಳಿಕ ಈ ಸಂಭ್ರಮ ಹೊಟೆಲ್, ಆಟಗಾರರ ರೂಂನಲ್ಲೂ ಅದ್ಧೂರಯಾಗಿ ಆಚರಿಸಲಾಗಿದೆ.

ಮಾರ್ಚ್ 8 ರಂದು ದೇಶಾದ್ಯಂತ ಹೋಳಿ ಹಬ್ಬ ಆಚರಿಸಲಾಗುತ್ತದೆ. ಟೀಂ ಇಂಡಿಯಾ ಕ್ರಿಕೆಟಿಗರ ಸಂಭ್ರಮ ಇಂದಿನಿಂದಲೇ ಆರಂಭಗೊಂಡಿದೆ. ರಂಗ್ ಬರಸೇ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಾ ಕ್ರಿಕೆಟಿಗರು ಹೋಳಿ ಹಬ್ಬ ಶುರು ಮಾಡಿದ್ದಾರೆ. ಟೀಂ ಬಸ್‌ನಲ್ಲಿ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಸೆಲ್ಫಿ ವಿಡಿಯೋ ಮೂಲಕ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ವೇಳೆ ಹಿಂಭಾಗದಲ್ಲಿದ್ದ ರೋಹಿತ್ ಶರ್ಮಾ, ಹೋಳಿ ಬಣ್ಣದೊಂದಿದೆ ಮತ್ತೆ ಒಕುಳಿಯಾಡಿದ್ದಾರೆ.

Ind vs Aus ಮೂರೇ ದಿನಕ್ಕೆ ಮುಗಿದ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ..!

ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರು, ಸಿಬ್ಬಂದಿಗಳು ಬಣ್ಣದಲ್ಲಿ ಮುಳುಗಿದ್ದಾರೆ. ಹಲವರ ಗುರುತೇ ಸಿಗದಂತೆ ಬಣ್ಣದೋಕುಳಿಯಾಡಿದ್ದಾರೆ. ಶುಭಮನ್ ಗಿಲ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ಚೇತೇಶ್ವರ ಪೂಜಾರ ಸೇರಿದಂತೆ ಕ್ರಿಕೆಟಿಗರ ಸಂಭ್ರಮ ಇದೀಗ ವೈರಲ್ ಆಗಿದೆ.

View post on Instagram

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಅಂತಿಮ ಹಂತದಲ್ಲಿದೆ. ಆರಂಭಿಕ 2 ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದೆ. ಇದೀಗ ಅಂತಿಮ ಟೆಸ್ಟ್ ಪಂದ್ಯ ಮಹತ್ವ ಪಡೆದುಕೊಂಡಿದೆ. ಅಹಮ್ಮದಾಬಾದ್‌ನಲ್ಲಿ ಮಾರ್ಚ್ 9 ರಿಂದ ಅಂತಿಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಭಾರತ ವಿರುದ್ಧ 3ನೇ ಟೆಸ್ಟ್‌ನಲ್ಲಿ 9 ವಿಕೆಟ್‌ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಬೇಕಿದ್ದರೆ ಆಸೀಸ್‌ ವಿರುದ್ಧ ಅಹಮದಾಬಾದ್‌ನಲ್ಲಿ ಮಾ.9ರಿಂದ ಆರಂಭಗೊಳ್ಳಲಿರುವ 4ನೇ ಟೆಸ್ಟ್‌ನಲ್ಲಿ ಗೆಲ್ಲಬೇಕು. ಒಂದು ವೇಳೆ ಭಾರತ ಸೋತರೆ ಅಥವಾ ಪಂದ್ಯ ಡ್ರಾಗೊಂಡರೆ, ಶ್ರೀಲಂಕಾ ತಂಡ ನ್ಯೂಜಿಲೆಂಡ್‌ ವಿರುದ್ಧ 2-0ಯಲ್ಲಿ ಸರಣಿ ಗೆಲ್ಲಬಾರದು. ಭಾರತ ಸೋತು, ಲಂಕಾ 2-0ಯಲ್ಲಿ ಜಯಿಸಿದರೆ ಭಾರತ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ. 

ತವರಿನಲ್ಲಿ ಕಳೆದ 10 ವರ್ಷದಲ್ಲಿ ಭಾರತಕ್ಕಿದು ಕೇವಲ 3ನೇ ಟೆಸ್ಟ್‌ ಸೋಲು. 2013ರಿಂದ ಈ ವರೆಗೂ ತಂಡ ಒಟ್ಟು 47 ಪಂದ್ಯಗಳನ್ನು ಆಡಿದ್ದು 38ರಲ್ಲಿ ಜಯ ಸಾಧಿಸಿದೆ. 6 ಪಂದ್ಯಗಳು ಡ್ರಾಗೊಂಡಿವೆ. 2017ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಪುಣೆಯಲ್ಲಿ, 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ಭಾರತ ಸೋಲುಂಡಿತ್ತು.

25 ಮಿಲಿಯನ್‌ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿದ ಅತಿ ಕಿರಿಯ ಕ್ರಿಕೆಟಿಗ; ಹಾರ್ದಿಕ್ ಪಾಂಡ್ಯ ಹೊಸ ದಾಖಲೆ..!

ಇಂದೋರ್‌ನಲ್ಲಿ ತನ್ನದೇ ಸ್ಪಿನ್‌ ಖೆಡ್ಡಾಕ್ಕೆ ಬಿದ್ದರೂ, ಭಾರತ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಕ್ಯುರೇಟರ್‌ಗೆ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಗೊಳಿಸಲು ಮನವಿ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್‌, ‘ತವರಿನಲ್ಲಿ ಹೆಚ್ಚಾಗಿ ಸ್ಪಿನ್‌ ಸ್ನೇಹಿ ಪಿಚ್‌ಗಳಲ್ಲಿ ಆಡಲು ನಾವು ಇಚ್ಛಿಸುತ್ತೇವೆ. ಅದೇ ನಮ್ಮ ಶಕ್ತಿ’ ಎಂದರು.