ರಣಜಿ ಟ್ರೋಫಿ: ದೆಹಲಿ ತಂಡದಲ್ಲಿ ಇಶಾಂತ್‌, ಧವನ್‌

ರಣಜಿ ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಇಶಾಂತ್ ಶರ್ಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಹಿಮಾಚಲ ಪ್ರದೇಶ ವಿರುದ್ಧ ಮೈಸೂರಿನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಯಾಂಕ್ ಅಗರ್‌ವಾಲ್ ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India Cricketer Shikhar Dhawan Ishant Sharma To Play For Delhi In Ranji Trophy Game Against Hyderabad

ನವದೆಹಲಿ(ಡಿ.24): ಹಿರಿಯ ವೇಗದ ಬೌಲರ್‌ ಇಶಾಂತ್‌ ಶರ್ಮಾ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಡಿ.25 ರಿಂದ ಆರಂಭವಾಗಲಿರುವ ಹೈದ್ರಾಬಾದ್‌ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ಪರ ಆಡಲಿದ್ದಾರೆ. 

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗ ಮಯಾಂಕ್ ಔಟ್!

ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿರುವ ಇಶಾಂತ್‌, ರಣಜಿ ಟ್ರೋಫಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿ ವೇಳೆ ಮಂಡಿ ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿರುವ ಧವನ್‌ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆಯಲ್ಲಿದ್ದಾರೆ.

22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

ಇಶಾಂತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 12 ವಿಕೆಟ್ ಪಡೆಯುವ ಮೂಲಕ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಇನ್ನು ಧವನ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಗಾಯಗೊಂಡ ಬಳಿಕ, ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದೀಗ ಧವನ್ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ರಣಜಿ ತಂಡಕ್ಕೆ ಮರಳಿದ ಮಯಾಂಕ್‌

ಬೆಂಗಳೂರು: ಡಿ. 25 ರಿಂದ 28 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿರುದ್ಧದ 2019-20ರ ರಣಜಿ ಟ್ರೋಫಿ ಪಂದ್ಯದಲ್ಲಿ ಮಯಾಂಕ್‌ ಅಗರ್‌ವಾಲ್‌ ಕರ್ನಾಟಕ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 

ಶಿಖರ್ ಧವನ್’ಗೆ ಗಂಭೀರ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ವಿಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಮಯಾಂಕ್‌, 11ರ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ. 15 ಆಟಗಾರರ ಕರ್ನಾಟಕ ತಂಡವನ್ನು ಕೆಎಸ್‌ಸಿಎ, ಸೋಮವಾರ ಪ್ರಕಟಿಸಿದೆ. ರಾಹುಲ್‌, ಮನೀಶ್‌ ಪಾಂಡೆ ರಾಷ್ಟ್ರೀಯ ತಂಡದಲ್ಲಿ ಆಡುವ ಸಲುವಾಗಿ ರಾಜ್ಯ ತಂಡದಲ್ಲಿ ಅವಕಾಶ ನೀಡಿಲ್ಲ.

ತಂಡ: ಕರುಣ್‌ ನಾಯರ್‌ (ನಾಯಕ), ರೋಹನ್‌ ಕದಂ, ದೇವದತ್‌, ನಿಶ್ಚಲ್‌, ಸಮರ್ಥ್, ಮಯಾಂಕ್‌, ಪ್ರವೀಣ್‌, ಶ್ರೇಯಸ್‌, ಸುಚಿತ್‌, ಶರತ್‌, ಶರತ್‌ ಶ್ರೀನಿವಾಸ್‌, ಪ್ರತೀಕ್‌ ಜೈನ್‌, ದೇವಯ್ಯ, ಕೌಶಿಕ್‌, ಮಿಥುನ್‌.
 

Latest Videos
Follow Us:
Download App:
  • android
  • ios