Asianet Suvarna News Asianet Suvarna News

Ravindra Jadeja ಟೆಸ್ಟ್‌ ನಿವೃತ್ತಿ ವದಂತಿ ತಳ್ಳಿ ಹಾಕಿದ ಕ್ರಿಕೆಟಿಗ..!

* ಗಾಳಿ ಸುದ್ದಿಗಳಿಗೆ ತೆರೆ ಎಳೆದ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ

* ಸದ್ಯಕ್ಕೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯಿಲ್ಲವೆಂದು ಸ್ಪಷ್ಟಪಡಿಸಿದ ಜಡ್ಡು

* ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಆಲ್ರೌಂಡರ್

Team India Cricketer Ravindra Jadeja Lashes out Test Retirement Rumours kvn
Author
Bengaluru, First Published Dec 16, 2021, 11:17 AM IST

ನವದೆಹಲಿ(ಡಿ.16): ಭಾರತ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳನ್ನು ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅಲ್ಲಗೆಳೆದಿದ್ದಾರೆ. ಬುಧವಾರ ತಾವು ಟೆಸ್ಟ್‌ ತಂಡದ ಜರ್ಸಿ ಧರಿಸಿರುವ ಫೋಟೋವೊಂದನ್ನು ಟ್ವೀಟ್‌ ಮಾಡಿದ ಅವರು, ‘ಇನ್ನೂ ತುಂಬಾ ದೂರ ಸಾಗಬೇಕಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ‘ನಕಲಿ ಸ್ನೇಹಿತರು ಸುಳ್ಳು ಸುದ್ದಿ ಹರಡುತ್ತಾರೆ, ಒಳ್ಳೆಯ ಸ್ನೇಹಿತರು ಮಾತ್ರ ನಿಮ್ಮನ್ನು ನಂಬುತ್ತಾರೆ’ ಎಂಬ ಹೇಳಿಕೆಯೊಂದನ್ನು ಟ್ವೀಟ್‌ ಮಾಡಿದ್ದಾರೆ. 

ಲಯ, ಒತ್ತಡ ನಿಭಾಯಿಸಲು ಹಾಗೂ ಸೀಮಿತ್‌ ಓವರ್‌ನತ್ತ ಸಂಪೂರ್ಣ ಗಮನಹರಿಸುವ ನಿಟ್ಟಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ (Test Cricket) ಜಡೇಜಾ ನಿವೃತ್ತಿ ಹೇಳಲಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತಂತೆ ಇದೀಗ ರವೀಂದ್ರ ಜಡೇಜಾ ತಮ್ಮ ದಿಟ್ಟ ನಿಲುವನ್ನು ಪ್ರಕಟಿಸಿದ್ದರು.

ರವೀಂದ್ರ ಜಡೇಜಾ ಭಾರತ ಕ್ರಿಕೆಟ್‌ ತಂಡದ (Indian Cricket Team) ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ಧಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಬೌಲಿಂಗ್ ಆಲ್ರೌಂಡರ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್ ಆಲ್ರೌಂಡರ್ ಆಗುವತ್ತ ಸಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಜಡೇಜಾ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಜಡ್ಡು ಟೆಸ್ಟ್ ಕ್ರಿಕೆಟ್‌ಗೆ ಸದ್ಯದಲ್ಲೇ ಗುಡ್‌ ಬೈ ಹೇಳಿ ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಗಮನ ಹರಿಸಲಿದ್ದಾರೆ ಎಂದು ವರದಿಯಾಗಿತ್ತು. 

ಕ್ರೀಡೆಗಿಂತ ಯಾರೂ ದೊಡ್ಡವರಲ್ಲ: ಠಾಕೂರ್‌

ನವದೆಹಲಿ: ಟೀಂ ಇಂಡಿಯಾ ನಾಯಕರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ನಡುವಿನ ಮನಸ್ತಾಪ ವರದಿ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur), ‘ಕ್ರೀಡೆಗಿಂತ ಯಾರೂ ದೊಡ್ಡವರಲ್ಲ’ ಎಂದು ಹೇಳಿದ್ದಾರೆ. ಈ ಬಗ್ಗೆ ಬುಧವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಆಟದಲ್ಲಿ, ಯಾವ ಆಟಗಾರರ ನಡುವೆ ಏನೇನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಮಾಹಿತಿ ನೀಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಒಕ್ಕೂಟ/ಸಂಸ್ಥೆಗಳೇ ಇದನ್ನು ಇತ್ಯರ್ಥ ಪಡಿಸಲಿದೆ. ಅವರು ಮಾಹಿತಿ ನೀಡಿದರೆ ಅದು ಉತ್ತಮವಾಗಿರಲಿದೆ’ ಎಂದಿದ್ದಾರೆ.

Virat Kohli Press Conference: ಬಿಸಿಸಿಐ ಬಣ್ಣ ಬಯಲು ಮಾಡಿದ ಕಿಂಗ್ ಕೊಹ್ಲಿ..!

ಬುಧವಾರವಷ್ಟೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಹಾಗೂ ರೋಹಿತ್ ಶರ್ಮಾ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದರ ಜತೆಗೆ ತಾವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (India Tour of South Africa) ಏಕದಿನ ಸರಣಿಯಲ್ಲಿ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಖಚಿತ ಪಡಿಸಿದ್ದಾರೆ.

Kohli Vs Rohit Sharma: ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಕೊಹ್ಲಿ-ರೋಹಿತ್‌ ಸಂಧಾನ ?

ಬಿಸಿಸಿಐ (BCCI) ಆಯ್ಕೆ ಸಮಿತಿಯು ಏಕಾಏಕಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ, ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ ಬೆನ್ನಲ್ಲೇ ವಿರಾಟ್ ಕೊಹ್ಲಿ, ಬಿಸಿಸಿಐ ಹಾಗೂ ರೋಹಿತ್ ಶರ್ಮಾ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಿಂದ ಕೊಹ್ಲಿ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೆ ವಿರಾಟ್ ಕೊಹ್ಲಿ ತೆರೆ ಎಳೆದಿದ್ದಾರೆ.

Follow Us:
Download App:
  • android
  • ios