ಬೆಂಗಳೂರು[ನ.09]: ಟೀಂ ಇಂಡಿಯಾ ಪ್ರತಿಭಾನ್ವಿತ ಆಟಗಾರ ಪೃಥ್ವಿ ಶಾ 20ನೇ ವಸಂತಕ್ಕೆ ಕಾಲಿರಿಸಿದ್ದಾರೆ. 2018ರ ಅಕ್ಟೋಬರ್’ನಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಶಾ, ತಾವಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಕಿರಿಯ ಬ್ಯಾಟ್ಸ್’ಮನ್ ಎನ್ನುವ ದಾಖಲೆಯನ್ನು ಬರೆದಿದ್ದರು. ಪೃಥ್ವಿ ಶಾ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಪೃಥ್ವಿ ಶಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದ ಶಾ, ಆ ಬಳಿಕ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ 8 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ. ಇದೀಗ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL

ತಮ್ಮ ಹಬ್ಬದ ದಿನದಂದೇ ಟ್ವೀಟ್ ಮಾಡಿರುವ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ, ’ನಾನಿಂದು 20ನೇ ವರ್ಷಕ್ಕೆ ಕಾಲಿಟ್ಟಿದೇನೆ. ಇನ್ಮುಂದೆ ಪೃಥ್ವಿ ಶಾ 2.0 ನೋಡುತ್ತೀರ ಎಂದು ಭರವಸೆ ನೀಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆಗೆ ಧನ್ಯವಾದಗಳು. ಶ್ರೀಘ್ರದಲ್ಲೇ ಕಮ್’ಬ್ಯಾಕ್ ಮಾಡುತ್ತೇನೆ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ’ ನೀಡಿದ್ದಾರೆ.

ಶೀಘ್ರದಲ್ಲೇ ಮುಂಬೈ ತಂಡಕ್ಕೆ ಪೃಥ್ವಿ?

ಮುಂಬೈ: ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿ 8 ತಿಂಗಳ ನಿಷೇ​ಧ​ಕ್ಕೊ​ಳ​ಗಾ​ಗಿ​ದ್ದ ಯುವ ಕ್ರಿಕೆಟಿಗ ಪೃಥ್ವಿ ಶಾ, ಸದ್ಯ​ದ​ಲ್ಲೇ ಮುಂಬೈ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ನ.16ಕ್ಕೆ ಶಾ ನಿಷೇಧ ಅವಧಿ ಮುಕ್ತಾ​ಯ​ಗೊ​ಳ್ಳ​ಲಿದೆ.

’ನ.16ರ ಬಳಿಕ ಶಾ ಕ್ರಿಕೆಟ್‌ ಆಡಲು ಲಭ್ಯರಿರುತ್ತಾರೆ. ಅವರನ್ನು ಖಂಡಿ​ತ​ವಾ​ಗಿಯೂ ಆಯ್ಕೆಗೆ ಪರಿ​ಗ​ಣಿ​ಸು​ತ್ತೇವೆ. ಆದರೆ ತಂಡ​ದಲ್ಲಿ ಸ್ಥಾನ ನೀಡು​ತ್ತೇವೆ ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯ​ವಿಲ್ಲ. ಅವರ ಆಯ್ಕೆ ಬಗ್ಗೆ ಚರ್ಚಿ​ಸ​ಬೇ​ಕಿದೆ’ ಎಂದು ಮುಂಬೈ ಆಯ್ಕೆ ಸಮಿತಿ ಅಧ್ಯಕ್ಷ ಮಿಲಿಂದ್‌ ರೆಜಿ ತಿಳಿಸಿದ್ದಾರೆ. ಶಾ ತಂಡಕ್ಕೆ ಲಭ್ಯರಾಗುವ ವೇಳೆಗೆ ಮುಂಬೈ ತಂಡ ಗುಂಪು ಹಂತದ 7 ಪಂದ್ಯ​ಗಳ ಪೈಕಿ 6 ಪಂದ್ಯ​ಗ​ಳನ್ನು ಆಡಿ​ರುತ್ತದೆ. ಒಂದೊಮ್ಮೆ ಮುಂಬೈ ಸೂಪರ್‌ ಲೀಗ್‌ಗೆ ಪ್ರವೇ​ಶಿಸಿದರೆ, ಪೃಥ್ವಿ ಆಯ್ಕೆ ತಂಡದ ಬಲ ಹೆಚ್ಚಿ​ಸ​ಲಿ​ದೆ.