* ಕೊರೋನಾ ವೈರಸ್ ಅಟ್ಟಹಾಸಕ್ಕೆ ಪೀಯೂಸ್ ಚಾವ್ಲಾ ತಂದೆ ನಿಧನ* ಪೀಯೂಸ್ ಚಾವ್ಲಾ ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್‌* ಸಾಮಾಜಿಕ ಜಾಲತಾಣದ ಮೂಲಕ ತಂದೆಯ ನಿಧನವನ್ನು ಖಚಿತಪಡಿಸಿದ ಮುಂಬೈ ಇಂಡಿಯನ್ಸ್ ಸ್ಪಿನ್ನರ್

ನವದೆಹಲಿ(ಮೇ.10): ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಪೀಯೂಸ್ ಚಾವ್ಲಾ ತಂದೆ ಪ್ರಮೋದ್‌ ಕುಮಾರ್‌ ಅವರನ್ನು ಸೋಮವಾರ(ಮೇ.10) ಕೋವಿಡ್ ಹೆಮ್ಮಾರಿ ಬಲಿಪಡೆದಿದೆ. ಕೋವಿಡ್ ದೃಢಪಟ್ಟ ಬೆನ್ನಲ್ಲೇ ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಮೋದ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇನ್ನೆಂದಿಗೂ ನನ್ನ ಜೀವನ ಮೊದಲ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ನನ್ನ ಶಕ್ತಿಯ ಆಧಾರಸ್ತಂಭವನ್ನೇ ಇಂದು ಕಳೆದುಕೊಂಡಿದ್ದೇನೆಂದು ಚಾವ್ಲಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

https://www.instagram.com/p/COrb35zlwud/?utm_source=ig_web_copy_link

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ಚಾವ್ಲಾ ತಂದೆಯ ನಿಧನಕ್ಕೆ ಟ್ವೀಟ್‌ ಮೂಲಕ ಕಂಬನಿ ಮಿಡಿದಿದ್ದಾರೆ.

Scroll to load tweet…

ಪೀಯೂಸ್ ಚಾವ್ಲಾ ಅಂಡರ್ 19 ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ 2006ರಲ್ಲಿ ಚಾವ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಚಾವ್ಲಾ ಇದುವರೆಗೂ ಟೀಂ ಇಂಡಿಯಾ ಪರ 3 ಟೆಸ್ಟ್‌, 25 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದಾರೆ. 2012ರಲ್ಲಿ ಕಡೆಯ ಬಾರಿಗೆ ಪೀಯೂಸ್ ಚಾವ್ಲಾ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಪೀಯೂಸ್ ಚಾವ್ಲಾ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರು ಕೂಡಾ ಹೌದು.

ಕೊರೋನಾ ಅಟ್ಟಹಾಸಕ್ಕೆ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಕೂಡಿಕೊಂಡಿದ್ದ ಚಾವ್ಲಾಗೆ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ. ರಾಹುಲ್ ಚಹಾರ್ ಅದ್ಭುತ ಫಾರ್ಮ್‌ನಲ್ಲಿದ್ದುದರಿಂದ ಪೀಯೂಸ್ ಚಾವ್ಲಾ ಬೆಂಚ್ ಕಾಯಿಸಬೇಕಾಗಿ ಬಂದಿತ್ತು.

ಕೆಲವು ದಿನಗಳ ಹಿಂದಷ್ಟೇ ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೇವಲ 10 ದಿನಗಳ ಅಂತರದಲ್ಲಿ ತಾಯಿ ಚಲುವಾಂಬ ಹಾಗೂ ಸಹೋದರಿ ವತ್ಸಲಾ ಕೃಷ್ಣಮೂರ್ತಿಯವರನ್ನು ಕೋವಿಡ್ ಕಾರಣದಿಂದಾಗಿ ಕಳೆದುಕೊಂಡಿದ್ದರು.