ಆತ್ಮಹತ್ಯೆ ಮಾಡಿಕೊಳ್ಳಲು ಬಾಲ್ಕನಿ ಮುಂದೆ ನಿಂತಿದ್ದ ಟೀಂ ಇಂಡಿಯಾ ಕ್ರಿಕೆಟಿಗ..! ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಸ್ನೇಹಿತ

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರೊಬ್ಬರು ಜೀವನದಲ್ಲಿ ಬೇಸತ್ತು ಆತ್ಮಹತ್ಯಗೆ ಮುಂದಾದ ವಿಚಾರವನ್ನು ಅವರ ಆತ್ಮೀಯ ಸ್ನೇಹಿತ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

Team India Cricketer Mohammed Shami friend opens up on his suicide attempt kvn

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ವೃತ್ತಿಜೀವನ ಮಾತ್ರವಲ್ಲ ವೈಯುಕ್ತಿಕ ಜೀವನದಲ್ಲೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ವೈಯುಕ್ತಿಕ ಜೀವನದಲ್ಲಿ ಅನುಭವಿಸಿದ ನೋವು ಹಾಗೂ ಸಂಕಟಗಳಿಂದ ಕಂಗಾಲಾಗಿ ಹೋಗಿದ್ದ ಶಮಿ, ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದರು ಎಂದು ಸ್ವತಃ ಅವರೇ ಹೇಳಿದ್ದರು. ಈ ವಿಚಾರವಾಗಿ ಶಮಿ ಆತ್ಮೀಯ ಸಹಿತ ಉಮೇಶ್ ಕುಮಾರ್ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ

2018ರ ಮಾರ್ಚ್‌ ತಿಂಗಳಿನಲ್ಲಿ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಡಿವೋರ್ಸ್‌ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಶಮಿ, ಈ ಎಲ್ಲಾ ಆರೋಪಗಳು ಆಧಾರರಹಿತವಾದದ್ದು ಹಾಗೂ ತಮ್ಮ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು 33 ವರ್ಷದ ಶಮಿ ಹೇಳಿದ್ದರು.

ಇನ್ನು ಇದೆಲ್ಲದರ ನಡುವೆ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಪಾಕಿಸ್ತಾನ ಎದುರು ಶಮಿ ನೀರಸ ಪ್ರದರ್ಶನ ತೋರಿದ್ದರು. ಇದರ ಬೆನ್ನಲ್ಲೇ ಕೆಲವರು ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಹೊರಿಸಿದ್ದರು. ಇದಷ್ಟೇ ಅಲ್ಲದೇ ಧರ್ಮದ ಆಧಾರದಲ್ಲಿ ಶಮಿ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. 

ಮಹಿಳಾ ಏಷ್ಯಾಕಪ್‌: ಹ್ಯಾಟ್ರಿಕ್‌ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ

ಮೊಹಮ್ಮದ್ ಶಮಿಯು ಸಂಕಷ್ಟದಲ್ಲಿದ್ದಾಗ ಅವರ ಆತ್ಮೀಯ ಸ್ನೇಹಿತರಾಗಿದ್ದ ಉಮೇಶ್ ಕುಮಾರ್, ಆ ಘಟನೆಯನ್ನು ಮೆಲುಕು ಹಾಕಿದ್ದಾರೆ. ಉತ್ತರಖಂಡ ವಿಧಾನಸಭಾ ಸದಸ್ಯರೂ ಆಗಿರುವ ಉಮೇಶ್ ಕುಮಾರ್, ಶಮಿ ಮೇಲಿನ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.

"ಶಮಿ ಆ ಹಂತದಲ್ಲಿ ಎಲ್ಲದರ ವಿರುದ್ಧ ಹೋರಾಡಿದರು. ಆ ಸಂಕಷ್ಟದ ಸಮಯದಲ್ಲಿ ಅವರು ನಮ್ಮ ಮನೆಯಲ್ಲಿಯೇ ವಾಸವಾಗಿದ್ದರು. ಆದರೆ ಯಾವಾಗ ಮೊಹಮ್ಮದ್ ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಬಂತೋ, ಆ ಕ್ಷಣ ಅವರು ಕುಸಿದು ಹೋದರು. ನಾನು ಎಲ್ಲವನ್ನೂ ಸಹಿಸಿಕೊಳ್ಳಬಲ್ಲೇ, ಆದರೆ ದೇಶದ್ರೋಹದ ಆರೋಪವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಮಿ ಹೇಳಿದ್ದರು ಎಂದು ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಉಮೇಶ್ ಹೇಳಿದ್ದಾರೆ.

KKR ಅಲ್ಲವೇ ಅಲ್ಲ, ಈ ಐಪಿಎಲ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್; ಪ್ರಕಟಣೆಯೊಂದೇ ಬಾಕಿ..?

ಆ ರಾತ್ರಿ (ಅವರ ಜೀವನವನ್ನು ಕೊನೆಗೊಳಿಸಲು) ಅವರು ಏನಾದರೂ ತೀವ್ರವಾದದ್ದನ್ನು ಮಾಡಲು ಬಯಸಿದ್ದರು ಎಂದು ಸುದ್ದಿಯೂ ಬಂದಿತು. ನಾನು ನೀರು ಕುಡಿಯಲು ಎದ್ದಾಗ ಬೆಳಗಿನ ಜಾವ ಸುಮಾರು 4 ಗಂಟೆಯಾಗಿತ್ತು. ನಾನು ನೀರು ಕುಡಿಯಲು ಅಡುಗೆ ಮನೆಗೆ ಹೋಗುತ್ತಿದ್ದೆ, ಆಗ ಶಮಿ ಮನೆಯ ಬಾಲ್ಕನಿಯ ಮುಂದೆ ನಿಂತಿದ್ದರು. ನಾವಿದ್ದ ಮನೆ 19ನೇ ಪ್ಲೋರ್‌ನಲ್ಲಿತ್ತು. ಏನಾಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬಂದಿತು. ನನಗನಿಸುತ್ತೇ, ಅಂದೇ ಶಮಿ ಪಾಲಿಗೆ ಕೊನೆಯ ದಿನ ಆಗುವ ಸಾಧ್ಯತೆಯಿತ್ತು. ಇದಾಗಿ ಸ್ವಲ್ಪ ದಿನಗಳ ನಂತರ ನಾವಿಬ್ಬರೂ ಹೀಗೆ ಮಾತನಾಡುತ್ತಿದ್ದಾಗ ಶಮಿಗೆ ಒಂದು ಮೆಸೇಜ್ ಬಂದಿತು. ಮ್ಯಾಚ್ ಫಿಕ್ಸಿಂಗ್ ಕುರಿತಾಗಿ ತನಿಖೆ ನಡೆಸಿದ್ದ ಕಮಿಟಿಯು ಕ್ಲೀನ್‌ಚಿಟ್ ನೀಡಿದ ಮೆಸೇಜ್‌ ಅದಾಗಿತ್ತು. ಅದನ್ನು ನೋಡಿದ ಶಮಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಹುಶಃ ವಿಶ್ವಕಪ್ ಗೆದ್ದಾಗಲೂ ಆಗಬಹುದಾಗಿದ್ದ ಸಂತೋಷಕ್ಕಿಂತ ಹೆಚ್ಚಿನ ಸಂತೋಷವನ್ನು ಅಂದು ಶಮಿ ಅವರಲ್ಲಿ ಕಂಡೆ" ಎಂದು ಉಮೇಶ್ ಹೇಳಿದ್ದಾರೆ.

ಸದ್ಯ ಮೊಹಮ್ಮದ್ ಶಮಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ವಿಶ್ರಾಂತಿಗೆ ಜಾರಿದ್ದು, ಗಾಯದಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಕೇವಲ 7 ಪಂದ್ಯಗಳನ್ನಾಡಿ ದಾಖಲೆಯ 24 ವಿಕೆಟ್ ಕಬಳಿಸಿ ಮಿಂಚಿದ್ದರು. ಶಮಿ ಅದ್ಭುತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಆಸೀಸ್‌ಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ, ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Latest Videos
Follow Us:
Download App:
  • android
  • ios