Asianet Suvarna News Asianet Suvarna News

ಹಿರಿ​ಯರ ಕ್ರಿಕೆಟ್‌ ವಿಶ್ವ​ಕಪ್‌: ಮೊದಲ ಬಾರಿ ಭಾರತ ಸ್ಪರ್ಧೆ

ಇದೇ ಮೊದಲ ಬಾರಿಗೆ 50 ವರ್ಷ ಮೇಲ್ಪಟ್ಟವರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳುತ್ತಿದ್ದು, ಭಾರತ ತಂಡ​ವನ್ನು ಶೈಲೇಂದ್ರ ಸಿಂಗ್‌ ಮುನ್ನ​ಡೆ​ಸ​ಲಿ​ದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ

Team India Cricket Team to Take Part in World Cup For Over 50 Year Olds
Author
New Delhi, First Published Dec 4, 2019, 12:56 PM IST

ನವ​ದೆ​ಹ​ಲಿ[ಡಿ.04]: ಇದೇ ಮೊದಲ ಬಾರಿಗೆ 50 ವರ್ಷ ಮೇಲ್ಪಟ್ಟವರ ಕ್ರಿಕೆಟ್‌ ವಿಶ್ವ​ಕಪ್‌ನಲ್ಲಿ ಭಾರತ ತಂಡ ಪಾಲ್ಗೊ​ಳ್ಳ​ಲಿದೆ. 2020ರ ಮಾ.11ರಿಂದ 24ರ ವರೆ​ಗೂ ದಕ್ಷಿಣ ಆಫ್ರಿ​ಕಾ​ದಲ್ಲಿ ಟೂರ್ನಿ ನಡೆ​ಯ​ಲಿದೆ. ಭಾರತ ತಂಡ ‘ಬಿ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿದ್ದು, ಅದೇ ಗುಂಪಿ​ನಲ್ಲಿ ಪಾಕಿ​ಸ್ತಾನ, ಇಂಗ್ಲೆಂಡ್‌, ದ.ಆ​ಫ್ರಿಕಾ, ನಮೀ​ಬಿಯಾ ತಂಡ​ಗಳು ಸ್ಥಾನ ಪಡೆ​ದಿವೆ. 

ವಾಹನ ಚಾಲ​ಕನ ಮಗ ಈಗ ಅಂಡರ್-19 ವಿಶ್ವ​ಕಪ್‌ ತಂಡದ ನಾಯ​ಕ!

‘ಎ’ ಗುಂಪಿ​ನಲ್ಲಿ ಆಸ್ಪ್ರೇ​ಲಿಯಾ, ವೆಸ್ಟ್‌ಇಂಡೀಸ್‌, ನ್ಯೂಜಿ​ಲೆಂಡ್‌, ಶ್ರೀಲಂಕಾ, ವೇಲ್ಸ್‌ ತಂಡ​ಗ​ಳಿವೆ. ಮಾ.5ರಂದು ಇಂಗ್ಲೆಂಡ್‌ ವಿರುದ್ಧ ಭಾರತ ತನ್ನ ಮೊದಲ ಪಂದ್ಯ​ವನ್ನು ಆಡ​ಲಿದೆ. ಭಾರತ ತಂಡ​ವನ್ನು ಶೈಲೇಂದ್ರ ಸಿಂಗ್‌ ಮುನ್ನ​ಡೆ​ಸ​ಲಿ​ದ್ದಾರೆ. ಶೈಲೇಂದ್ರ, ಬಾಂಬೆ ಜಿಮ್ಖಾನಾ ತಂಡವನ್ನು 15ಕ್ಕೂ ಹೆಚ್ಚು ವರ್ಷ​ಗ​ಳ ಕಾಲ ಮುನ್ನ​ಡೆ​ಸಿದ ಅನುಭವ ಹೊಂದಿ​ದ್ದಾರೆ. ಇಂಗ್ಲೆಂಡ್‌ ಹಾಗೂ ಸ್ಕಾಟ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಸಹ ಆಡಿ​ದ್ದರು.

ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ವಿಶ್ವ-ಏಷ್ಯಾ ಕ್ರಿಕೆಟ್‌ ಫೈಟ್‌?

ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌, ತಂಡಕ್ಕೆ ಶುಭ ಕೋರಿ​ದ್ದಾರೆ. ಟೂರ್ನಿ​ಯನ್ನು ಬೆಂಬ​ಲಿ​ಸು​ವು​ದಾಗಿ ಕಪಿಲ್‌ ಹೇಳಿ​ದ್ದಾರೆ. 2018ರಲ್ಲಿ ಮೊದಲ ಆವೃ​ತ್ತಿಯ ವಿಶ್ವ​ಕಪ್‌ ನಡೆ​ದಿತ್ತು. ಸಿಡ್ನಿ​ಯಲ್ಲಿ ನಡೆ​ದಿದ್ದ ಟೂರ್ನಿ​ಯನ್ನು ಆಸ್ಪ್ರೇಲಿಯಾ ಗೆದ್ದು​ಕೊಂಡಿತ್ತು. ಈ ಟೂರ್ನಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ)ಯಿಂದ ಮಾನ್ಯ​ತೆ ಪಡೆ​ದಿಲ್ಲ.
 

Follow Us:
Download App:
  • android
  • ios