ಸದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಹೆಗ್ಗಳಿಕೆ ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರೀಡಾಂಗಣ ಸಲ್ಲುತ್ತಿದೆ. ಆದರೆ ಕೆಲವೇ ದಿನಗಳಲ್ಲಿ ಈ ಪಟ್ಟ ಭಾರತದ ಮೊಟೆರಾ ಕ್ರೀಡಾಂಗಣಕ್ಕೆ ಸಿಗಲಿದೆ. ಅಹಮ್ಮದಾಬಾದ್‌ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆಗೆ ಸಜ್ಜಾಗಿದೆ.
ಮುಂಬೈ(ಡಿ.03): ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಅಹ್ಮದಾಬಾದ್ನಲ್ಲಿ ಉದ್ಘಾಟನೆಗೆ ಸಿದ್ಧವಾಗುತ್ತಿದ್ದು, ಮುಂದಿನ ಮಾರ್ಚ್‌ನಲ್ಲಿ ಏಷ್ಯಾ ಹಾಗೂ ವಿಶ್ವ ಇಲೆವನ್ ಪ್ರದರ್ಶನ ಪಂದ್ಯವನ್ನು ಆಯೋಜಿಸಲು ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಯೋಜನೆ ರೂಪಿಸಿದೆ. ‘ಮೊಟೇರಾ’ ಸರ್ದಾರ್ ಪಟೇಲ್ ಮೈದಾನದ ಆಸನ ಸಾಮರ್ಥ್ಯ, ಮೂಲ ಸೌಕರ್ಯಗಳನ್ನು 700 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
ಇದನ್ನೂ ಓದಿ: ವಿಶ್ವದ ಅತೀ ದೊಡ್ಡ, ಮೋದಿ ಕನಸಿನ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆಗೆ ರೆಡಿ!
1ಲಕ್ಷದ 24 ಸಾವಿರ ಆಸನ ಸಾಮರ್ಥ್ಯದ ಆಸ್ಪ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನ ಪ್ರಸ್ತುತ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದೆ. ಆದರೆ 1ಲಕ್ಷದ 10 ಸಾವಿರ ಆಸನ ಸಾಮರ್ಥ್ಯವಿರುವ ನೂತನ ಸರ್ದಾರ್ ಪಟೇಲ್ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ‘ಏಷ್ಯಾ- ವಿಶ್ವ ಇಲೆವನ್ ಪಂದ್ಯ ನಡೆಸಲಿದ್ದು, ಐಸಿಸಿ ಅಂಗೀಕಾರ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕನಸು; ಮೊಟೆರಾ ಕ್ರೀಡಾಂಗಣಕ್ಕೆ ಹೊಸ ರೂಪ!...
2017ರ ಜನವರಿಯಲ್ಲಿ ಮೊಟೆರಾ ಕ್ರೀಡಾಂಗಣ ನವೀಕರಣ ಆರಂಭಗೊಂಡಿತು. ಸತತ 2 ವರ್ಷಗಳ ಅಭಿವೃದ್ಧಿ ಕಾಮಕಾರಿ ನಡೆದಿತ್ತು. ಇದೀಗ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. 2020ರ ಆರಂಭದಲ್ಲಿ ಮೊಟೆರಾ ಕ್ರೀಡಾಂಗಣ ಲೋಕಾರ್ಪಣೆಗೊಳ್ಳಲಿದೆ.
