ಮುಂಬೈ(ನ.10):  ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಟ್ರಕ್ಕಿಂಗ್, ಸುತ್ತಾಟದಲ್ಲಿ ತೊಡಗಿದ್ದಾರೆ. ಇತ್ತೀಚೆಗಷ್ಟೇ ಭೂತಾನ್‌ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಅಭ್ಯಾಸಕ್ಕೆ ಮರಳಲಿದ್ದಾರೆ. ಇದೀಗ ಕೊಹ್ಲಿ ವಿದಾಯದ ನಂತರದ ಪ್ಲಾನ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ರೈನಾಗೆ ಭವೇಶ್ ಎಂದ ಕೊಹ್ಲಿ; ಸೀಕ್ರೆಟ್ ಬಹಿರಂಗ ಪಡಿಸಲು ಫ್ಯಾನ್ಸ್ ಆಗ್ರಹ!

ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಟೆಸ್ಟ್ ,ಸರಣಿಗೆ ಹಿಂತಿರುಗಲಿದ್ದಾರೆ. ಖಾಸಗಿ ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ, ವಿದಾಯದ ಬಳಿಕ ತಾವು ಅಡುಗೆ ಕೌಶಲ್ಯವನ್ನು ಕಲಿಯುವುದಾಗಿ  ಹೇಳಿದ್ದಾರೆ.

ಇದನ್ನೂ ಓದಿ: ವಿರಾಟ್ ಅಪರೂಪದ ದಾಖಲೆಯ ಮೆಲುಕು: ಇದು ಬರ್ತ್ ಡೇ ವಿಶೇಷ...!

ಚಿಕ್ಕಂದಿನಿಂದ ನಾನು ಪಂಜಾಬಿ ಆಹಾರಗಳನ್ನೇ ತಿನ್ನುತ್ತಾ ಬೆಳೆದಿದ್ದೇನೆ. ರಾಜ್ಮಾ ಚಾವಲ್, ಬಟರ್ ಚಿಕನ್, ನಾನ್ ಸೇರಿದಂತೆ ಹಲವು ತನಿಸುಗಳನ್ನು ತಿಂದು ಬೆಳೆದಿದ್ದೇನೆ. ಬೀದಿ ಬದಿಯ ಜಂಕ್ ಫುಡ್ ಕೂಡ ಹೆಚ್ಚು ಸೇವಿಸುತ್ತಿದ್ದೆ. ಇದೀಗ ಕ್ರಿಕೆಟ್‌ ಸಲುವಾಗಿ ಹಲವು ತಿನಿಸುಗಳನ್ನು ತಿನ್ನುವುದಿಲ್ಲ. ನನಗೆ ಅಡುಗೆ ಮಾಡಲು ಬರುವುದಿಲ್ಲ. ಆದರೆ ತನಿಸುಗಳು ಎಷ್ಟು ಉತ್ತಮವಾಗಿದೆ, ಫ್ಲೇವರ್ ಹೇಗಿಜದೆ ಎಂಬುದನ್ನು ಗ್ರಹಿಸಬಲ್ಲೆ ಎಂದು ಕೊಹ್ಲಿ ಹೇಳಿದ್ದಾರೆ.

ಅಡುಗೆ ನನಗೆ ಬರುವುದಿಲ್ಲ. ಹೀಗಾಗಿ ವಿದಾಯದ ಬಳಿಕ ನಾನು ಅಡುಗೆ ಮಾಡುವುದನ್ನು ಕಲಿಯುತ್ತೇನೆ. ಹೊಸ ಹೊಸ ತನಿಸುಗಳನ್ನು ಪ್ರಯೋಗ ಮಾಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ ತಾವು ವಿದಾಯದ ಬಳಿಕ ಪತ್ನಿ ಜೊತೆ ಹಾಯಾಗಿ ಕಳೆಯಲು ಇಷ್ಟುಪುಡುವಾಗಿ ಪರೋಕ್ಷವಾಗಿ ಹೇಳಿದ್ದಾರೆ.
ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ